Skip to main content
ಕ್ರಾಂಗ್ರೇಸ್ ನಾಯಕರಿಂದ “ಕೊವಿಡ್-19” ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚೆರ್ಚೆ.

ಕ್ರಾಂಗ್ರೇಸ್ ನಾಯಕರಿಂದ “ಕೊವಿಡ್-19” ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚೆರ್ಚೆ.

ಕ್ರಾಂಗ್ರೇಸ್ ನಾಯಕರಿಂದ “ಕೊವಿಡ್-19” ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚೆರ್ಚೆ.

Raichur

ಕೊವೀಡ್-19 ದಿಂದ ರಾಯಚೂರು ಜಿಲ್ಲೆಯಲ್ಲಿ ಉದ್ಬವಿಸಿರುವ ಕೇಲವು ಸಮಸ್ಸೆಗಳ ಬಗ್ಗೆ ಜಿಲ್ಲಾ ಕಂಗ್ರೇಸ್ ಸಮಿತಿ ವತಿಯಿಂದ ದಿನಾಂಕ 7-4-2020 ರಂದು ಮಾನ್ಯ ಜಿಲ್ಲಾಧಿಕಾರಿಗಳನ್ನು ಬೇಟಿಯಾಗಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಉತ್ತಮ ಕ್ರಮಗಳು ತೆಗೆದುಕೊಂಡಿರುವುದರಿಂದ ಜಿಲ್ಲೆಯ ಜನರಿಗೆ “ಕೊರೋನಾ”ದಿಂದ ಹೆಚ್ಚಿನ ತೊಂದರೆಯಾಗದಂತೆ ಮುಂಜಾಗೃತ ಕ್ರಮಕ್ಕೆ ಅಭಿನಂದನೆ ಸಲ್ಲಿಸಿ,ಪ್ರಸ್ತುತ ತೆಲಾಂಗಣ ಮತ್ತು ಆಂಧ್ರಪ್ರದೇಶದ ಗಡಿನಾಡು ಪ್ರದೇಶದಲ್ಲಿ “ಕೊರೋನಾ” ತೀವ್ರತೆಯಿಂದ ಉದ್ಬಸಿರುವ ಸಮಸ್ಸೆಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳಲು ಹಾಗೂ ರೈತರು ಬೆಳೆದ ಬೆಳೆಗಳಿಗೆ ಮಾರಟ ಮಾಡಲು ಆಗಿರುವ ತೊಂದರೆ ನಿವಾರಣೆ ಹಾಗೂ ಬೇರೆ ಬೇರೆ ಪ್ರದೇಶಗಳಿಗೆ ಕೂಲಿಗಾಗಿ ಹೋಗಿ ವಾಪಸ್ಸು ಬಂದಿರುವ ಜನರು ಸುಮಾರು 50ಸಾವಿರ ಜನರಿಗೆ ಬೇಕಾಗಿರುವ ಪಡಿತರ ವಿತರಣೆ ಹಾಗೂ “ಎಮ್. ಎನ್. ಆರ್. ಇ. ಜಿ” ಅಡಿಯಲ್ಲಿ ಕೆಲಸಕ್ಕೆ ಅವಕಾಶ ಕಲ್ಪಿಸಲು ಮತ್ತು ಪಡಿತರ ವಿಷಯದಲ್ಲಿ ಹಾಲು ವಿತರಣೆಯಲ್ಲಿ ನಡೆದಿರುವ ವ್ಯಾತ್ಯಾಸಗಳ ಬಗ್ಗೆ,ಇಂದಿರಾ ಕ್ಯಾಂಟಿನ್ ಊಟದ ವ್ಯವಸ್ಥೆ ಬಗ್ಗೆ ಹಾಗೂ ರಾಯಚೂರು ಗಂಜ್ ನಲ್ಲಿ ಹೋಲ್ ಸೇಲ್ ನಡೆಸಲು ಮತ್ತು ಗ್ರಾಮಾಂತರ ಪ್ರದೇಶಗಳಿಂದ ಬರುವ ವ್ಯಾಪಾರ ವಹಿವಾಟು ಹಾಗೂ ಮಾರಾಟ ಗಾರರಿಗೆ ಸೂಕ್ತವಾದ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿಲಾಯಿತು.

N S Boseraaju

ಇನ್ನೂ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುವ ಪಡಿತರ ಚೀಟಿ ಇಲ್ಲದವರಿಗೂ ಸಹ ಪಡಿತರ ವಿತರಣೆ ಮಾಡುವ ವಿಷಯಗಳ ಬಗ್ಗೆ ಚರ್ಚಿಸಲಾಯಿತು.ಇನ್ನೂ ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ನಾಯಕರು “ಕೊವೀಡ್-19” ನಿವಾರಣೆಗೆ ಪ್ರಯತ್ನ ಮಾಡಲು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು ಹೆಚ್ಚಿನ ಸಹಕಾರ ನೀಡಲು ಕೊರಲಾಗಿದೆ.ಇದೇ ಸಂದರ್ಭದಲ್ಲಿ ಶ್ರೀ ಎನ್.ಎಸ್.ಬೋಸ್ ರಾಜು ವಿಧಾನ ಪರಿಷತ್ತು ಸದಸ್ಸರು,ಬಿ.ವಿ.ನಾಯಕ ಮಾಜಿ ಸಂಸದರು, ಹಾಗೂ ಅದ್ಯಕ್ಷರು ಜಿಲ್ಲಾ ಕಾಂಗ್ರೇಸ್ ಸಮಿತಿ, ದದ್ದಲ ಬಸನಗೌಡ ಶಾಸಕರು, ರಾಯಚೂರು ಗ್ರಾಮಾಂತರ,ಮುಖಂಡರಾದ ಎ.ವಸಂತಕುಮಾರ್,ಪಾರಸಮಲ್ ಸುಖಾಣಿ, ಕೆ.ಶಾಂತಪ್ಪ ,ಜಂಯಣ್ಣ ಪತಂಗ ಜಯವಂತರಾವ್ .ಜಿ.ಬಸವರಾಜರೆಡ್ಡಿ,ಅಬ್ದುಲ್ ಕರೀಮ್, ಬಷೀರುದ್ದೀನ್, ತಾಯಣ್ಣನಾಯಕ್ ಅಮರೇಗೌಡ ಹಂಚಿನಾಳ ಜಿ.ಶಿವಮೂರ್ತಿ ಹಾಗೂ ಕೇಲ ನಗರಸಭಾಸದಸ್ಸರು ಭಾಗಿಯಾಗಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.