ಹರಾಜಿಗೂ ಮುನ್ನ ರಿಕ್ಕಿ ಪಾಂಟಿಂಗ್ ನೀಡಿದ ಸುಳಿವು ಏನು .?
ಹರಾಜಿಗೂ ಮುನ್ನ ರಿಕ್ಕಿ ಪಾಂಟಿಂಗ್ ನೀಡಿದ ಸುಳಿವು ಇದು !
ಕೋಲ್ಕತಾ: ಮುಂದಿನ 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ಅವರು ಇಬ್ಬರು ಬ್ಯಾಟ್ಸ್‌ಮನ್, ಆಲ್ರೌಂಡರ್‌ಗಳು ಹಾಗೂ ಇಬ್ಬರು ಬೌಲರ್‌ಗಳನ್ನು ಖರೀದಿಸುವ ಬಗ್ಗೆ ಹರಾಜು ಆರಂಭವಾಗುವ ಮುನ್ನ ಸುಳಿವು ನೀಡಿದ್ದಾರೆ. “ನಮ್ಮ ತಂಡ ಭಾರತೀಯ ಆಟಗಾರರನ್ನೊಳಗೊಡ ಬಲಿಷ್ಟ ತಂಡವಾಗಿದೆ.
ಆದಾಗ್ಯೂ ನಾವು ಹರಾಜಿನಲ್ಲಿ ಇಬ್ಬರು ಬ್ಯಾಟ್ಸ್‌ಮನ್, ಆಲ್ರೌಂಡರ್‌ಗಳು ಹಾಗೂ ಇಬ್ಬರು ಬೌಲರ್‌ಗಳ ಖರೀದಿಗಾಗಿ ಮುಂದಾಗಿದ್ದೇವೆ, ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಟ್ವೀಟ್ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿ ಕೋಲ್ಕತಾದಲ್ಲಿ ಐಪಿಎಲ್ ಹರಾಜು ನಡೆಯುತ್ತಿದ್ದು, 186 ಭಾರತೀಯ ಆಟಗಾರರು ಹಾಗೂ 143 ಸಾಗರೋತ್ತರ ಆಟಗಾರರು ಸೇರಿದಂತೆ ಒಟ್ಟು 332 ಆಟಗಾರರು ಹರಾಜಿಗೆ ಒಳಗಾಗಿದ್ದಾರೆ. ಇಂಗ್ಲೆಂಡ್ ಮೂಲಕ ಹಗ್ ಎಡ್ಮೇಡ್ಸ್ ಅವರು ಹರಾಜು ಕೂಗಲಿದ್ದಾರೆ.
ಹರಾಜು ಪ್ರಕ್ರಿಯೆಗೆ ಒಟ್ಟು 997 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಕ್ರಿಸ್ ಲೀನ್, ಮಿಚೆಲ್ ಸ್ಟಾರ್ಕ್, ಗ್ಲೇನ್ ಮ್ಯಾಕ್ಸ್‌ವೆಲ್, ಡೇಲ್ ಸ್ಟೇಯ್ನ್ ಹಾಗೂ ಏಂಜೆಲೊ ಮ್ಯಾಥ್ಯೂಸ್ ಅವರು 2 ಕೋಟಿ ರೂ. ಮೂಲ ಬೆಲೆ ಪಡೆದ ವಿದೇಶಿ ಆಟಗಾರರಾಗಿದ್ದಾರೆ. ಇವರ ಮೇಲೆ ಎಲ್ಲ ಫ್ರಾಚೈಸಿಗಳ ಕಣ್ಣಿದೆ. ಕರ್ನಾಟಕ ರಾಬಿನ್ ಉತ್ತಪ್ಪ 1.5 ಕೋಟಿ ರೂ. ಮೂಲ ಬೆಲೆ ಹೊಂದಿರುವ ಭಾರತದ ಏಕೈಕ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ.
Recent comments