ಸರಳವಾಗಿ ಆಚರಣೆ ಮಾಡಿದ ಅಣ್ಣಾವ್ರ ಹುಟ್ಟುಹಬ್ಬ.
ಸರಳವಾಗಿ ಆಚರಣೆ ಮಾಡಿದ ಅಣ್ಣಾವ್ರ ಹುಟ್ಟುಹಬ್ಬ.

ಬೆಂಗಳೂರು :ಕನ್ನಡ ಚಿತ್ರರಂಗದ ಕಣ್ಮಣಿ,ರಸಿಕರ ರಾಜ,ಮುತ್ತು ರಾಜ,ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ,ಪದ್ಮ ಭೂಷಣ ,ನಟಸೌರಭೌಮ,ಕಲ ದೇವಿ ಪುತ್ರ ,ಕನ್ನಡ ಚಿತ್ರರಂಗದ ನಾಯಕ ನಟ ರಾಗಿದ್ದ ಕರ್ನಾಟಕದ ಡಾ .ರಾಜ್ ಕುಮಾರ್ ಅಣ್ಣಅವ್ರ ಜನುಮ ದಿನ,ಇಂದು ಕರ್ನಾಟಕ ಜನತೆಗೆ ಹಬ್ಬವೇ ಸರಿ, ಇಂತಹ ಮಹಾನ್ ವೆಕ್ತಿಯ ಹುಟ್ಟುಹಬ್ಬ ವಿಜೃಂಭಣೆಯಾಗಿ ಆಚರಣೆ ಯಾಗಬೇಕಿತ್ತು.
ಆದರೆ ಈ ಕೊರೋನಾ ಮಾಹಾಮಾರಿ ಯಿಂದಾಗಿ ಅಣ್ಣಾವ್ರಾ ಕುಟುಂಬದವರು ಸರಳವಾಗಿ ಈ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.

ಇಂದು ಡಾ.ಶಿವರಾಜ್ ಕುಮಾರ್ ಅವರು ಅಪ್ಪಾಜಿಯವರ ಸಮಾಧಿಗೆ ಭೇಟಿನಿಡಿ ಪೂಜೆ ಮಾಡಿ ಆಶೀರ್ವಾದ ಪಡೆದನಂತರ .ಮಾಧ್ಯಮಗಳ ಜೊತೆಗೆ ಮಾತನಾಡಿ, ಕೊರೋನಾ ಟೈಮ್ ಅಲ್ಲಿ ಅಪ್ಪಾಜಿ ಜನ್ಮ ದಿನ ಬಂದಿದೆ ಏನೂ ಮಾಡೋದಕ್ಕೆ ಆಗೋದಿಲ್ಲ ಎಲ್ಲವನ್ನೂ ಎದುರಿಸಬೇಕು.
ಇನ್ನೂ ನಾವೆಲ್ಲರೂ ಲಾಕ್ ಡೌನ್ ನಿಯಮಗಳನ್ನೂ ಪಾಲಿಸಲೇಬೇಕು ಅದು ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ ನೋವಿನಿಂದ ಹೇಳಿದರು ಕೂಡ ಏಪ್ರಿಲ್ ಅಲ್ಲಿ ಜನ್ಮ ದಿನ ಆಚರಿಸಲಿಕ್ಕೆ ಆಗದೇ ಇದ್ದರೇ, ಏನಂತೇ ಮೇ ಇದೆ ಜೂನ್ ಇದೆೆ ಆವಾಗ ಸೆಲೆಬ್ರೇಟ್ ಮಾಡಿದ್ರಾಯ್ತು ತಪ್ಪೇನು ಅಂದರು . ಇನ್ನು ಕೊರೋನಾದ ಬಗ್ಗೆ ಮಾತನಾಡಿದ ಶಿವಣ್ಣ ಅಭಿಮಾನಿಗಳು ಸೋಷಿಯಲ್ ಡಿಸ್ಟನ್ಸ್ ಕಾಯ್ದು ಕೊಳ್ಳಿ,ಆರಾಮ್ ಆಗಿ ಮನೆಯಲ್ಲಿರಿ. ಕೊರೋನಾಬಂದಿದೆ ಭಯಪಡ್ಬೇಡಿ ಬಂದಿದೆ ಹೋಗುತ್ತದೆ ಎಂದು ಹೇಳಿದರು . ಸದ್ಯ ಲಾಕ್ ಡೌನ್ ಟೈಮ್ ಅಲ್ಲಿ ಮನೆಯಲ್ಲಿಯೇ ಇದ್ದೇನೆ ಆಕ್ಟೀವ್ ಆಗಿದ್ದೇನೆ.ಸಿನಿಮಾ ನೋಡುತ್ತೇನೆ ಎರಡೂ ಹೊತ್ತು ಸಿನಿಮಾ ವರ್ಕೌಟ್ ಮಾಡುತ್ತೇನೆ ಎಂದು ಎಲ್ರಿಗೂ ಶುಭ ಹಾರೈಸಿದರು .
Recent comments