"ತ್ರಿಶೂಲಂ" ಚಿತ್ರಕ್ಕೆ ವಿದೇಶಿಯರಿಂದಲೂ ಬೇಡಿಕೆ.
"ತ್ರಿಶೂಲಂ" ಚಿತ್ರಕ್ಕೆ ವಿದೇಶಿಯರಿಂದಲೂ ಬೇಡಿಕೆ.

ರಿಯಲ್ ಸ್ಟಾರ್ ಉಪೇಂದ್ರ - ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಚಿತ್ರ ಜನವರಿಯಲ್ಲಿ ತೆರೆಗೆ ಆರ್ ಎಸ್ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರಕ್ಕೆ ಓಂಪ್ರಕಾಶ್ ರಾವ್ ನಿರ್ದೇಶನ* . ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಆರ್ ಎಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ "ತ್ರಿಶೂಲಂ" ಚಿತ್ರ ಚಿತ್ರೀಕರಣ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ.
ಈ ಚಿತ್ರದ ಬಗ್ಗೆ ತಿಳಿದುಕೊಂಡಿರುವ ವಿದೇಶಿಗರು(ಇಂಗ್ಲೆಂಡ್) ಈ ಚಿತ್ರದ ವ್ಯಾಪಾರಕ್ಕೆ ಮುಂದೆ ಬಂದಿದ್ದಾರೆ. ಮಾತುಕತೆ ಅಂತಿಮಹಂತದಲ್ಲಿದೆ ಎಂದು ನಿರ್ಮಾಪಕ ಆರ್ ಶ್ರೀನಿವಾಸ್ ತಿಳಿಸಿದ್ದಾರೆ. ಇದೇ 26 ರಿಂದ ಹೈದರಾಬಾದ್ ನಲ್ಲಿ ಗಣೇಶ್ ಮಾಸ್ಟರ್ ಅವರ ಸಾರಥ್ಯದಲ್ಲಿ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ನಡೆಯಲಿದೆ. ಉಪೇಂದ್ರ, ರವಿಚಂದ್ರನ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಜನವರಿ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಆರ್ ಶ್ರೀನಿವಾಸ್ ಹಾಗೂ ಬಿ.ಎಸ್ ಕಿರಣ್ ಗೌಡ ನಿರ್ಮಿಸುತ್ತಿರುವ ಈ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ಚಂದ್ರಮೌಳಿ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ರವಿ ಛಾಯಾಗ್ರಹಣ, ಲಕ್ಷ್ಮಣ ರೆಡ್ಡಿ ಸಂಕಲನ ಹಾಗೂ ಡಾ||ರವಿವರ್ಮ, ಗಣೇಶ್ ಅವರ ಮಾಸ್ಟರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಉಪೇಂದ್ರ, ರವಿಚಂದ್ರನ್.ವಿ, ಶಾನ್ವಿ ಶ್ರೀವಬೆಳವಾಡಿ, ನಿಮಿಕ ರತ್ನಾಕರ್, ಸಾಧುಕೋಕಿಲ, ಪ್ರದೀಪ್ ರಾವತ್, ನಾಗಶೇಖರ್, ರಂಗಾಯಣ ರಘು, ಅಚ್ಯುತರಾವ್, ಸುಧಾ ಬೆಳವಾಡಿ, ಉಗ್ರಂ ಮಂಜು ಮುಂತಾದವರು ಅದ್ದೂರಿ ತಾರಾಬಳಗ ಈ ಚಿತ್ರಕ್ಕಿದೆ. ಮುಂಬೈ ಬೆಡಗಿ ಅದಿತಿ ಆರ್ಯ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ. .
Recent comments