ಹೆಬ್ಬಾಗಿಲು ನೂತನ ಚಿತ್ರ .
ಹೆಬ್ಬಾಗಿಲಿಂದ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡ್ತಿರೋಪ್ರವೀಣ್ ಸಾಗರ್.. ಕ್ಯೂರಿಯಾಸಿಟಿ ಹುಟ್ಟಿಸ್ತಿದೆ ಫಸ್ಟ್ ಪೋಸ್ಟರ್.

ಸ್ಯಾಂಡಲ್ವುಡ್ ನಲ್ಲಿ ಹೊಸ ಸಿನಿಮಾಗಳಿಗೇನು ಕೊರತೆಯಿಲ್ಲ. ಹೊಸ ಹೊಸ ಯಂಗ್ ಹೀರೋಗಳು ಗಾಂಧಿನಗರಕ್ಕೆ ಕಾಲಿಡ್ತಾನೆ ಇರ್ತಾರೆ. ಹೊಸ ಹೊಸ ಸಿನಿಮಾಗಳು ಬರೋದಕ್ಕಿಂತ ಹೇಗೆ ಬರ್ತಾವೆ ಅನ್ನೋದು ಮುಖ್ಯ. ಬೇಸ್ ಇಂದಾನೇ ರಿಚ್ ಆಗಿ ಬರೋ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರೋದು ಪಕ್ಕಾ. ಅಂತಹ ಸಾಲಿಗೆ ಸೇರೋಕೆ ಹೊಸ ಸಿನಿಮಾವೊಂದು ತಯಾರಾಗ್ತಿದ್ದು, ರಿಚ್ ಪೋಸ್ಟರ್ ಮೂಲಕವೇ ಗಮನ ಸೆಳಿತಿದೆ ಹೆಬ್ಬಾಗಿಲು. ಈ ಟೈಟಲ್ ಪೋಸ್ಟರ್ ಮೂಲಕವೇ ತನ್ನ ರಿಚ್ನೆಸ್ ಏನು ಅಂತಾ ತೋರಿಸ್ತಿದೆ. ಹೊಸ ಹೀರೋ ಮಸ್ತ್ ಮೇಕಿಂಗ್ ಮೂಲಕ ಬರ್ತಿರೋ ಈ ಸಿನಿಮಾ ಟೈಟಲ್ ಪೋಸ್ಟರ್ ಮೂಲಕ ಸೌಂಡ್ ಮಾಡ್ತಿದೆ. ಈ ಹೆಬ್ಬಾಗಿಲನ್ನ ಓಪನ್ ಮಾಡ್ತಿರೋ ಮಾಸ್ಟರ್ ಆರ್ ಸಂಪ್ರಿತ್ ಚಿತ್ರವನ್ನ ರಚನೆ ಜೊತೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಎನ್ ಹರೀಷ್ ಮ್ಯೂಸಿಕ್ ಜಂಪೋಸ್ ಮಾಡ್ತಿರೋ ಈ ಸಿನಿಮಾಗೆ ಮನ್ವರ್ಷಿ ನವಲಗುಂದರವರ ಸಂಭಾಷಣೆ ಜೊತೆ ಸಾಹಿತ್ಯವಿದ್ದು ಮೊದಲ ಹಂತದಲ್ಲೇ ಕ್ಯೂರಿಯಾಸಿಟಿ ಹುಟ್ಟಿಸ್ತಿದೆ. ಹೆಬ್ಬಾಗಿಲು ಇದು ಸ್ವಾಭಿಮಾನದ ಖಹಳೆ ಅನ್ನೋ ಪವರ್ಫುಲ್ ಸಬ್ ಟೈಟಲ್ ಇಟ್ಕೊಂಡು ಚಿತ್ರತಂಡ ಸಿನಿಮಾ ಶುರು ಮಾಡ್ತಿದ್ದು, ಟೈಟಲ್ ನಲ್ಲಿರೋ ರಿಚ್ನೆಸ್ ಗಿಂತ ಸಿನಿಮಾದಲ್ಲಿ ಮತ್ತೊಂದು ಲೆವೆಲ್ ನಲ್ಲಿ ತೋರಿಸ್ತಿವಿ. ಕಾಯ್ತಾಯಿರಿ ಅಂತಾ ನ್ಯೂ ಇಯರ್ ಗೆ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ.
Recent comments