Skip to main content
ಪತ್ತಿನ ಸಹಾಕರ ಸಂಘಗಳ ಬ್ಯಾಂಕ್ ವತಿಯಿಂದ ಆಶಾ ಕಾರ್ಯಕರ್ತರಿಗೆ ಗೌರವ ಧನ.

ಪತ್ತಿನ ಸಹಾಕರ ಸಂಘಗಳ ಬ್ಯಾಂಕ್ ವತಿಯಿಂದ ಆಶಾ ಕಾರ್ಯಕರ್ತರಿಗೆ ಗೌರವ ಧನ.

ಪತ್ತಿನ ಸಹಾಕರ ಸಂಘಗಳ ಬ್ಯಾಂಕ್ ವತಿಯಿಂದ ಆಶಾ ಕಾರ್ಯಕರ್ತರಿಗೆ ಗೌರವ ಧನ.

Raichur

ಸಿರವಾರ: ಸಿರವಾರ ಮತ್ತು ಬಲ್ಲಟ್ಟಗಿ ಪತ್ತಿನ ಸೌಹಾರ್ದ ಸಹಕಾರ ಸಂಘಗಳ ಬ್ಯಾಂಕ್ ಇವರ ವತಿಯಿಂದ ತಾಲುಕಿನ ಕೊರೋನಾ ವಾರಿರ್ಯಸ್ “ಆಶಾ ಕಾರ್ಯಕರ್ತರಿಗೆ” ಗೌರವ ಧನ ನಿಡಲಾಯಿತು. ಇಂದು ವಿ ಆರ್ ಎಸ್ ಶಾಲೆಯಲ್ಲಿ ನಡೆದ ಆಶಾ ಕಾರ್ಯಕರ್ತರಿಗೆ ಗೌರವ ಧನ ನಿಡುವ ಕಾರ್ಯಕ್ರಮದಲ್ಲಿ 27 ಜನ ಆಶಾ ಕಾರ್ಯಕರ್ತರಿಗೆ ಚೆಕ್ ವಿತರಣೆ ಮಾಡುವ ಮೂಲಕ ಅವರಿಗೆ ಗೌರವ ಸಹಾಯ ಧನ ನಿಡಿ ಗೌರವಿಸಲಾಯಿತು. ಕೋವಿಡ್ -19 ತಡೆಗಟ್ಟುವ ಕಾರ್ಯದಲ್ಲಿ ಆಶಾ ಕಾರ್ಯಕರ್ತರ ಕೆಲಸದ ಪಾತ್ರ ಬಹುಮುಖ್ಯವಾಗಿದ್ದು,ಇಂತಹ ಕಠಿಣ ಸಂದರ್ಭದಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಕೋರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ್ದಾರೆ.ಅಲ್ಲದೇ ಮೇಲ್ ಅಧಿಕಾರಿಗಳ ಅಜ್ಞೆಯಂತೆ ಇಂತಹ ಕಷ್ಟದ ಸಮಯದಲ್ಲೂ ನಿಷ್ಟೆಯಿಂದ ಕೆಲಸ ಮಾಡಿದ ಇವರಿಗೆ ಗೌರವ ಧನ ನಿಡಿದ ಪತ್ತಿನ ಸಹಾಕರ ಸಂಘಗಳ ಬ್ಯಾಂಕ ಅಧಿಕಾರಿಗಳ ಈ ನಿರ್ಧಾರ ಮೆಚ್ಚುವಂತಹದಾಗಿದೆ.

ಇದೇ ಸಂಧರ್ಭದಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೇಯರಾದ ಟಿ.ರಾಧ.ಮತ್ತು ನಾಗಮ್ಮ ಇವರು ಕೊವೀಡ್ -19 ಈ ಸಂದರ್ಭದಲ್ಲಿ ನಾವು ಬಹಳ ನೋವುಗಳನ್ನು ಅನುಭವಿಸಿದ್ದೆವೆ, ನಮಗೆ ಕೆಲವು ಜನರಿಂದ ಜೀವ ಬೆದರಿಕೆಗಳು ಬಂದಿವೆ ಅಲ್ಲದೇ ಪಾನಯುಕ್ತ ಯುವಕರಿಂದ ತೊಂದರೆಗಳು ಉಂಟಾಗಿವೆ ಅಲ್ಲದೇ ಕೆವಲ 4000ರೂಪಾಯಿಗಳ ಗೌರವ ಧನ ಪಡೆದುಕೊಂಡು,ನಮ್ಮ ಕುಟುಂಬ ಮಕ್ಕಳು ಇವೇಲ್ಲವನ್ನೂ ಲೆಕ್ಕಿಸದೇ ಇಂತಹ ಕಸ್ಟಕರ ಸಮಯದಲ್ಲಿ ಕೆಲಸ ಮಾಡಿದ್ದೆವೆ ಎಂದು ಅಳಲು ತೊಡಿಕೊಂಡರು.

ನಿಮಗೆ ಆದಾ ನೋವು ನಮಗೂ ಆಗಿವೇ.ನಿಮ್ಮ ಈ ಕಾರ್ಯಕ್ಕೆ ನನ್ನ ಹೃದಯ ಪೂರ್ವ ನಮಸ್ಕಾರ.ಶ್ರೀ ಮತಿ ಶೃತಿ ಕೆ ತಹಾಶೀಲ್ದಾರ್.

Raichur

ಇನ್ನೂ ಕಾರ್ಯಕ್ರಮವನ್ನ ಉದ್ದೇಶೆಸಿ ಮಾತನಾಡಿ ತಾಲುಕಿನ ತಹಾಸಿಲ್ದಾರ ಇವರು ಕೋವಿಡ್ 19 ಕಾರ್ಯದಲ್ಲಿ ತೊಡಗಿದ ಆಶಾ ಕಾರ್ಯಕರ್ತರಿಗೆ ಮಾಡಿದಂತಹ ಅವಮಾನ ಖಂಡನಿಯ ಎಂದರು.ಅಲ್ಲದೇ ಕೇಲವು ಸಂದರ್ಭದಲ್ಲಿ ನಿವು ಮಾಡಿದಂತಹ ಕೆಲಸದಲ್ಲಿ ಜನರಿಂದ ತೊಂದರೆಗಳು ಆಗಿದ್ದರೆ, ಅಂತಹ ನೋವುಗಳನ್ನು ನಾವು ಅನುಭವಿಸಿದ್ದೆವೆ,ಆದರೆ ನಿಮ್ಮ ಈ ಸೇವೆಗೆ ತಾಲುಕಿನ ತಹಾಸಿಲ್ದಾರ್ ಆಗಿ ನಿಮಗೆ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೆನೆ ಎಂದರು. ಇನ್ನೂ ಮಾತನಾಡುತ್ತ ಆಶಾ ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೇಡುವ ಅತ್ಯವಿಲ್ಲ ನಿಮ್ಮ ಕಷ್ಟ ನೋವುಗಳಲ್ಲಿ ನಾವು ಜೊತೆಯಾಗಿ ಇರುತ್ತೇವೆ ಎಂದು ಹೇಳೀದರು.

ಜೊತೆಗೆ ಇಂತಹ ಕೊಡುವ ಕೈಗಳ ಕಾರ್ಯಕ್ರಮವನ್ನು ಮೆಚ್ಚಬೇಕು ಎಂದರು.

Raichur

ಇದೇ ಸಂದರ್ಭದಲ್ಲಿ ಪತ್ತಿನ ಸಹಕಾರ ಸಂಘಗಳ ಮುಖ್ಯಸ್ಥರು ಮಾತನಾಡಿ ನಿಮ್ಮ ಈ ಸೇವೆ ಮೆಚ್ಚು ವಂಥಹದ್ದು ಜೊತೆಗೆ ನಿಮ್ಮ ನಿಮ್ಮ ಅರೋಗ್ಯದ ಬಗ್ಗೆ ನಿವೇ ಕಾಳಜಿಯೂ ವಹಿಸಿಕೊಳ್ಳುವುದು ಕೂಡ ಪ್ರಮುಖ ವಾಗಿರುತ್ತದೆ, ಆದೂದರಿಂದ ನಾವು ಕೊಡುವ ಈ ಮೊತ್ತಅಲ್ಪವಾದರು, ಕೊಡುವಂತಹ ಮನಸ್ಸುಗಳು ದೊಡ್ಡದಾಗಿವೆ ಎಂದು ಹೇಳಿದರು. ಇನ್ನೂ ಕೋವಿಡ್ -19 ವೇಳೆ ಕಾರ್ಯನಿರ್ವಹಿಸಿದ ಪಂ.ಪಂಚಾಯತ್ ಸಿ ಇ ಓ. ಶ್ರೀ ಮುನಿಸ್ವಾಮಿ ಇವರನ್ನು ಗೌರವಿಸಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲುಕಿನ ಗಣ್ಯರಾದ ಶ್ರೀ ಸೂಗಪ್ಪ ಸಾಹುಕಾರ ಚುಕ್ಕಿ,ಜಿ.ಲೋಕರೆಡ್ಡಿ, ಶ್ರೀ ಉದಯ್ ಸಾಹುಕಾರ್, ಶ್ರೀ ಟಿ ಬಸವರಾಜ್ , ಸಿರವಾರ ಮತ್ತು ಬಲ್ಲಟಗಿ ಪತ್ತಿನ ಸೌಹರ್ದ ಸಹಕಾರ ಸಂಘಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.