Skip to main content
ಸ್ಟಾರ್ ಸುವರ್ಣ ಜೇನುಗೂಡು ಎಂಬ ಅದ್ಭುತ ಪ್ರೇಮಕಾವ್ಯವನ್ನು ಫೆಬ್ರವರಿ 21ರಾತ್ರಿ 10ಗಂಟೆಗೆ ತೆರೆಗೆ ತರಲಿದೆ.

ಸ್ಟಾರ್ ಸುವರ್ಣ ಜೇನುಗೂಡು ಎಂಬ ಅದ್ಭುತ ಪ್ರೇಮಕಾವ್ಯವನ್ನು ಫೆಬ್ರವರಿ 21ರಾತ್ರಿ 10ಗಂಟೆಗೆ ತೆರೆಗೆ ತರಲಿದೆ.

ಸ್ಟಾರ್ ಸುವರ್ಣ ಜೇನುಗೂಡು ಎಂಬ ಅದ್ಭುತ ಪ್ರೇಮಕಾವ್ಯವನ್ನು ಫೆಬ್ರವರಿ 21ರಾತ್ರಿ 10ಗಂಟೆಗೆ ತೆರೆಗೆ ತರಲಿದೆ.

Kannada

ಜೇನುಗೂಡು ಸ್ಟಾರ್ ನೆಟ್ವರ್ಕ್ ನ ಅತ್ಯಂತ ಯಶಸ್ವಿಯಾದ ಧಾರಾವಾಹಿಯಾಗಿದೆ. ಸ್ಟಾರ್ ಜಲ್ಸಾ(ಬೆಂಗಾಲಿ) ಈ ಧಾರಾವಾಹಿಯನ್ನು ಮೊಟ್ಟಮೊದಲ ಬಾರಿಗೆ ೨೦೨೦ ರಲ್ಲಿ ಚೋರ್ಕಟೋ ಎಂಬ ಹೆಸರಿನಲ್ಲಿ ತೆರೆಗೆ ತಂದಿದ್ದು ಆನಂತರ ಅದನ್ನು ಅತೀ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಇತರೇ ಭಾಷೆಗಳಾದ ಮಲೆಯಾಳಂ, ಹಿಂದಿ, ಮರಾಠಿ, ತಮಿಳಿಗೆ ತರಲಾಯಿತು. ಈಗ ಇದನ್ನು ಕನ್ನಡಕ್ಕೆ ತರಲಾಗಿದೆ.

ಈ ಪ್ರೇಮಕಥೆಯಲ್ಲಿ ಆಧುನಿಕ ಮನೋಭಾವದ ಯುವತಿ,‌ ಮೊದಲು ತಾನು ಮದುವೆ ಆಗುವ ಹುಡುಗನ ಕುಟುಂಬದವರೊಂದಿಗೆ ಪ್ರೇಮಕಥೆಯಲ್ಲಿ ಬೀಳುತ್ತಾಳೆ. ನಂತರ ಆ ಹುಡುಗನ ಜೊತೆ‌ ಈ‌ ಕಥೆಯಲ್ಲಿ ಆಧುನಿಕ ಮನೋಭಾವದ ಈ ಹುಡುಗಿ ಮಧ್ಯಮವರ್ಗದ ವಿಜ್ಞಾನಿ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಾಗ ಅವಳ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಒಳಗೊಂಡಿದೆ.

Kannada

ನಡುಕೋಟಿ ಕುಟುಂಬದ ಮೂವರು ಅಣ್ಣತಮ್ಮಂದಿರ ಸ್ವಭಾವ ಬೇರೆಬೇರೆ ಅಗಿದ್ದರೂ, ಅವರು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತಾರೆ. ಈ ಕುಟುಂಬದವರು ಯಾವುದೇ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಬಿಟ್ಟು ಕೊಡದೆ ಹೊಂದಾಣಿಕೆ ಜೀವನ ನಡೆಸುತ್ತಿರುತ್ತಾರೆ. ಇವರ ಕುಟುಂಬ ಜೇನುಗೂಡಿನ ತರಹ ಬೇರೆಯವರಿಗೆ ಮಾದರಿಯಾಗುವಂತಹ ಕೂಡುಕುಟುಂಬವಾಗಿರುತ್ತದೆ. ಈ ಧಾರಾವಾಹಿಯ ನಾಯಕನಾಗಿರುವ ಎರಡನೇ ತಮ್ಮನ ಮಗ ಶಶಾಂಕನಿಗೆ ವಿಜ್ಞಾನಿಯಾಗಿ ಅಮೇರಿಕಾದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುತ್ತದೆ ಆದರೆ ಅವನ ಕುಟುಂಬಕ್ಕಾಗಿ ಅವನು ಆ ಅವಕಾಶವನ್ನು ತ್ಯಜಿಸುತ್ತಾನೆ.‌

ಇದಕ್ಕೆ ವ್ಯಕ್ತರಿಕ್ತವಾಗಿ ಹೀರೋಯಿನ್ ದಿಯಾ ಫೇಮಸ್ ಸರ್ಜನ್ ಶ್ರೀಧರ್ ಮೂರ್ತಿ ಅವರ ಮಗಳು. ಅವಳಿಗೆ ಈ ಕುಟುಂಬದ ಬಂಧಗಳ ಅರಿವೇ ಇರುವುದಿಲ್ಲ. ಏಕೆಂದರೆ ಅವರ ತಾಯಿ ಅವರ ಕೆಲಸಕ್ಕಾಗಿ ಅವಳನ್ನು ತ್ಯಜಿಸಿ ಅಮೆರಿಕಾಗೆ ಹೋಗಿರುತ್ತಾರೆ. ದಿಯಾಳನ್ನು ಅವರ ತಂದೆ ಹಾಗೂ ಅವರ ತಂದೆಯ ತಂಗಿ ಸಾರಿಕಾ ಪ್ರೀತಿಯಿಂದ ಬೆಳೆಸುರುತ್ತಾಳೆ. ಸಾರಿಕಾ ಗಂಡನಿಂದ ದೂರವಾಗಿ ಗಂಡನ ಮನೆಯಲ್ಲೇ ಇರುತ್ತಾಳೆ. ದಿಯಾ ಹಾಗೂ ಶಶಾಂಕ್ ಸದಾ ಜಗಳವಾಡುತ್ತಿರುತ್ತಾರೆ. ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ.

Kannada

ಆದರೆ ಇವರಿಬ್ಬರನ್ನು ಒಂದು ಮಾಡಲು ಎರಡೂ ಕುಟುಂಬದವರು ನಿರ್ಧರಿಸಿರುತ್ತಾರೆ. ಕೆಲವೊಂದು ಸಂದರ್ಭಗಳ ಒತ್ತಡಗಳಿಂದ ದಿಯಾ ಹಾಗೂ ಶಶಾಂಕ್ ಮದುವೆ ಆಗುತ್ತಾರೆ. ಮುಂದೆ ಕಥೆಯಲ್ಲಿ ದಿಯಾ ತಾನು ಮುಂದಿನ ವರ್ಷ ಪರೀಕ್ಷೆಯಲ್ಲಿ ಪಾಸು ಆದರೆ ಶಶಾಂಕನನ್ನು ಬಿಟ್ಟು ಬರುವ ಒಪ್ಪಂದ ಮಾಡಿಕೊಂಡಿರುತ್ತಾಳೆ. ಈ‌ ವಿಚಾರ ಕುಟುಂಬಕ್ಕೆ ತಿಳಿದಾಗ ಅವರು ದಿಯಾ ಪರೀಕ್ಷೆಯಲ್ಲಿ ಫೇಲ್ ಆಗಲಿ ಎಂದು ಬಯಸುತ್ತಾರೆ.

ಆದರೆ ಶಶಾಂಕ್ ಅವಳಿಂದ ಬಿಡುಗಡೆ ಪಡೆಯಲು ಅವಳು ಪಾಸ್ ಆಗಲಿ ಎಂದು ಬಯಸುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವರಿಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ರೇಖಾ ಕೆ.ಪಿ ಈ ಧಾರಾವಾಹಿಯ ನಿರ್ಮಾಪಕರಾಗಿದ್ದಾರೆ. ಅನಿಲ್ ನಿರ್ದೇಶಿಸುತ್ತಿದ್ದಾರೆ. ಆರವ್ ಮತ್ತು ನಿತ್ಯ (ಶಶಾಂಕ್ ಮತ್ತು ದಿಯಾ ಪಾತ್ರಧಾರಿಗಳು), ಈ ಧಾರಾವಾಹಿ ಅದ್ಭುತ ತಾರಾಗಣವನ್ನು ಹೊಂದಿದೆ. ವೀಣಾಸುಂದರ್, ರಮೇಶ್ ಪಂಡಿತ್ , ರವಿ ಭಟ್, ಶ್ರೀಕಾಂತ್ ಹೆಬ್ಳೀಕರ್ ಹಾಗೂ ಉತ್ತರ ಕರ್ನಾಟಕದ ಬಹಳಷ್ಟು ಕಲಾವಿದರನ್ನು ಒಳಗೊಂಡಿದೆ. ಈ ಧಾರಾವಾಹಿಯು ಉತ್ತರ ಕರ್ನಾಟಕದ ಸಂಸ್ಕೃತಿ, ಶೈಲಿ ಹಾಗೂ ಭಾಷೆಯನ್ನು ಒಳಗೊಂಡಿದೆ. ಇದು ವೀಕ್ಷಕರಿಗೆ ಒಂದು ಅದ್ಭುತವಾದ ಉತ್ತರ ಕರ್ನಾಟಕದ ‌ಔತಣವಾಗಿರುತ್ತದೆ. ಈ‌ ಜೇನುಗೂಡಿನಂತಹ‌ ಕುಟುಂಬ ವೀಕ್ಷಕರನ್ನು ಇದೇ 21ರ ಸೋಮವಾರ ರಾತ್ರಿ 10 ಗಂಟೆಗೆ ಸ್ಟಾರ್ ಸುವರ್ಣ ಮೂಲಕ ರಂಜಿಸಲು ಬರುತ್ತಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.