Skip to main content
ಹಿರಿಚೇತನಗಳ ಹಾಗು ನವಪ್ರತಿಭೆಗಳ ಸಮಾಗಮ  'ಮೇಡ್ ಇನ್ ಬೆಂಗಳೂರು'

ಹಿರಿಚೇತನಗಳ ಹಾಗು ನವಪ್ರತಿಭೆಗಳ ಸಮಾಗಮ 'ಮೇಡ್ ಇನ್ ಬೆಂಗಳೂರು'

ಹಿರಿಚೇತನಗಳ ಹಾಗು ನವಪ್ರತಿಭೆಗಳ ಸಮಾಗಮ 'ಮೇಡ್ ಇನ್ ಬೆಂಗಳೂರು'

Kannada

ಚಿತ್ರರಂಗದಲ್ಲಿ ಸುಮಾರು ೫೦ ವರ್ಷಗಳಿಂದ ಕಲಾಸೇವೆಯನ್ನು ಸಲ್ಲಿಸಿಕೊಂಡು ಬಂದಿರುವ ಶ್ರೀಯುತ ಅನಂತನಾಗ್ ಅವರು ಆಯ್ದುಕೊಳ್ಳುವ ಚಿತ್ರಗಳು ವಿಭಿನ್ನವಾಗಿರುವುದಲ್ಲದೆ, ಹೊಸ ನಟ-ನಿರ್ದೇಶಕರನ್ನು, ನವ ನಿರ್ಮಾಪಕರನ್ನು ಹಾಗು ಹೊಸ ಕಥಾವೈಖರಿಯನ್ನು ಕನ್ನಡ ಜನತೆಗೆ ಪರಿಚಿಸಿರುವುದನ್ನು ನಾವು ಕಂಡುಕೊಂಡು ಬಂದಿದ್ದೇವೆ.

ಈ ಸಾಲಿನಲ್ಲಿ ಈಗ ಮುಂದೆ ನಿಂತಿರುವುದು ನವಪ್ರತಿಭೆ ಮಧುಸೂಧನ್ ಗೋವಿಂದ್ ಅವರು ನಾಯಕರಾಗಿ ನಟಿಸಿರುವ 'ಮೇಡ್ ಇನ್ ಬೆಂಗಳೂರು' - ಬೆಂಗಳೂರಿನ ಸ್ಟಾರ್ಟಪ್ ವ್ಯವಸ್ಥೆಯ ಬಗ್ಗೆ ಈ ಸಿನಿಮಾವಾಗಿದ್ದು, ಹಿರಿಯ ನಟರಾದ ಸಾಯಿಕುಮಾರ, ರಾಷ್ಟ್ರ ಪ್ರಶಸ್ತಿ ವಿಜೇತರಾದ ಪ್ರಕಾಶ್ ಬೆಳವಾಡಿಯವರು ಕೂಡ ಪಾತ್ರ ವಹಿಸಿದ್ದಾರೆ. ಲಕ್ಷಾಂತರ ಕನಸುಗಳನ್ನು ತಮ್ಮ ಮುಗ್ಧವಾದ ಕಣ್ಣುಗಳಲ್ಲಿ ಹೊತ್ತಿರುವ ಮೂವರು ಯುವಕರ ಕಥೆಯಲ್ಲಿ ಮಧುಸೂಧನ್ ಗೋವಿಂದ್ ಅವರ ಜೊತೆಗೆ ಪುನೀತ್ ಮಾಂಜಾ, ವಂಶೀಧರ, ಹಿಮಾಂಶಿ ವರ್ಮಾ, ಶಂಕರಮೂರ್ತಿ ಹಾಗು ಅನುರಾಗ್ ಪುತ್ತಿಗೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಶೇಷವಾಗಿ, ಜೋರ್ಡಇಂಡಿಯಾನ್ ಖ್ಯಾತಿಯ ವಿನೀತ್ ಕುಮಾರ ಹಾಗು ಹಿರಿಯ ನಟರಾದ ಮಂದೀಪ್ ರೈ, ಸುಧಾ ಬೆಳವಾಡಿ , ಮಂಜುನಾಥ್ ಹೆಗ್ಡೆ ಹಾಗು ರಮೇಶ್ ಭಟ್ ಕೂಡ ಮೇಡ್ ಇನ್ ಬೆಂಗಳೂರಿನಲ್ಲಿ ತಮ್ಮ ಕಲಾಕೃತಿಯನ್ನು ಧಾರೆ ಎರೆದಿದ್ದಾರೆ.

ಉದ್ಯಮಿ ಶ್ರೀ ಬಾಲಕೃಷ್ಣ ಬಿ. ಎಸ್. ಅವರು 'ರಜನಿ ಥರ್ಸ್ಡೆ ಸ್ಟೋರೀಸ್ ' ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಪ್ರದೀಪ್ ಕೆ. ಶಾಸ್ತ್ರೀ ಅವರು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಅಶ್ವಿನ್ ಪಿ. ಕುಮಾರ ಅವರ ಸಂಗೀತ ನಿರ್ದೇಶನ, ಭಜರಂಗ್ ಕೋಣಥಮ್ ಅವರ ಛಾಯಾಗ್ರಹಣ ಹಾಗು ಹಲವಾರು ಕಲಾತಂತ್ರಜ್ಞರ ಪರಿಶ್ರಮ 'ಮೇಡ್ ಇನ್ ಬೆಂಗಳೂರು'...

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.