Skip to main content
​    ​"ಪದವಿಪೂರ್ವ" ಚಿತ್ರಕ್ಕೆ ನಾಯಕಿಯಾಗಿ ಮಂಗಳೂರಿನ ಬೆಡಗಿ "'ಯಶಾ ಶಿವಕುಮಾರ್'ಎಂಟ್ರಿ.

"ಪದವಿಪೂರ್ವ" ಚಿತ್ರಕ್ಕೆ ನಾಯಕಿಯಾಗಿ ಮಂಗಳೂರಿನ ಬೆಡಗಿ "'ಯಶಾ ಶಿವಕುಮಾರ್'ಎಂಟ್ರಿ.

"ಪದವಿಪೂರ್ವ" ಚಿತ್ರಕ್ಕೆ ನಾಯಕಿಯಾಗಿ ಮಂಗಳೂರಿನ ಬೆಡಗಿ "'ಯಶಾ ಶಿವಕುಮಾರ್'ಎಂಟ್ರಿ.

Kannada new film

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ "ಪದವಿಪೂರ್ವ" ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ 'ಆಳ್ವಾಸ್ ಕಾಲೇಜ್'ನ ಇಂಜಿನಿಯರಿಂಗ್ ವಿದ್ಯಾರ್ಥಿನಿ 'ಯಶಾ ಶಿವಕುಮಾರ್' " ಕನ್ನಡ ಚಿತ್ರರಂಗವನ್ನು ಪ್ರವೇಶಿಸಲು ಸಜ್ಜಾಗಿದ್ದಾಳೆ. 2019 ವರ್ಷದಲ್ಲಿ 'ಫ್ಯಾಶನ್ ಎಬಿಸಿಡಿ' ಸಂಸ್ಥೆ ಆಯೋಜಿಸಿದ್ದ "ಮಿಸ್ ಬೆಂಗಳೂರು 2019 " "ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019" ಹಾಗೂ ಮುಂಬೈನಲ್ಲಿ ನಡೆದ "ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019" ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

Kannada new film

ಈಕೆ ಭರತನಾಟ್ಯ ಮತ್ತು ಕಥಕ್ ನೃತ್ಯ ಕಲಾವಿದೆಯಾಗಿದ್ದು, ಫ್ರೀ ಸ್ಟೈಲ್, ಬಾಲಿವುಡ್, ಮಣಿಪುರಿ ಮತ್ತು ಜಾನಪದದಂತಹ ಇತರ ನೃತ್ಯ ಪ್ರಕಾರಗಳನ್ನೂ ಚೆನ್ನಾಗಿ ಅರಿತಿದ್ದಾಳೆ.

Kannada new film

ಇದಷ್ಟೇ ಅಲ್ಲದೆ ದೇಶದ ಅತ್ಯಂತ ಸುಪ್ರಸಿದ್ಧ ವಸ್ತ್ರ ವಿನ್ಯಾಸಕರು ಮತ್ತು ಛಾಯಾಗ್ರಾಹಕರುಗಳೊಂದಿಗೆ ಕೆಲಸ ಮಾಡಿರುವ ಅನುಭವವನ್ನೂ ಹೊಂದಿದ್ದಾರೆ. ಈಕೆಯ ಈ ಇಡೀ ಒಂದು ವರ್ಷದ ಮಾಡೆಲಿಂಗ್ ಹಾದಿ ಈಕೆಯನ್ನು ಸಿನಿಮಾ ಲೋಕಕ್ಕೆ ಕಾಲಿಡುವಂತೆ ಮಾಡಿದೆಯಲ್ಲದೆ, ನಟನೆಯನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಲು ಪ್ರೇರೇಪಿಸಿದೆ.

Kannada new film

ಧೃಢ ಸಂಕಲ್ಪದೊಂದಿಗೆ ಸಕಾರಾತ್ಮಕ ಮನೋಭಾವದಿಂದ 'ಪದವಿಪೂರ್ವ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಸಜ್ಜಾಗಿರುವ ಈ ಕಲಾವಿದೆ, ಕಠಿಣ ಪರಿಶ್ರಮದ ಮೂಲಕ ಚಿತ್ರೋದ್ಯಮದಲ್ಲಿ ಏನನ್ನಾದರೂ ಸಾಧಿಸಿಯೇ ತೀರುತ್ತೇನೆಂಬ ಆಶಾಭಾವ ಹೊಂದಿದ್ದಾರೆ. ಪ್ರತಿಭೆಯ ಜೊತೆಗೆ ಆತ್ಮವಿಶ್ವಾಸವನ್ನೂ ಮೈಗೂಡಿಸಿಕೊಂಡಿರುವ ಈ ಸುಂದರ ಕಲಾವಿದೆ, ಚಿತ್ರರಂಗದಲ್ಲಿ ಮುಂದೊಂದು ದಿನ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದು ಚಿತ್ರದ ನಾಯಕ 'ಪೃಥ್ವಿ ಶಾಮನೂರ್' ಹಾಗು ನಾಯಕಿ 'ಅಂಜಲಿ ಅನೀಶ್' ಗೂ ಕೂಡ ಚೊಚ್ಚಲ ಸಿನಿಮಾ ಆಗಿದ್ದು ಚಿತ್ರಕ್ಕೆ 'ಅರ್ಜುನ್ ಜನ್ಯ' ಸಂಗೀತ ಹಾಗು 'ಸಂತೋಷ್ ರೈ ಪತಾಜೆ' ಅವರ ಛಾಯಾಗ್ರಹಣ ಇರಲಿದೆ.

Kannada new film

ಹದಿಹರೆಯದ ಮೋಜು, ಮಸ್ತಿ, ಮೋಹ, ಸ್ನೇಹಗಳ ಕುರಿತಾದ ಕಥೆ ಇದಾಗಿದ್ದು ಚಿತ್ರವನ್ನು ಮಲೆನಾಡಿನ ಅತ್ಯಂತ ಸುಂದರ ತಾಣಗಳಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಉಳಿದಂತೆ ಬೇರೆ ಪಾತ್ರಗಳನ್ನು ಆಡಿಶನ್ ಮೂಲಕ ಆಯ್ಕೆ ಮಾಡಲಾಗಿದ್ದು, ಮತ್ತಷ್ಪು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಹಾದಿಯಲ್ಲಿ ತಂಡ ಕೆಲಸ ಮಾಡುತ್ತಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.