”ಜ್ಯಾತ್ಯತೀತ ಜನತಾದಳ”ದ 2018ರ ಪ್ರಣಾಳಿಕೆಯ ಪ್ರಮುಖ ಮುಖ್ಯಾಂಶಗಳು.
ಜೆಡಿಎಸ್ ಪ್ರಣಾಳಿಕೆಯಲ್ಲಿವೆ ಜನ ಮೆಚ್ಚುವ ಅಂಶಗಳು.
ರಾಜ್ಯದ ಮುಂದಿನ ಮುಖ್ಯಮಂತ್ರಿ,ಕನ್ನಡದ ಮಣ್ಣಿನ ಮಗ ಕುಮಾರಸ್ವಾಮಿಯವರು.ಈ ಬಾರಿ ಜಯಬೇರಿ ಬಾರಿಸಲಿದ್ದಾರೆ.ಅದಕ್ಕೆ ಕಾರಣ ಏನೆದಂರೆ.? ಜೆಡಿಎಸ್ ಪಕ್ಷ ಸಿದ್ದಪಡಿಸಿರುವ ಜನಪರ ಕಾರ್ಯಕ್ರಮಗಳು.ಹೌದು ಮುಂಬರುವ ಚುನಾವಣೆಯಲ್ಲಿ ಶತಸಿದ್ದ ಅಧಿಕಾರಕ್ಕೆ ಬಂದೇ ಬರುತ್ತೆವೆ .ಈ ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ನಿಡಲಿದ್ದಾರೆ ಎನ್ನುವ ನಂಬಿಕೆ ಇಟ್ಟಿದ್ದಾರೆ.ಪ್ರಾದೇಶಿಕ ಪಕ್ಷವಾಗಿ ಈ ಬಾರಿ ಜೆಡಿಎಸ್ ತನ್ನ ಬಲವನ್ನ ರಾಷ್ಟ್ರೀಯ ಪಕ್ಷಗಳಿಗೆ ತೋರಲು ಮುಂದಾಗಿದೆ.ಹೀಗಾಗಿ ತನ್ನ ಮತದಾರರಿಗೆ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದು.ಇದರ ಮುಖ್ಯಾಂಶಗಳನ್ನ ಜೆಡಿಎಸ್ ವಕ್ತಾರದ ಡಾ.ಟಿ.ಎ.ಶರವಣ ಅವರು ತಮ್ಮ ಎಫ್ ಬಿ ಪೋಸ್ಟ್ ನಲ್ಲಿ ಹಾಕಿಕೊಂಡಮುಖ್ಯಾಂಶಗಳು.

”ಜ್ಯಾತ್ಯತೀತ ಜನತಾದಳ”ದ 2018ರ ಪ್ರಣಾಳಿಕೆಯ ಪ್ರಮುಖ ಮುಖ್ಯಾಂಶಗಳು.
1. ಅಧಿಕಾರಕ್ಕೆ ಬಂದ ಕೇವಲ 24 ಗಂಟೆಯಲ್ಲಿ ರಾಜ್ಯದ ಎಲ್ಲಾ ರೈತರ ಸಾಲ ಸಂಪೂರ್ಣ ಮನ್ನಾ.
2. ನೇಕಾರರ ಮೀನುಗಾರರ ಮತ್ತು ಗ್ರಾಮೀಣ ಕುಶಲಕರ್ಮಿಗಳ ಸಂಪೂರ್ಣ ಸಾಲ ಮನ್ನಾ.
3. ಗ್ರಾಮೀಣ ಪ್ರದೇಶದಲ್ಲಿ 24ಗಂಟೆಯೂ 3 ಪೇಸ್ ವಿದ್ಯುತ್ ಸಂಪರ್ಕ.
4. “ಜೆ.ಪಿ.ಸದನ”ಯೋಜನೆ ಅಡಿ ಹಿಂದುಳಿದ ವರ್ಗ ಮತ್ತು ಇತರೆ ವರ್ಗದವರಿಗೆ 2ಲಕ್ಷ ರೂ.ಗಳ ವಸತಿ ನಿರ್ಮಾಣ.
5. “ಹೆಚ್.ಡಿ.ದೇವೆಗೌಡರ ಆರೋಗ್ಯ ಶ್ರೀ” ಯೋಜನೆ ಅಡಿ ಬಿಪಿಎಲ್ ಕುಟುಂಬ ವರ್ಗದವರಿಗೆ 1 ಲಕ್ಷ ದಿಂದ 3 ಲಕ್ಷದವರೆಗೆ ಉಚಿತ ಚಿಕೆತ್ಸೆ.
6. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೋತೆಗೆ ಬೆಳಗಿನ ಉಪಾಹಾರ ಯೋಜನೆ ಜಾರಿಗೆ.
7. 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 2 ಜೊತೆ ಉಚಿತ ಸಮವಸ್ತ್ರ ಶೂ ಟೈ ಬೆಲ್ಟ್ ಮತ್ತು ಉಚಿತ ನೋಟ್ ಪುಸ್ತಕಗಳ ವಿತರಣೆ.
8. ಅಂಗನವಾಡಿ ಕಾರ್ಯಕರ್ತೆಯರ ಉಚಿತ ಗೌರವಧನ ರೂ 10000ಕ್ಕೆ ಹೆಚ್ಚಳ ಮತ್ತು ನೌಕರಿ ಕಾಯಂ.
9. “ತುಂಗಭದ್ರೆಯ ಮೇಲಾಣೆ ರೈತರ ಹಿತರಕ್ಷಣೆ ನಮ್ಮ ಹೊಣೆ” ಎನ್ನುವ ಘೋಷಣೆಯೊಂದಿಗೆ ತುಂಗಭದ್ರೆ ಜಲಾಶಯದಲ್ಲಿ ಹೂಳು ತೆಗೆದು ಬಳ್ಳಾರಿ ರಾಯಚೂರು ಕೊಪ್ಪಳ ಭಾಗದ ರೈತರ ಎರೆಡು ಬೆಳೆಗೆ ನೀರು ಒದಗಿಸುವುದು.
Recent comments