Skip to main content
ಕೋಳಿ ಕರಿ ಮಾಡೋದು ಹೇಗೆ?; ರಾಮ್​ಚರಣ್​ ಪತ್ನಿಗೆ ರಶ್ಮಿಕಾ ಟೀಚಿಂಗ್​!

ಕೋಳಿ ಕರಿ ಮಾಡೋದು ಹೇಗೆ?; ರಾಮ್​ಚರಣ್​ ಪತ್ನಿಗೆ ರಶ್ಮಿಕಾ ಟೀಚಿಂಗ್​!

ಕೋಳಿ ಕರಿ ಮಾಡೋದು ಹೇಗೆ?; ರಾಮ್​ಚರಣ್​ ಪತ್ನಿಗೆ ರಶ್ಮಿಕಾ ಟೀಚಿಂಗ್​!

Tolloywood

ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಸೊಸೆ, ರಾಮ್​ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ ಅವರೀಗ ಆನ್​ಲೈನ್​ನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಆ ಸಾಹಸಕ್ಕೆ ಸದ್ಯ ಟ್ರೆಂಡಿಂಗ್​ನಲ್ಲಿರುವ ಕನ್ನಡತಿ, ಸೌತ್ ಸೆನ್ಸೆಷನಲ್ ರಶ್ಮಿಕಾ ಮಂದಣ್ಣ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ಲ ರಾಮ್​ಚರಣ್​ ಪತ್ನಿಗೆ ಕೂರ್ಗಿ ಶೈಲಿಯ ಕೋಳಿ ಕರಿ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದಾರೆ.

Rashmika

ಆರೋಗ್ಯ, ಲೈಫ್​ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಯೂಆರ್​ಲೈಫ್​ ಮೂಲಕ ಉಪಾಸನಾ ಹೇಳಹೊರಟಿದ್ದಾರೆ. URLife.co.in. ಅನ್ನೋ ನೂತನ ವೆಬ್​ಸೈಟ್​ ತೆರೆದಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಉಪಾಸನಾ ಉಸ್ತುವಾರಿ ವಹಿಸಿಕೊಂಡರೆ, ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

Tolloywood

URLife.co.in. ಎಂಬುದು ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಣಿತರು, ವೈದ್ಯರು ಸದ್ಯದ ಲೈಫ್​​ಸ್ಟೈಲ್, ತಂತ್ರಜ್ಷಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಓದುಗರಿಗೆ ಅತ್ಯುತ್ತಮವಾದ ಡಯಟ್​ ಟಿಪ್ಸ್, ನುರಿತವರಿಂದ ಉಪಯುಕ್ತ ಮಾಹಿತಿ, ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಬೆರಳ ತುದಿಯಲ್ಲಿಯೇ URLife.co.in. ನಲ್ಲಿ ಲಭ್ಯವಾಗಲಿದೆ.

ಈ ವಿಶೇಷಗಳ ಗುಚ್ಛದ URLife.co.in. ಗೆ ಗೆಸ್ಟ್​ ಎಡಿಟರ್​ ಆಗಿ ರಶ್ಮಿಕಾ ಮಂದಣ್ಣ ಭಾಗವಹಿಸಿ ಉಪಾಸನಾಗೆ ಹೆಲ್ತಿ ಫುಡ್​ ರೆಡಿ ಮಾಡುವ ಬಗೆಯನ್ನು ಹೇಳಿಕೊಟ್ಟಿದ್ದಾರೆ. ಮಡಿಕೇರಿ ಶೈಲಿಯಲ್ಲಿ ಕೋಳಿ ಪುಟ್ಟು ಕರಿಯನ್ನು ಸಿದ್ಧ ಮಾಡಿ ಬಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿ ದಿನ ರಾತ್ರಿ ಎರಡು ಪೆಗ್​ ವೈನ್​ ಕುಡಿದು ಮಲುಗುವುದಾಗಿಯೂ ರಶ್ಮಿಕಾ ಹೇಳಿದ್ದಾರೆ.

ಹಾಗೇ ಮಾಡುವುದರಿಂದ ರಾತ್ರಿ ಒಳ್ಳೇ ನಿದ್ದೆ ಬರುತ್ತದೆಯಂತೆ. ರಶ್ಮಿಕಾ ಮಾಡಿದ ಕೋಳಿ ಕರಿ ತಿಂದ ಉಪಾಸನಾ ನಗೆ ಚಟಾಕಿ ಹಾರಿಸಿದ್ದಾರೆ. ರಶ್ಮಿಕಾಗೆ ಇನ್ನೂ ಮದುವೆ ಆಗಿಲ್ಲ. ಒಳ್ಳೇ ಟೇಸ್ಟಿ ಅಡುಗೆ ಮಾಡುವುದರಲ್ಲೂ ಅವರು ಮುಂದಿದ್ದಾರೆ.

ಸೋ ಹುಡುಗರು ಇತ್ತ ಕಡೆ ಗಮನಿಸಬಹುದು ಎಂದಿದ್ದಾರೆ. ಇದೆಲ್ಲದಕ್ಕೂ ಕಾರಣ ಅಮ್ಮ ಎಂದು ತಾಯಿಯನ್ನು ನೆನಪು ಮಾಡಿಕೊಂಡಿದ್ದಾರೆ ರಶ್ಮಿಕಾ. ಭಾರತೀಯ ಕಾರ್ಪೊರೇಟ್ ವಲಯದಲ್ಲಿ URLife.co.in 14 ಮಿಲಿಯನ್ ಗೂ ಅಧಿಕ ಓದುಗರನ್ನು ಒಳಗೊಂಡ ಭಾರತದ ಅತಿದೊಡ್ಡ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ.

Tolloywood

ತಜ್ಞರ ಸಲಹೆ, ಅತ್ಯಾವಶ್ಯಕ ಸಂಪಾದಕೀಯ ವಿಷಯ, ವಿವರವಾದ ಮಾಹಿತಿಯನ್ನು ಒದಗಿಸುತ್ತಿದೆ. ಭಾರತದ ಕಿರಿಯ ಮತ್ತು ಅತ್ಯಂತ ಕ್ರಿಯಾತ್ಮಕ ಯೋಗಕ್ಷೇಮ ಮೇಲ್ವಿಚಾರಕರಾದ ಉಪಾಸನ ಕೊನಿಡೆಲಾ ಅವರ ಮಾರ್ಗದರ್ಶನದಲ್ಲಿ URLife.co.in ಅಭಿವೃದ್ಧಿಪಡಿಸಲಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.