ಶುದ್ಧ ಆಹಾರ ಸೇವನೆಯ ಜೀವನಶೈಲಿ ನಡೆಸಲು ಫಲದಾ ಸಂಸ್ಥೆಯಿಂದ ಅಭಿಯಾನ
ಶುದ್ಧ ಆಹಾರ ಸೇವನೆಯ ಜೀವನಶೈಲಿ ನಡೆಸಲು ಫಲದಾ ಸಂಸ್ಥೆಯಿಂದ ಅಭಿಯಾನ
ಬೆಂಗಳೂರು: ಬೆಂಗಳೂರು ಮೂಲದ ಸಾವಯವ ಆಹಾರ ಬ್ರಾಂಡ್ ಫಲದಾ ಪ್ಯೂರ್ ಆ್ಯಂಡ್ ಶೂರ್ ಸಂಸ್ಥೆಯು ಶುದ್ಧ ಆಹಾರ ಮತ್ತು ಆಹಾರವನ್ನು ಸೇವಿಸುವ ವಿಧಾನದ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ "ಕ್ಲೀನ್ ಫುಡ್ ಮೂವ್ಮೆಂಟ್" ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ರಾಸಾಯನಿಕ ಮುಕ್ತ ಮತ್ತು ಹಾನಿಕಾರಕವಲ್ಲದ ಶುದ್ಧ ಆಹಾರಕ್ಕೆ ಪ್ರತಿಯೊಬ್ಬರು ಅರ್ಹರು. ಈ ಹಿನ್ನೆಲೆಯಲ್ಲಿ 'ಕ್ಲೀನ್ ಫುಡ್ ಮೂವ್ಮೆಂಟ್' ಹುಟ್ಟಿಕೊಂಡಿದೆ. ಸಮುದಾಯಗಳು, ರೆಸ್ಟೋರೆಂಟ್‌ಗಳು, ಲಾಭರಹಿತ ಸಂಸ್ಥೆಗಳು, ವೈದ್ಯರು, ಆಹಾರ ತಜ್ಞರು, ಫಿಟ್‌ನೆಸ್ ಉತ್ಸಾಹಿಗಳು, ಪೋಷಕರು, ಶೂನ್ಯ-ತ್ಯಾಜ್ಯ ಜೀವನಶೈಲಿಯ ಅನುಯಾಯಿಗಳು ಸೇರಿದಂತೆ ಬಹುತೇಕರು ಈ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ.
ಶುದ್ಧ ಆಹಾರ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವ ಸಂಸ್ಥೆಗಳು ಪ್ರತಿದಿನವೂ ಸೇವಿಸುವ ಆಹಾರದ ಬಗ್ಗೆ ಜಾಗೃತರಾಗಿರುವುದು ಮುಖ್ಯವಾದ ಕಾರಣ ಈ ಅಭಿಯಾನವು ಮಕ್ಕಳು ಮತ್ತು ಅವರ ಪೋಷಕರಿಗೆ ಶುದ್ಧ ಆಹಾರ ಪದ್ಧತಿ ಕುರಿತು ಹೊಸ ಸಂವಾದವನ್ನು ಪ್ರಾರಂಭಿಸಲಿದೆ. ಕೀಟನಾಶಕಗಳು, ಕೃತಕ ಪದಾರ್ಥಗಳನ್ನು ಬಳಸಿ ಉತ್ಪಾದಿಸುವ ಆಹಾರದಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಹೀಗಾಗಿ ನಮ್ಮ ಸುತ್ತಲಿನ ಪ್ರಪಂಚವು ಸಾವಯವ ಮತ್ತು ಶುದ್ಧ ಆಹಾರವನ್ನು ತಿನ್ನುವ ಕಡೆಗೆ ಆಕರ್ಷಿತವಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಆಹಾರ ಸೇವಿಸುವ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೀತಿಯಲ್ಲಿ ಫಲದಾ ಪ್ಯೂರ್ ಆ್ಯಂಡ್ ಶೂರ್ ಹೆಜ್ಜೆ ಇಟ್ಟಿದೆ. ಫಲದಾ ಪ್ಯೂರ್ ಆ್ಯಂಡ್ ಶ್ಯೂರ್ ಸಂಸ್ಥೆಯು ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಿ, ರೈತರಿಂದಲೇ ನೇರ ಖರೀದಿಸುವ ಸಾವಯವ ಆಹಾರವನ್ನು ಜನರಿಗೆ ನೀಡುತ್ತಿದೆ.ಈ ಆಂದೋಲನ ಕೇವಲ ಕೆಲವೇ ದಿನ ನಡೆದು ಸುಮ್ಮನಾಗುವುದಿಲ್ಲ. ಶುದ್ಧ ಆರೋಗ್ಯಕರ ಆಹಾರ ಸೇವಿಸುವ ಪದ್ಧತಿ ಬಗ್ಗೆ, ಅದರಿಂದ ಉಂಟಾದ ಫಲಿತಾಂಶದ ಕುರಿತು ಅರಿವನ್ನು ಹಬ್ಬಿಸಲಿದೆ. ಅಭಿಯಾನದ ಕುರಿತು ಮಾತನಾಡಿದ ಫಲದಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಶಾಸ್ತ್ರಿ, “ಬಹುಶಃ ನಮ್ಮ ಕಂಪನಿಯು ಮೊದಲ ಬಾರಿಗೆ ಶುದ್ಧ ಆಹಾರದ ಬಗ್ಗೆ ಚರ್ಚೆ ನಡೆಸಿ, ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದೆ.
ಶಾಲೆಗಳು, ಪೋಷಕರು, ಆರೋಗ್ಯ ಮತ್ತು ಆಹಾರ ತಜ್ಞರು ಮತ್ತು ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದೇವೆ. ಜನರು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು ಮತ್ತು ಅದು ನೈತಿಕ, ಸಾವಯವ ಮತ್ತು ಸ್ವಚ್ಛ ವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇದು ನಮ್ಮ ದೃಷ್ಟಿ. ಈ ನಿಟ್ಟಿನಲ್ಲಿ ಅಭಿಯಾನ ಪ್ರಾರಂಭಿಸಿದ್ದೇವೆ," ಎಂದರು. ಫಲದಾ ಪ್ಯೂರ್ ಆ್ಯಂಡ್ ಶೂರ್ ಕುರಿತು: ಈ ಕಂಪನಿಯು ಶೇಕಡಾ 100ರಷ್ಟು ಪ್ರಮಾಣೀಕೃತ ಸ್ವಚ್ಛ, ಸಾವಯವ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ.
ಸಾವಯವ ಕೃಷಿಯಲ್ಲಿ 20 ವರ್ಷಗಳ ಅನುಭವದ ಫಲಿತಾಂಶವನ್ನು ಈ ಸಂಸ್ಥೆ ಹೊಂದಿದೆ. ರೈತರಿಂದ ನೇರವಾಗಿ ಪಡೆದು, ಅದರ ಗುಣಮಟ್ಟ ಸಂಸ್ಕರಿಸಿ ಪಡೆಯಲಾಗುತ್ತದೆ. ಸುಮಾರು ೧೪೦ಕ್ಕೂ ಹೆಚ್ಚಿನ ಆಹಾರ ಉತ್ಪನ್ನಗಳು ನಿಮಗೆ ನಿಜವಾದ ಸಾವಯವ ರುಚಿಯನ್ನು ನೀಡುತ್ತದೆ. ಆಂದೋಲನದ ಬಗ್ಗೆ ಹೆಚ್ಚಿನ ವಿವರ ಪಡೆಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿ www.cleanfoodmovement.in
Recent comments