Skip to main content
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಬೆಂಗಳೂರು ಕೇಂದ್ರ ಪ್ರಯೋಗಿಸುವ ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಕಲಾಗ್ರಮದಲ್ಲಿ ಐದನೇಯ ಬಾರಿ 9 ಗಂಟೆಗಳ ರಾತ್ರಿ ಪೂರ ರಂಗಪ್ರಯೋಗ 2010 ಮೈಸೂರಿನ ರಂಗಾಯಣದಲ್ಲಿ ನಡೆದ, ಮಹಾಕವಿ ಕುವೆಂಪು ರವರ ‘ಮಲೆಗಳಲ್ಲಿ ಮದುಮಗಳು’ ನಾಟಕ, ಭಾರತೀಯ ರಂಗಭೂಮಿ ಇತಿಹಾಸಕ್ಕೆ ಒಂದು ಸುವರ್ಣ ಅಧ್ಯಾಯವನ್ನು ಸೇರಿಸಿತು. ಶ್ರೀ ಸಿ ಬಸವಲಿಂಗಯ್ಯರವರ ನಿರ್ದೇಶನದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆದ ಈ ಪ್ರಯೋಗವು ರಾಷ್ಟ್ರಾದ್ಯಂತ ರಂಗಾಸಕ್ತರ ಗಮನ ಸೆಳೆದಿತ್ತು. ಎಲ್ಲಾ ವಯೋಮಾನದ ನಾಟಕಾಸಕ್ತರ ಆಸಕ್ತಿಯನ್ನು ಕೆರಳಿಸಿದ ಈ ರಂಗ ಪವಾಡಕ್ಕೆ ಜನ ಸಾಗರವೇ ಹರಿದ ಬಂದಿತ್ತು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಈ ಪ್ರಯೋಗವು ರಂಗಭೂಮಿಯ ಪಾರಂಪರಿಕವಾದ ರಂಗ ಕಲ್ಪನೆ ಮತ್ತು ವಿನ್ಯಾಸಗಳನ್ನು ಒಡೆದು ಹಾಕಿತ್ತು. ಅಲ್ಲದೆ ಪ್ರೇಕ್ಷಕರ 180 ಡಿಗ್ರಿ ಕೋನದಲ್ಲಿ ರಂಗವನ್ನು ನೋಡುವ ಅನುಭವವನ್ನು 360 ಡಿಗ್ರಿಗೆಅ ವಿಸ್ತಾರಗೊಳಿಸಿತು. ಆ ಮೂಲಕ ಹೊಸ ರಂಗಾನೂಭೂತಿಯನ್ನು ನೀಡಿತು. ಇಂತಹ ಅಪೂರ್ವವೂ ಅನನ್ಯವೂ ಆದ ಪ್ರಯೋಗಕ್ಕೆ ಟಿಕೆಟ್ ಸಿಗದೆ ನಿರಾಶರಾದ ರಂಗಾಸಕ್ತರು ಮತ್ತು ಈ ಪ್ರಯೋಗವನ್ನು ನೋಡುವ ಆಸೆಯಿಂದ ಜನ ಘನ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಾಸಕ್ತರ ಆಸೆಯನ್ನು ಪೂರೈಸಲು ಬೆಂಗಳೂರಿನ ಕಲಾಗ್ರಾಮದ ಆವರಣದಲ್ಲಿ ಮತ್ತೆ ‘ ಮಲೆಗಳಲ್ಲಿ ಮದುಮಗಳು” ನಾಟಕವನ್ನು 2013 ರಲ್ಲಿ ನಡೆಸಲು ತೀಮರ್ಮಾನಿಸಿತು. ಈ ಎರಡನೆ ಅವತರಣಿಕಿಯೂ 25 ಯಶಸ್ವಿ ಪ್ರಯೋಗಗಳನ್ನು ಕಂಡಿತು. ಸರಿ ಸುಮಾರು 25 ಸಾವಿರ ರಸಿಕ ಜನ ಈ ಪ್ರಯೋಗಕ್ಕೆ ಸಾಕ್ಷಿಯಾದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಸುಮಾರು ಐವತ್ತು ಸಾವಿರ ಜನ ಮತ್ತೆ ‘ಮಲೆಗಳಲ್ಲಿ ಮದುಮಗಳು’ ಪ್ರಯೋಗದ ವೆಬ್ ಸೈಟನ್ನು ವೀಕ್ಷಿಸಿದರು. ನಂತರದಲ್ಲೂ ಮತ್ತೆ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಕಾತುರವನ್ನು ಹಂಚಿಕೊಂಡರು. ಘನ ಸರ್ಕಾರವು ಸಹೃದಯರ ಒತ್ತಾಸೆಯನ್ನು ಪೂರೈಸುವ ಸಲುವಾಗಿ ಮೂರನೇಯ ಬಾರಿ ಮತ್ತೊಮ್ಮೆ ಬಾರಿ ಮತ್ತೊಮ್ಮೆ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಪ್ರದರ್ಶಿಸಲಾಯಿತು. ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ನಡೆಯಿತು. ರಾಷ್ಟ್ರೀಯ ನಾಟಕ ಶಾಲೆಯ 20 ಕಲಾವಿದರಂದಿಗೆ ಕಳೆದ ರಂಹ ಪ್ರಯೋಗಗಳಲ್ಲಿ ಪಾತ್ರಮಾಡಿದ ಸುಮಾರು 50 ಕಲಾವಿದರ ಜೊತೆ, ಒಟ್ಟು 20 ಪ್ರಸರ್ಶನವನ್ನು ಅಣಿಗೊಳಿಸಲಾಗಿತ್ತು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ.

ಬೆಂಗಳೂರಿನಲ್ಲಿ ಈಗ ಸ್ಥಾಪಿತವಾಗಿರುವ ರಾಷ್ಟ್ರೀಯ ನಾಟಕ ಶಾಲೆಯ ರಂಗ ಅಭ್ಯಾಸಿಗಳು ಈ ರಂಗ ಪ್ರಯೋಗಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಈ ಮಹತ್ವದ ಪ್ರದರ್ಶನದ 5 ನೇ ಅವತರಣಕೆಗೆ ಅನುವಾಗುವಂತೆ ಕರ್ನಾಟಕ ಸರ್ಕಾರ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾನ್ಯ ಸಚಿವರಾದ ಶ್ರೀ.ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ. ಆರ್.ಆರ್.ಜನ್ನು ಭಾ.ಆ.ಸೇ. ರವರು ಮತ್ತು ನಿರ್ದೇಶಕರಾದ ಶ್ರೀ ಎಸ್.ರಂಗಪ್ಪ ಎಫ್.ಸಿ.ನ ಕ.ಆ.ಸೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ನಿರ್ದೇಶನದಂತೆ ಮದುಮಗಳನ್ನು ಶ್ರೀ ಸಿ. ಬಸವಲಿಂಗಯ್ಯರವರ ನಿರ್ದೇಶನದಲ್ಲಿ ನಡೆಸಲು ತೀರ್ಮಾನಿಸಿದೆ. ಹಾಗೂ ಹಿಂದಿನ ತಾಂತ್ರಾಕ ವರ್ಗದವರ ಜೊತೆ ಕೆಲ ಹಸ ತಂತ್ರಜ್ಞರನ್ನು ಒಳಗಳ್ಳೂವಂತೆ ಸೂಚಿಸಿತು. ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಕಲಾಗ್ರಾಮದಲ್ಲಿ 4 ರಂಗಗಳಲ್ಲಿ ಈ ಮಹತ್ವದ ಪ್ರಯೋಗವನ್ನು ರಾತ್ರಿ ಪೂರ ನೆಡೆಸಲು ನಿರ್ಧರಿಸಲಾಗಿದೆ. ಕಲಾಗ್ರಾಮದಲ್ಲಿ ಇರುವ ಕೆರೆಯಂಗಳರಂಗ, ಬಿರಿದುಮಳೆರಂಗ, ಬಯಲುರಂಗ ಮತ್ತು ಹೊಂಗೆರಂಗದಲ್ಲಿ ದಿನಾಂಕ 20.01.2020 ರಿಂದ ಮಾರ್ಚ್ 7 2020 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ರಾತ್ರಿ 8.30 ಕ್ಕೆ ಆರಂಭವಾಗುವ ನಾಟಕವು ಮುಂಜಾನೆ 5.30 ರವರೆಗೆ ನಡೆಯಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.