Skip to main content
ಕೊರೊನಾ ಮಹಾಮಳೆಯಲ್ಲಿಯೂ "ಸಲಗ" ಚಿತ್ರದ ಸಾಂಗ್ ಶೂಟಿಂಗ್ .

ಕೊರೊನಾ ಮಹಾಮಳೆಯಲ್ಲಿಯೂ "ಸಲಗ" ಚಿತ್ರದ ಸಾಂಗ್ ಶೂಟಿಂಗ್ .

ಕರೋನ ಮಹಾಮಳೆಯಲ್ಲಿ ಸಲಗ ಚಿತ್ರತಂಡ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಹಾಡನ್ನ ನಯನ ಮನೋಹರವಾಗಿ ಚಿತ್ರಿಸಿ, ಮತ್ತೊಮ್ಮೆ ಜೋರಾಗಿ ಸದ್ದು ಸುದ್ದಿಯಾಗ್ತಿದೆ.

ಸಲಗ

ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಈ ಚಿತ್ರದಲ್ಲಿ ಡಾಲಿ ಧನಂಜಯ ಪ್ರಮುಖ‌ ಪಾತ್ರದಲ್ಲಿ‌ಕಾಣಿಸಿಕೊಂಡಿದ್ದು, ಸಂಜನಾ ಆನಂದ್ ನಾಯಕಿಯಾಗಿ‌ಕಾಣಿಸಿಕೊಂಡಿದ್ದಾರೆ. ಟಗರು ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದುದ್ಯಮದಲ್ಲಿ ಹಾಗೂ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಕೋವಿಡ್ ಹಾವಳಿಯಿಂದ ಎಲ್ಲಾ ಲಾಕ್ ಆಗಿದ್ರೂ ಸಲಗ ಮಾತ್ರ ಮತ್ತೊಂದು ವಿಶೇಷ ವಿಚಾರದಿಂದ ಸಖತ್ತಾಗೇ ಘರ್ಜಿಸ್ತಿದೆ.

ಕೋವಿಡ್ ನಡುವೆ ಸರ್ಕಾರ ನೀಡಿರೋ ಎಲ್ಲಾ ಸೂಚನೆಗಳನ್ನು ಪಾಲಿಸಿ, ನಾಯಕ ನಾಯಕಿ ಸೇರಿ ಕೇವಲ 12 ಮಂದಿ ತಂತ್ರಜ್ಞಾನದೊಂದಿಗೆ ಸಲಗದ ಈ ಬ್ಯೂಟಿಫುಲ್ ಹಾಡನ್ನ ಚಿತ್ರಿಸಿರೋದು ವಿಶೇಷ. ಸಲಗ ಚಿತ್ರಕ್ಕಾಗಿ ಚರಣ್ ರಾಜ್ ಸಂಯೋನೆಯ ಮಳೆಯೇ ಮಳೆಯೇ ಅಂಬೆಗಾಲೊಡುತ್ತಾ ಸುರಿಯೇ...ಅನ್ನೋ ರೊಮ್ಯಾಂಟಿಕ್ ಹಾಡನ್ನ ಸಾಹಿತ್ಯಕ್ಕೆ ತಕ್ಕಂತೆ ಜಡಿ‌ಮಳೆಯಲ್ಲೇ ಹೀಗೆ ಸದ್ದಿಲ್ಲದೇ ಚಿತ್ರಿಸಿಕೊಂಡು ಬಂದಿದೆ. ದುನಿಯಾ ವಿಜಯ್ ಸಂಜನಾ ಆನಂದ್ ನಡುವಿನ ಈ ಪ್ರಣಯ ಗೀತೆಯನ್ನ ಮಳೆ,ಚಳಿ ನಡುವೆ ಯಾವುದನ್ನು ಲೆಕ್ಕಿಸದೆ ಚಿತ್ರೀಕರಿಸಲಾಗಿದೆ.

ಸಲಗ

ಅದ್ರಲ್ಲೂ ಛಾಯಾಗ್ರಹಕ ಶಿವಸೇನ ಕೆಲ‌ ಸೀಕ್ವೆನ್ಸ್ ಗಳನ್ನ ಒರಿಜಿನಲ್ ಮಳೆಯಲ್ಲೇ ಚಿತ್ರಿಸಿರೋದು ಮತ್ತೊಂದು ವಿಶೇಷ. ಇದೇ ಕಾರಣಕ್ಕೆ ಜಡಿ ಮಳೆಯ ಒಂದು ಶಾಟ್ ಗಾಗಿ ಚಿತ್ರತಂಡ ನಾಲ್ಕೈದು ಗಂಟೆ ಕಾದು 12 ಜನರೂ ಕೂಡಿ ತಲೆಗೊ‌ಂದು ಕೆಲಾದಂತೆ ಮಳೆ‌ಕೆಸರಲ್ಲಿ ನಾಲ್ಕು ದಿನ ಎದ್ದು ಬಿದ್ದು ಅದ್ಭುತ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಅದ್ಭುತ ಹಾಡೊಂದನ್ನ ಸದ್ದಿಲ್ಲದೆ ಚಿತ್ರೀಕರಿಸಿಕೊಂಡು ಬಂದಿದೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನದ ಸಕಲೇಶಪುರ ಸೇರಿ ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಲಗ ಚಿತ್ರದಲ್ಲಿ ಈ ಹಾಡು ಮತ್ತೊಂದು ಸ್ಪೆಷಲ್ ಮತ್ತು‌ಹೈಲೈಟ್ ಗಳಲ್ಲೊಂದಾಗಲಿದೆಯಂತೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.