*ಗಣ್ಯರ ಉಪಸ್ಥಿತಿಯಲ್ಲಿ "ಕೇದಾರ್ ನಾಥ್ ಕುರಿಫಾರಂ" ಗೆ ಚಾಲನೆ.
*ಗಣ್ಯರ ಉಪಸ್ಥಿತಿಯಲ್ಲಿ "ಕೇದಾರ್ ನಾಥ್ ಕುರಿಫಾರಂ" ಗೆ ಚಾಲನೆ.
ಕಾಮಿಡಿ ಕಾರ್ಯಕ್ರಮವೊಂದರ ಮೂಲಕ ಮನೆಮಾತಾಗಿರುವ ನಟ ಮಡೇನುರ್ ಮನು ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ " ಕೇದಾರ್ ನಾಥ್ ಕುರಿಫಾರಂ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ವಸಂತನಗರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಖ್ಯಾತ ನಟ ವಸಿಷ್ಠ ಸಿಂಹ ಆರಂಭ ಫಲಕ ತೋರಿದರು. ನಿರ್ಮಾಪಕ ಪದ್ಮನಾಭ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕರಾದ ಸಂತು ಹಾಗೂ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದರು. ಜೆ.ಕೆ.ಮೂವೀಸ್ ಲಾಂಛನದಲ್ಲಿ ನಟರಾಜ್ ಕೆ.ಎಂ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರಾಜೇಶ್ ಸಾಲುಂಡಿ ಕಥೆ, ಚಿತ್ರಕಥೆ ಬರೆದಿದ್ದು, ಶ್ರೀನಿವಾಸ್ ಸಾಗರ್ ನಿರ್ದೇಶನ ಮಾಡುತ್ತಿದ್ದಾರೆ.
ಈ ಹಿಂದೆ "ಶಿರಾಲಿ ಕ್ರಾಸ್" ಚಿತ್ರ ನಿರ್ದೇಶಿಸಿರುವ ನಿರ್ದೇಶಕರಿಗೆ ಇದು ಎರಡನೇ ಚಿತ್ರ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಸನ್ನಿಧಾತ್ ಸಂಗೀತ ನೀಡುತ್ತಿದ್ದಾರೆ. ರಾಕೇಶ್ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಮಡೇನುರ್ ಮನು, ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ, ಮುತ್ತುರಾಜ್(ಕಾಮಿಡಿ ಕಿಲಾಡಿ), ಸುನಂದಾ ಹೊಸಪೇಟೆ, ಮಜಾಭಾರತ ನಿಂಗ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Recent comments