ಮಹಿಳೆಯರ ಮತದಾನ ಸೆಳೆಯಲು ನಿರ್ಧಾರ ಚಿತ್ರನಟಿ ಪೂಜಾ ರಮೇಶ್ ರಾಯಚೂರು ಸೆ. 30
ಮಹಿಳೆಯರ ಮತದಾನ ಸೆಳೆಯಲು ನಿರ್ಧಾರ ಚಿತ್ರನಟಿ ಪೂಜಾ ರಮೇಶ್ ರಾಯಚೂರು ಸೆ. 30 .

ಮುಂಬರುವ ರಾಯಚೂರು ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಚಿತ್ರನಟಿ ಸಮಾಜ ಸೇವಕಿ ಮಿಸ್ ಇಂಡಿಯಾ ಡಾ ಪೂಜಾ ರಮೇಶ್ ಸ್ಪರ್ಧಿಸಲು ಈಗಾಗಲೇ ನಿರ್ಧರಿಸಿದ್ದು. ರಾಯಚೂರು ನಗರದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರು ಇರುವುದರಿಂದ ಎಲ್ಲಾ 35 ವಾರ್ಡ್ಗಳಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಮಹಿಳಾ ಮತದಾರರನ್ನು ಸೆಳೆಯಲು ಅವರು ನಿರ್ಧರಿಸಿದ್ದಾರೆ. ಈಗಿನಿಂದಲೇ ಎಲ್ಲಾ ವಾರ್ಡುಗಳಲ್ಲಿರುವ ಮಹಿಳೆಯರನ್ನು ಮತ್ತು ಯುವತಿಯರನ್ನು ಮನವೊಲಿಸಲು ಪೂಜ ರಮೇಶ್ ಹೊಸ ಹೊಸ ರೂಪಾ ರೇಷಗಳನ್ನು ಮಾಡಿಕೊಂಡಿದ್ದಾರೆ. ರಾಯಚೂರು ನಗರದಲ್ಲಿ ಇಲ್ಲಿಯವರೆಗೆ 14 ಜನ ಶಾಸಕರು ಪುರುಷರೇ ಆಯ್ಕೆಯಾಗಿದ್ದು .
ಮೊದಲ ಬಾರಿಗೆ ನಾನು ಮಹಿಳೆ ಆಯ್ಕೆ ಆಗ್ಬೇಕು ಅನ್ನೋದು ಇಲ್ಲಿನ ಮಹಿಳೆಯರ ಆಸೆಯಾಗಿದೆ .ನಾನು ಗೆದ್ದೇ ಗೆಲ್ಲುತ್ತೇನೆ ಅನ್ನುವ ಭರವಸೆ ನನಗಿದೆ ನಾನು ರಾಯಚೂರ ಮನೆಯ ಮಗಳಾಗಿದ್ದು ಎಲ್ಲರೂ ನನ್ನನ್ನು ತುಂಬು ಹೃದಯದಿಂದ ಸ್ವೀಕರಿಸುತ್ತಾರೆ ಎಂದು ನಾನು ನಂಬಿದ್ದೇನೆ. ಕೆಲವೊಬ್ಬರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದು ಅದನ್ನು ಯಾರು ಗಣನೆಗೆ ತೆಗೆದುಕೊಳ್ಳಬಾರದು. ಯಾಕೆಂದರೆ ನಾನು ಖಂಡಿತವಾಗಿ ರಾಯಚೂರು ನಗರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಸಿದ್ಧ. ಯಾವುದೇ ರೀತಿ ಯಿಂದ ನಾನು ಹಿಂಪಡೆಯುವುದಿಲ್ಲ ಎಂದು ಡಾ ಪೂಜಾ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ ತಿಂಗಳಿಂದಲೇ ನಾನು ರಾಯಚೂರು ನಗರದಲ್ಲಿ ಸಂಚರಿಸುವುದಕ್ಕೆ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತೇನೆ. ಈಗಾಗಲೇ ರಾಯಚೂರಿನಲ್ಲಿ ಪೂಜ ರಮೇಶ್ ಒಬ್ಬ ಮಹಿಳೆ ಶಾಸಕಿ ಆಗಬೇಕು ಅನ್ನೋದು ಎಲ್ಲರಲ್ಲಿ ಮಾತು ಕೇಳುತ್ತಿದೆ. ಒಟ್ಟಾರೆ ರಾಯಚೂರು ನಗರ ವಿಧಾನಸಭಾ ಚುನಾವಣೆ ಕ್ಷೇತ್ರಕ್ಕೆ ದಿನದಿನ ರಂಗೇರುತ್ತಿರುವ ಸಂದರ್ಭದಲ್ಲಿ ಚಿತ್ರನಟಿ ಪೂಜಾ ರಮೇಶ್ ಎಂಟ್ರಿ ಕೊಟ್ಟಿರುವುದು ಮತ್ತೊಂದು ಕುತೂಹಲದ ಸಂಗತಿ.
Recent comments