Skip to main content
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಬೆಂಗಳೂರು ಕೇಂದ್ರ ಪ್ರಯೋಗಿಸುವ ಕರ್ನಾಟಕ ಕಲಾಗ್ರಾಮ: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಆಸ್ತಿತ್ವಕ್ಕೆ ಬಂದಿರುವ ಕಲಾಗ್ರಾಮ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕನಸು. ಈ ಕಲಾಗ್ರಾಮವು ಕರ್ನಾಟಕದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈಭವಗಳನ್ನು ಹಾಗೂ ರಾಜ್ಯ ದೃಶ್ಯಕಲೆ. ಶಿಲ್ಪಕಲೆ, ಗ್ರಾಫಿಕ್ಸ್ ಮತ್ತು ಸಂಗೀತ-ನೃತ್ಯ ಹಾಗೂ ಜನಪದ ಕಲಾಪ್ರಕಾರಗಳಿಗೆ, ಕಲಾವಿದರಿಗೆ ನೆಲೆಯಾಗಿರುವುದು. ಹಾಗೂ ದೇಶದ ಪ್ರತಿಪ್ಠಿತ ರಾಷ್ಟ್ರೀಯ ನಾಟಕ ಶಾಲೆ, ನವ ದೆಹಲಿಯ ಬೆಂಗಳೂರು ಕೇಂದ್ರ ಇಲ್ಲಿಯೇ ಇರುವುದು ಹೆಮ್ಮಯ ಸಂಗತಿಯಾಗಿದೆ. ಈ ಕಲಾಗ್ರಾಮವನ್ನು ಬೆಂಗಳೂರಿನ ಸಂಸ್ಕೃತಿಕ ಭೂಪಟದಲ್ಲಿ ಮಲೆಗಳಲ್ಲಿ ಮದುಮಗಳು ನಾಟಕವೇ ಪರಿಚಯಿಸಿತು ಎನ್ನುವದು ಅತಿಶಯೋಕ್ತಿಯಲ್ಲ .

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಮತ್ತೋಮ್ಮೆ ಮದುಮಗಳು ನಾಟಕ ಪ್ರಯೋ್ ಈ ಕಲಾಗ್ರಾಮ ಆವರಣವನ್ನು ಮಾಂತ್ರಿಕ ನೆಲವಾಗಿ ಪರಿವರ್ತಿಸಲು ಸಜ್ಜಾಗಿದೆ. ಈ ಅವತರಣಿಕೆಯ 24 ಪ್ರದರ್ಶನಗಳ ಮೂಲಕ ಅಹೋರಾತ್ರಿ 9 ಗಂಟೆಗಳ 109 ಪ್ರದರ್ಶನಗಳನ್ನು ಪೂರೈಸುತ್ತಿದೆ. ಇದು ರಾಷ್ಟ್ರೀಯ ನಾಟಕ ಶಾಲೆಯ ಮಹತ್ವದ ಪ್ರಯೋಗವಾಗಿದೆ. ಫೆಬ್ರವರಿ 14,2020 ರಂದು 100 ರ ಪ್ರದರ್ಶನವಾಗಲಿದೆ. ಮಲೆಗಳಲ್ಲಿ ಮದುಮಗಳು ನೂರರ ಸಂಭ್ರಮ ಕನ್ನಡ ನಾಟಕ ಪರಂಪರೆ ಕೇವಲ ಒಳಾಂಗಣದ ಚೌಕಟ್ಟಿನ ರಂಗಮಂದಿರಗಳಲ್ಲಿ ಬಂದಿಯಾಗಿ ಏಕತಾನತೆಯಿಂದ ನಲಗುತ್ತಿದೆ. ಪ್ರದರ್ಶನ ಕಲಾಮಧ್ಯಮಗಳೂ ಸಹ ‘ಪಾಶ್ಚಶ್ಯರ ಪ್ರೊಸೇನಿಯಂ ಪ್ರೇಮ್ ಗೆ’ ತನ್ನ ವಿನ್ಯಾಸಗಳನ್ನು ಹೊಂದಿಸಿಕೊಳ್ಳಲು ಹೆಣಗುತ್ತಿದೆ. ಚೌಕಟ್ಟುಗಳಿಲ್ಲದ ತೆರಪಿನ ರಂಗದಂಗಳಕ್ಕೆ ನಾಟಕ ಮತ್ತು ಪ್ರೇಕ್ಷಕರನ್ನು ಕರೆತರುವ ಹೊಸ ಪ್ರಯತ್ನಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿ ಮಲೆಗಳಲ್ಲಿ ಮದುಮಗಳು ಕನ್ನಡ ರಂಗಭೂಮಿಗೆ ಹೊದಗಾಳಿ, ಬೆಳಕನ್ನು ತರುವ ಮೂಲಕ ನಾಡಿನ ಜನರ ಮನಗೆದ್ದಿದೆ. ಮೈಸೂರಿನಲ್ಲಿ ರಂಗಾಯಣದ ಮೂಲಕ ಮಲೆಗಳಲ್ಲಿ ಮದುಮಗಳ ರಂಗಪಯಣ ಆರಂಭವಾಗಿ ಬೆಂಗಳೂರಿನ ಕಲಾಗ್ರಾಮದಲ್ಲಿ ಈವರೆವಿಗೂ 85 ಪ್ರದರ್ಶಗಳನ್ನು ಕಂಡ ಮತ್ತೆ 58 ಪ್ರದರ್ಶನಗಳಿಗೆ ಮದುಮಗಳು ಸಜ್ಜಾಗಿದ್ದಾಳೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ರಾಷ್ಟ್ರಕವಿ ಕುವೆಂಪು ಮೂಲಕ ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ಒಂದು 50 ವರ್ಷಗಳು ತುಂಬಿದೆ. ಹಾಗೂ ಮಲೆಗಳಲ್ಲಿ ಮದುಮಗಳು ಕಾದಂಬರಿ ರಚನೆಗೊಂಡ ಸುವರ್ಣ ಸಂಭ್ರಮ ಮುಗಿದಿದೆ. ಮತ್ತೊಮ್ಮೆ ಮಲೆಗಳಲ್ಲಿ ಮದುಮಗಳು 9 ಗಂಟೆಗಳ ಆಹೋರಾತ್ತಿ ಪ್ರದರ್ಶನ ಜನವರಿ 20 ರಿಂದ ಆರಂಭವಾಗಿ ಫೆಬ್ರವರಿ 29 ರ ವರೆಗೆ ಪ್ರದರ್ಶಿಸುವ ಮೂಲಕ ನೂರರ ಸಂಭ್ರಮವನ್ನು ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಚರಿಸುತ್ತಿದೆ. ಈ ಸಂಭ್ರಮದಲ್ಲಿ ನಾಟಕ ನೋಡವುದರ ಮೂಲಕ ತಾವೂ ಪಾಲ್ಗೊಂಡು ಯಶಸ್ವಗೊಳಿಸಲು ಸಮತ್ತ ನಾಡಿನ ಜನತೆಗೆ ಹಾಗೂ ಸಾಂಸ್ಕೃತಿಕ ಮನಸ್ಸುಗಳಿಗೆ ಪ್ರೀತಿ ಪೂರ್ವಕ ಆಹ್ವಾನ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಮಲೆಗಳಲ್ಲಿ ಮದುಮಗಳು

ಸಾರಾಂಶ: ರಾಷ್ಟ್ರಕವಿ ಕುವೆಂಪು ಅವರು ಬರೆದ ಮಲೆಗಳಲ್ಲಿ ಮದುಮಗಳು ಕಾದಂಬರಿ ಕನ್ನಡ ಭಾಷೆಯ ವಿಸ್ಮಯಗಳಲ್ಲಿ ಒಂದು. ಹತ್ತೊಂಬತ್ತನೆಯ ಶತಮಾನದ ಕೊನೆಯ ಪಾದದ ಮಲೆನಾಡಿನ ಕತೆ ಇದು. ನಿಸರ್ಗದ ನಿಗೂಢಗಳ ತಾಣದಲ್ಲಿ ಹುಲಿಕಲ್ಲು ಗುಡ್ಡದ ಸುತ್ತ ಇರುವ ಹಳ್ಳಿಗಳ ಜೀವ ಜಾಲದ ಬದುಕಿನ ವಿವರಗಳೇ ಮೂರ್ತಗೊಂಡಿರುವ ಅನನ್ಯ ಕಥನ. ಆಧುನಿಕತೆಯ ಪ್ರವೇಶವು ಭಾರತೀಯ ಗ್ರಾಮ ಸಮಾಜದ ಬದುಕಿನಲ್ಲಿ ತಂದ ಸಾಮಾಜಿಕ ತಲ್ಲಣಗಳ ನಿರೂಪಣೆಯೆ ಈ ಬರಹದ ಜೀವಾಳ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಇದು ಆರು ತಿಂಗಳ ಅವಧಿಯಲ್ಲಿ ನಡೆಯುವ ಕಥಾನಕವಾದರೂ ಹಲವು ಪ್ರಯಾಣಗಳನ್ನು ಮೆಯಾಗಿ ಪಡೆದಿರುವ ಕಾದಂಬರಿ. ಮಲೆಗಳಲ್ಲಿ ಮದುಮಗಳಿ ಕನ್ನಡ ಸಂವೇದನೆಯನ್ನು ಮಸೆಯುಬ ಕಲ್ಲಾಗಿರುವದು ಕನ್ನಡಿಗರ ಪುಣ್ಯ 5ನೇ ಬಾರಿ ಮಲೆಗಳಲ್ಲಿ ಮದುಮಗಳು ಪ್ರಯೋಗವನ್ನು ಅಣಿಗೊಳಿಸುತ್ತಿರುವ ರಂಗ ಕಸಬುದಾರರ ಪರಿಚಯ:- ರಂಗರೂಪ : ಡಾ. ಕೆ.ವೈ ನಾರಾಯಣಸ್ವಾಮಿ ರಂಹ ಸಜ್ಜಿಕೆ : ಶಶಿಧರ ಅಡಪ ವಸ್ತ್ರ ಮತ್ತು ಪರಿಕರ ವಿನ್ಯಾಸ : ಪ್ರಮೋದ್ ಶಿಗ್ಗಾಂವ್ ಮುಖವರ್ಣಿಕೆ : ರಾಮಕೃಷ್ಣ ಬೆಳ್ತೂರಕ ದಾಖಲೀಕರಣ : ಪ್ರವೀಣ್ ಮಲ್ನಾಡ್ ಮತ್ತು ತಾಯಿ ಲೋಕೇಶ್ ಬೆಳಕು ವಿನ್ಯಾಸ : ನಂದಕಿಶೋರ್ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ : ಉಮೇಶ್ ಸಂಗೀತ ನಿರ್ವಹಣೆ : ಗಜಾನನ ಟಿ ನಾಯ್ಕ ಸಂಗೀತ ಮತ್ತು ನಿರ್ದೇಶನ : ಹಂಸಲೇಖ ಪರಿಕಲ್ಪನೆ ಮತ್ತು ನಿರ್ದೇಶನ : ಸಿ. ಬಸವಲಿಂಗಯ್ಯ ಎನ್.ಎಸ್.ಡಿ.ಬೆಂಗಳೂರು ಸಿಬ್ಬಂದಿ ವರ್ಗ: ಕೆ.ಎಮ್ ಚಂದ್ರಶೇಖರ್ : ಕಾರ್ಯಕ್ರಮ ಸಂಯೋಜಕರು ಕುಸುಮಾ ಕೆ ಸಿ : ಹಿರಿಯ ದರ್ಜೆ ಸಹಾಯಕರು ಅರ್ಪಿತಾ ಬೆನಕನಹಳ್ಳಿ : ಕಿರಿಯ ದರ್ಜೆ ಸಹಾಯಕರು ಸಿದ್ದಪ್ಪಾ ದೊಡ್ಡಮನಿ : ಬಹುಕಾಯಕ ಸಿಬ್ಬಂದಿ ಸಹಯೋಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ನಿರ್ಮಾಣ : ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ ಕಲಾಗ್ರಾಮ ಬೆಂಗಳೂರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.