Skip to main content
ಕನ್ನಡದ ಮನರೂಪ ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ 3  ಪ್ರಶಸ್ತಿಗಳ ಗರಿ .

ಕನ್ನಡದ ಮನರೂಪ ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ .

ಕನ್ನಡದ ಮನರೂಪ ಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ .

Raichur

ಕನ್ನಡದ ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ‘ಮನರೂಪ’ಕ್ಕೆ ಪ್ರತಿಷ್ಠಿತ

10ನೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ 3 ಪ್ರಶಸ್ತಿಗಳ ಗರಿ ತನ್ನದಾಗಿಸಿ ಕೊಂಡಿದೆ.

ಕಿರಣ್ ಹೆಗಡೆ ಯವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ; ಗೋವಿಂದರಾಜ್‌ಗೆ ಅತ್ಯುತ್ತಮ ಸಿನಿಮಾ ಛಾಯಾಗ್ರಾಹಕ ಪ್ರಶಸ್ತಿ; ಅಮೋಘ್ ಸಿದ್ಧಾರ್ಥ್ಗೆ ಅತ್ಯುತ್ತಮ ಸಹನಟ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ.

ಬೆಂಗಳೂರು, ಮೇ 2: ಕನ್ನಡದ ಹೊಸ ತಲೆಮಾರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಮನರೂಪ ಪ್ರತಿಷ್ಠಿತ ತಂಡಕ್ಕೆ ‘10ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ನ ಸಮಾರಂಭದಲ್ಲಿ ಮುರೂ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಿರ್ದೇಶಕ ಕಿರಣ್ ಹೆಗಡೆ ಅವರಿಗೆ ತಮ್ಮ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು, ಗೋವಿಂದರಾಜ್ ಅವರು ಅತ್ಯುತ್ತಮ ಸಿನಿಮಾ ಛಾಯಾಗ್ರಹಣ ಪ್ರಶಸ್ತಿಯನ್ನು ಹಾಗೂ ಅಮೋಘ್ ಸಿದ್ಧಾರ್ಥ್ ಅವರು ಅತ್ಯುತ್ತಮ ಸಹನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಹೆಸರು ಗಳಿಸಿ ಚಿತ್ರರಂಗಕ್ಕೆ ಕಾಲಿಟ್ಟ ಕಿರಣ್ ಹೆಗಡೆ ನಿರ್ದೇಶಿಸಿದ ಮೊದಲ ಚಿತ್ರ ಮನರೂಪ. ಹೊಸ ತಲೆಮಾರಿನವರ ಆತ್ಮರತಿ, ಪ್ರೀತಿಪಾತ್ರರ ನಿರ್ಲಕ್ಷö್ಯದ ಕಾರಣದಿಂದ ಅವರಲ್ಲಿ ಮೂಡಿದ ನಾರ್ಸಿಸಿಸಂ, ಒಂಟಿತನದ ಸಮಸ್ಯೆ, ಸ್ವಯಂ ಹಾನಿ, ವಿಚ್ಛೇದನ, ಮದುವೆಯಲ್ಲಿ ಪ್ರೀತಿಯ ವೈಫಲ್ಯ, ಮದುವೆಯಿಲ್ಲದ ಬದುಕು, ಲಿವಿಂಗ್ ಟುಗೆದರ್, ಎಲ್ಲದರಿಂದಲೂ ಓಡಿಹೋಗುವ ಬಯಕೆ ಮುಂತಾದ ಭಾವನೆಗಳನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಕೊಟ್ಟ ಚಿತ್ರವಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿರಸಿ ಹಾಗೂ ಸಿದ್ದಾಪುರದ ದಟ್ಟ ಕಾಡಿನಲ್ಲಿ ಇಡೀ ಸಿನಮಾ ಚಿತ್ರೀಕರಣಗೊಂಡಿದ್ದು. ಬಿಡುಗಡೆಯಾದ ಸಮಯದಲ್ಲಿ ತನ್ನ ವಿಭಿನ್ನ ಕಥಾ ಹಂದರ, ಹೊಸ ತಲೆಮಾರಿನವರಿಗೇ ಹೆಚ್ಚಾಗಿ ಕನೆಕ್ಟ್ ಆಗುವ ಡಾರ್ಕ್ ವೆಬ್ ಹಾಗೂ ರೆಡ್ ರೂಂ ಕ್ರೆöÊಮ್‌ಗಳಿಂದಾಗಿ ಸಿನಿಮಾ ಅಷ್ಟೇನೂ ಪ್ರೇಕ್ಷಕರನ್ನು ಆಕರ್ಷಿಸಿರಲಿಲ್ಲ. ಆದರೆ, ನಂತರ ನಿಧಾನವಾಗಿ ರಾಷ್ಟಿಯ ಹಾಗೂ ಅಂತಾರಾಷ್ಟಿಯ ಚಿತ್ರೋತ್ಸವಗಳಲ್ಲಿ ವ್ಯಾಪಕ ಮನ್ನಣೆ ಗಳಿಸಿದ್ದು , ಚಿತ್ರ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಟರ್ಕಿಯ ಇಸ್ತಾಂಬುಲ್ ಫಿಲ್ಮ್ ಅವಾರ್ಡ್ಸ್ ಚಲನಚಿತ್ರೋತ್ಸವದಲ್ಲ್ಲಿ, ಅಮೆರಿಕದ ಮಯಾಮಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಾಗೂ ಮುಂಬೈನ ಕೆಫೆ ಇರಾನಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಈಗ ಅಮೆಜಾನ್ ಪ್ರೆöÊಮ್‌ನಲ್ಲಿ ಮನರೂಪ ಪ್ರದರ್ಶನಗೊಳ್ಳುತ್ತಿದ್ದು,

ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಪ್ರಕೃತಿ ಹಾಗೂ ಸಿನಿಮಾಗಳ ಬಗ್ಗೆ ತಮಗಿರುವ ಕಕ್ಕುಲಾತಿಯನ್ನು ಬೆರೆಸಿ ಮನರೂಪ ಸಿನಿಮಾ ನಿರ್ಮಿಸಿದ ಕಿರಣ್ ಹೆಗಡೆ ಅವರ ಪ್ರತಿಭೆಗೆ ಈ ಪ್ರಶಸ್ತಿಗಳ ಮಳೆಯೇ ಸಾಕ್ಷಿ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮೆಣಸಿ ಎಂಬ ಹಳ್ಳಿಯಿಂದ ಬಂದ ಕಿರಣ್ ಹೆಗಡೆ, ಕನ್ನಡದಲ್ಲಿ ಇವತ್ತಿನ ಕಾಲಕ್ಕೆ ಅತ್ಯಂತ ಪ್ರಸ್ತುತವಾದ ಹಾಗೂ ಹೊಸ ತಲೆಮಾರಿನವರ ನಾರ್ಸಿಸಿಸ್ಟಿಕ್ ಮನಸ್ಥಿತಿಯನ್ನೂ, ಅದರಿಂದ ಸಮಾಜ ಮತ್ತು ಅಸ್ತಿತ್ವವಾದದ ಮೇಲೆ ಆಗುವ ಪ್ರಭಾವವನ್ನೂ ಒಳಗೊಂಡ ಚಿತ್ರವೊಂದನ್ನು ನಿರ್ಮಿಸಬೇಕೆಂಬ ಹಟಕ್ಕೆ ಬಿದ್ದು ಈ ಚಿತ್ರ ನಿರ್ಮಿಸಿದ್ದಾರೆ. “ನನಗೂ, ನಮ್ಮ ಚಿತ್ರ ತಂಡಕ್ಕೂ ಈ ಪ್ರಶಸ್ತಿಗಳು ಬಹಳ ಅಮೂಲ್ಯವಾದುವು.

ಹೊಸ ತಲೆಮಾರಿನವರ ಯೋಚನಾ ಶೈಲಿಯನ್ನೂ, ಅವರ ಮೇಲಿರುವ ಒತ್ತಡವನ್ನೂ ಮತ್ತು ಆ ಒತ್ತಡದಿಂದಾಗಿ ಹೇಗೆ ಅವರು ಬದುಕನ್ನೇ ಅರ್ಥಹೀನವೆಂಬAತೆ ಹಾಗೂ ಅಸ್ತಿತ್ವವಾದವನ್ನೇ ನಿರಾಕರಿಸುವಂತೆ ಬದುಕುತ್ತಾರೆಂಬುದನ್ನೂ ಸಮಾಜಕ್ಕೆ ತೋರಿಸಬೇಕಿತ್ತು. ಮನರೂಪ ಸಿನಿಮಾದಲ್ಲಿ ಬಹಳ ವಿಕ್ಷಿಪ್ತವಾಗಿ ಇದನ್ನು ತೋರಿಸಿದ್ದೇವೆ.

ಈ ಸಿನಿಮಾದಲ್ಲಿರುವ ಕೆಲ ಪಾತ್ರಗಳು ಬಹಳ ವಿಚಿತ್ರವಾಗಿ ವರ್ತಿಸುತ್ತವೆ. ಅವು ಮನುಷ್ಯನ ಬದುಕೇ ಅರ್ಥಹೀನ ಎನ್ನುತ್ತವೆ. ಚಿತ್ರಕತೆ ಬರೆಯುವಾಗ ನನಗೆ ಈ ಪಾತ್ರಗಳು ತಮ್ಮ ಕುಟುಂಬದ ಸದಸ್ಯರಿಂದ ಪ್ರಭಾವಿತರಾಗಿ ಹೀಗೆ ವರ್ತಿಸುತ್ತವೆಯೆಂಬುದು ಇದ್ದಕ್ಕಿದ್ದಂತೆ ಹೊಳೆಯಿತು. ಕುಟುಂಬದ ಆ ಸದಸ್ಯರ ಬದುಕೂ ವಿಕ್ಷಿಪ್ತವಾಗಿಯೇ ಇದ್ದಿರುತ್ತದೆ. ಹೀಗಾಗಿ ಮನರೂಪದ ಮುಖ್ಯ ಆಶಯವೇ ಹೊಸ ತಲೆಮಾರಿನವರ ಬದುಕು ಹಾಗೂ ಅವರ ಗೊಂದಲಗಳು. ಬದುಕಿನ ಒಂಟಿತನ ಹಾಗೂ ಜೀವನದ ಅರ್ಥಹೀನತೆಯನ್ನು ತೋರಿಸಲು ನಾನು ಕಾಡಿನ ಹಿನ್ನೆಲೆಯನ್ನು ಆಯ್ಕೆ ಮಾಡಿಕೊಂಡೆ.

ಬಹುಶಃ ಈ ಸಿನಿಮಾದ ಕಥಾವಸ್ತುವಿನ ಪ್ರಸ್ತುತತೆ ಹಾಗೂ ಇವತ್ತಿನ ತಲೆಮಾರಿಗೆ ಇದು ಹೇಗೆ ಮಿಡಿಯುತ್ತದೆ ಎಂಬುದು ವಿವಿಧ ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ಚಿತ್ರೋತ್ಸವಗಳಲ್ಲಿ ಜ್ಯೂರಿಗಳನ್ನು ಆಕರ್ಷಿಸುತ್ತಿರುವುದರಿಂದ ಮನರೂಪ ಸಿನಿಮಾಕ್ಕೆ ಹಾಗೂ ಚಿತ್ರತಂಡಕ್ಕೆ ಸಾಕಷ್ಟು ಪ್ರಶಸ್ತಿಗಳು ಬರುತ್ತಿವೆ ಎಂದು ನಾನು ನಂಬಿದ್ದೇನೆ” ಎನ್ನುತ್ತಾರೆ ಕಿರಣ್ ಹೆಗಡೆ. ಮನರೂಪದ ಇಡೀ ಕತೆ ಒಂದು ದಿನದಲ್ಲಿ ನಡೆಯುತ್ತದೆ.

ನೋಡುಗರಿಗೆ ಥ್ರಿಲ್ ನೀಡುವುದರ ಜೊತೆಗೆ ಸಾಧ್ಯವಾದರೆ ಅವರು ತಮಗಿರುವ ಬೇರೆ ಬೇರೆ ರೀತಿಯ ಗೀಳಿನ ಜೊತೆಗೆ ಕನೆಕ್ಟ್ ಆಗಲು ಅವಕಾಶ ನೀಡುತ್ತದೆ. 5 ಸ್ನೇಹಿತರು ಕಾಲೇಜು ಮುಗಿಸಿ ಹಲವಾರು ವರ್ಷಗಳ ನಂತರ ಒಂದು ಗೆಟ್ ಟುಗೆದರ್‌ಗೆ ಪ್ಲಾನ್ ಮಾಡುವುದರಿಂದ ಸಿನಿಮಾ ಶುರುವಾಗುತ್ತದೆ. ಪಶ್ಚಿಮ ಘಟ್ಟದ ದಟ್ಟ ಕಾಡಿಗೆ ಅವರ ಪ್ರಯಾಣ ಸಾಗುತ್ತದೆ. ತಮ್ಮಿಂದಲೇ ತಾವು ಓಡಿಹೋಗುವ ಅವರ ಮನಸ್ಥಿತಿ ಅವರನ್ನು ಕರಡಿ ಗುಹೆಯನ್ನು ಹುಡುಕಲು ಹಚ್ಚುತ್ತದೆ.

ಆ ಮಾರ್ಗದಲ್ಲಿ ಅವರಿಗೆ ಹಿಂದಿನದನ್ನು ಮೆಲುಕು ಹಾಕಲು ಹಾಗೂ ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳಲು ಒಂದಷ್ಟು ಅವಕಾಶ ಸಿಗುತ್ತದೆ. ಎಲ್ಲರೂ ಒಟ್ಟಿಗಿದ್ದ ಹಳೆಯ ದಿನಗಳು ಎಷ್ಟು ಚೆನ್ನಾಗಿದ್ದವು, ನಂತರ ಏನೇನು ಅವಕಾಶಗಳನ್ನು ಕಳೆದುಕೊಂಡೆವು ಎಂಬುದರಿAದ ಹಿಡಿದು ಬದುಕಿನ ನೈತಿಕ ಚೌಕಟ್ಟಿನವರೆಗೆ ನಾನಾ ವಿಚಾರಗಳು ಅವರಲ್ಲಿ ಬಂದುಹೋಗುತ್ತವೆ.

ಹೋಗಬೇಕಾದ ಸ್ಥಳ ಸಮೀಪಿಸುತ್ತಿದ್ದರೂ ಅಲ್ಲಿ ತಮಗಾಗಿ ಕಾಯುತ್ತಿರುವ ಅನೂಹ್ಯ ಬೆಳವಣಿಗೆಗಳ ಬಗ್ಗೆಯಾಗಲೀ ಅಥವಾ ದಾರಿಯುದ್ದಕ್ಕೂ ಯಾರೋ ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಬಗ್ಗೆಯಾಗಲೀ ಅವರಿಗೆ ಸುಳಿವೇ ಇರುವುದಿಲ್ಲ. ಹೋಗುತ್ತಿರುವ ಜಾಗದ ದುರ್ಗಮತೆ ಹಾಗೂ ಗೊತ್ತಿಲ್ಲದ ಸ್ಥಳದ ಸವಾಲು ಒಂದೆಡೆಯಾದರೆ, ಮಾಸ್ಕ್ಫೋಬಿಯಾದ ವಿಚಿತ್ರ ಪಾತ್ರಗಳನ್ನು ಎದುರಾಗುವ ಸನ್ನಿವೇಶಗಳು ಇನ್ನೊಂದೆಡೆ. ತೀವ್ರವಾದ ನಾರ್ಸಿಸಿಸ್ಟಿಕ್ ಮನಸ್ಥಿತಿಯ ಬಲೆಯಲ್ಲಿ ಹೆಣೆದ ಸಾಕಷ್ಟು ಖೆಡ್ಡಾಗಳು ಚಿತ್ರದಲ್ಲಿವೆ. ಮನರೂಪದಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಯಶ್ ರಾಮ್ ಹಾಗೂ ಶಿವಪ್ರಸಾದ್ ಹೊಸ ತಲೆಮಾರಿನ ಯುವಕರ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅಮೋಘ ಸಿದ್ಧಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಅವರು ನಾರ್ಸಿಸಿಸ್ಟಿಕ್ ಮನಸ್ಥಿತಿಯಲ್ಲಿ ಮಿಂದೆದ್ದ ಮುಸುಕುಧಾರಿಗಳಾಗಿ ಮುಖ್ಯ ಪಾತ್ರಗಳಿಗೆ ಏನೂ ಕಡಿಮೆಯಿಲ್ಲದಂತೆ ನಟಿಸಿದ್ದಾರೆ.

ಯಾವುದೇ ಉದ್ದೇಶವಿಲ್ಲದೆ ಬದುಕುವ ಅವರ ಬದುಕಿನ ಉದ್ದೇಶವೇ ಸಿನಿಮಾಕ್ಕೆ ಥ್ರಿಲ್ ನೀಡುತ್ತದೆ. ಶರವಣ ಸಂಗೀತ ನೀಡಿದ್ದಾರೆ. ಪತ್ರಕರ್ತ ಮತ್ತು ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.