ಚಿತ್ರಕಲಾ ಪರಿಷತ್ ನಲ್ಲಿ ಪಂಚವರ್ಣ ಪ್ರರ್ದಶನ (ವರ್ಣ-5).
ಚಿತ್ರಕಲಾ ಪರಿಷತ್ ನಲ್ಲಿ ಪಂಚವರ್ಣ ಪ್ರರ್ದಶನ (ವರ್ಣ-5).
ಚಿತ್ರಕಲೆಯೂ ಮನುಷ್ಯನ ಮನಸ್ಸನ್ನು ಕರಗಿಸುವ ನಿಟ್ಟಿನಲ್ಲಿ ವಿಶಿಷ್ಟ ಸಂಸ್ಕಾರವನ್ನು ಬೆಳೆಸುತ್ತದೆ. ನಾಡಿನ ಶ್ರೇಯಸ್ಸು ಅಳೆಯಲು ಅಲ್ಲಿನ ಕಲೆಯು ಬಹುಮಖ್ಯವಾಗಿರತ್ತದೆ. ಆದಿಕಾಲದಿಂದಲೂ ಮಾನವನ ಬೆನ್ನಹತ್ತಿದ ಚಿತ್ರಕಲೆಯೂ ಸಮಕಾಲಿನವಾಗಿ ವಿಭಿನ್ನ ಮಾಧ್ಯಮಗಳಾಗಿ ತೆರೆದುಕೊಂಡು ಬಹು ವಿಸ್ತಾರವಾಗಿ ಬೆಳೆದಿದೆ ಇಂತಹ ನಿಟ್ಟಿನಲ್ಲಿ ವರ್ಣ-5 ಎಂಬ ಶಿರ್ಶಿಕೆಯ ಸಮೂಹ ಚಿತ್ರಕಲಾ ಪ್ರರ್ದಶನದ ವಿಭಿನ್ನ ಕಲಾಕೃತಿಗಳಲ್ಲಿ ಕಾಣಬಹುದಾಗಿದೆ,ಪಂಚರ್ವಣ(ವರ್ಣ-5) ಎಂಬ ಐವರು ಕಲಾವಿದರು ಭಾಗವಹಿಸಿ ತಮ್ಮದೆ ಆದ ಸೃಜನಾತ್ಮಕ,ಹೊರವಲಯ ಚಿತ್ರ(ಲ್ಯಾಂಡ್ ಸ್ಕೇಪ್),ಸಂಪ್ರದಾಯಕ,ಹಾಗೂ ಸೃಜನಾತ್ಮಕ ಲ್ಯಾಂಡ್ ಸ್ಕೇಪ್ ಈಗೆ ವಿಭಿನ್ನ ಕಲಾಕೃತಿಗಳಿರುವುದರಿಂದ ವರ್ಣ-5 ಎಂಬ ಶಿರ್ಶಿಕೆಯನ್ನಿಟ್ಟು ಕರ್ನಾಟಕ ಚಿತ್ರಕಲಾ ಪರಿಷತ್ ಆರ್ಟ್ ಗ್ಯಾಲರಿ ಬೆಂಗಳೂರಿನಲ್ಲಿ ಪ್ರದರ್ಶಿಸಲಾಯಿತು.
ಈ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಸಮಕಾಲೀನತೆಗೆ ಸ್ಪಂದಿಸಿದಂತೆ ಕಲಾಕೃತಿಗಳಿದ್ದುದು ಕಂಡುಬರುತ್ತದೆ. ಈ ಪ್ರದರ್ಶನದಲ್ಲಿ ಭಾಗವಹಿಸಿದ ಕಲಾವಿದರಾದ ಸುಮಿತ್ರಾಜೈನ್ ,ಶಾಂತಲಾ ಎಚ್.ಡಿ,ಪ್ರಕಾಶ್ ಆನೆಗುಂದಿ,ರುದ್ರಪ್ಪ ಎಸ್,ತಳವಾರ ಹಾಗೂ ಅಮೀನ್ ರೆಡ್ಡಿ ಎನ್.ರಾಯಚೂರು ಭಾಗವಹಿಸಿದ್ದರು.
ಈ ಪ್ರದರ್ಶನವು ದಿನಾಂಕ 11ಏಪ್ರೀಲ್ 2018ರಿಂದ 15ನೇ ಏಪ್ರೀಲ್ 2018ರವರೆಗೆ ಪ್ರದರ್ಶನ ವಿದ್ದಿತ್ತು.ಕಲಾಪ್ರದರ್ಶನವನ್ನು ಶ್ರೀಮತಿ ಎಮ್.ಜೆ.ಕಮಲಾಕ್ಷಿಯವರು. ಕಾರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರು ಉದ್ಘಾಟಿಸಿದರು.ಹಿರಿಯ ಕಲಾವಿದರಾದ ಜೆ.ಎಮ್.ಎಸ್ ಮಣಿಯವರು ಮಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವರ್ಣ-5 ಪ್ರದರ್ಶನದಲ್ಲಿ ಸುಮಿತ್ರಾ ಜೈನ್ ಅವರು ರಚಿಸಿದ ಕಲಾಕೃತಿಗಳಲ್ಲಿ ಮುಖ್ಯವಾಗಿ ಸಂಪ್ರದಾಯಿಕ ರೀತಿಯಲ್ಲಿ ಸೃಜನಾತ್ಮಕವಾಗಿ ಮತ್ತು ಕೆಲವು ಬತ್ತದ ಮಣ್ಣಿನಿಂದ ರಚಿಸಿದ್ದು ಆಕರ್ಷಿತವಾಗಿದ್ದವು,ಶಾಂತಲಾ,ಎಚ್,ಪಿ.ಅವರು ಸಮಕಾಲೀನತೆಯನ್ನು ಬಳಸಿಕೊಂಡು ಸಂಪ್ರಾದಯಿಕ ಚಿತ್ರಗಳು ರಚನೆಯಾಗಿವೆ.ಇವರು ಚಿತ್ರಗಳಲ್ಲಿ ಮುಖ್ಯವಾಗಿ ಕುದುರೆ,ಹಸು,ಎತ್ತು,ಆನೆ,ಮತ್ತು ಸ್ತ್ರೀರೂಪ ಚಿತ್ರಗಳು ಅಕರ್ಷಿತವಾಗಿದ್ದವು.ಪ್ರಕಾಶ ಆನೆಗುಂದಿಯವರು ,ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಲ್ಲಿನ ರಥ,ಕಮಲ್ ಮಹಲ್ ಕಾವಲು ಗೋಪುರ ಈಗೆ ಮುಂತಾದ ಹೊರವಲಯ ಚಿತ್ರಗಳನ್ನು ಜಲವರ್ಣ ಮಾದ್ಯಮದಲ್ಲಿ ರಚಿಸಿರುವುದು ಕಂಡುಬರುತ್ತದೆ.
ರುದ್ರಪ್ಪ ಎಸ್.ತಳವಾರ ಅವರ ಕಲಾಕೃತಿಗಳು ಸೃಜನಾತ್ಮಕವಾಗಿ ಸಮುದ್ರ ದೃಶ್ಯ,ಭೂ ದೃಶ್ಯ,ಸುನಾಮಿ ದೃಶ್ಯದಂತಹ ಕಲಾಕೃತಿಗಳನ್ನು ಅಕಾಲಿಕ ಮಾಧ್ಯಮದಲ್ಲಿ ಚಿತ್ರಿಸಿದ್ದಾರೆ.ಕೊನೆಯದಾಗಿ ಅಮೀನ್ ರೆಡ್ಡಿ ಎನ್ ರಾಯಚೂರು ಇವರ ಕಲಾಕೃತಿಗಳು ಸಮಕಾಲಿನ ಪರಿಸರದ ಮೇಲೆ ಉಂಟಾಗುವ ಪ್ರಭಾವಗಳನ್ನು ಅನುಸರಿಸಿ,ಪರಿಸರ ರಕ್ಷಣೆಯ ಕೆಲವು ಮೂಲ ಅಂಶಗಳನ್ನು ಸೃಜನಾತ್ಮಕವಾಗಿ ತಮ್ಮದೇ ಆದ ಶೈಲಿಯಲ್ಲಿ ಚಿತ್ರಿಸಿರುವುದು ಕಂಡುಬರುತ್ತದೆ. ಇಂತಹ ನಿಟ್ಟಿನಲ್ಲಿ ವರ್ಣ ಚಿತ್ರಕಲಾ ಪ್ರದರ್ಶನವು ಚಿತ್ರಕಲಾ ಪರಿಷತ್ ನಲ್ಲಿ ಐದು ದಿನ ಕಾಲ ಅನೇಕ ಕಲಾವಿದರು,ಕಲಾಆಸಕ್ತರು,ಜನ ಸಮಾನ್ಯರು ಕಲಾಕೃತಿಗಳನ್ನು ವೀಕ್ಷಿಸುವ ಮೂಲಕ ಕಲಾಪ್ರದರ್ಶನವನ್ನು ಯಶಸ್ವಿ ಗೈದಿದ್ದಾರೆ. ಅಮೀನ್ ರೆಡ್ಡಿ ಎನ್.ಆರ್.
Recent comments