Skip to main content
ಅಪ್ಪು ಅಮರ' ಪುಸ್ತಕ ಬಿಡುಗಡೆ

ಅಪ್ಪು ಅಮರ' ಪುಸ್ತಕ ಬಿಡುಗಡೆ

`ಅಪ್ಪು ಅಮರ' ಪುಸ್ತಕ ಬಿಡುಗಡೆ.

Kannada

ಬೆಂಗಳೂರು: ಡಾ.ಪುನೀತ್ ರಾಜ್ ಕುಮಾರ್ ಕುರಿತಾಗಿ ಲೇಖಕ, ಪ್ರಕಾಶಕ ಭದ್ರಾವತಿ ರಾಮಾಚಾರಿಯವರು `ಅಪ್ಪು ಅಮರ' ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಸುಮಾರು ಮೂನ್ನೂರೈವತ್ತು ಪುಟಗಳುಳ್ಳ ಈ ಪುಸ್ತಕ ಬಹುವರ್ಣದಲ್ಲಿ ಮುದ್ರಿತವಾಗಿದ್ದು ಮೇ ೭ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಿರಿಯ ನಟ ರಾಮಕೃಷ್ಣರವರು ಬಿಡುಗಡೆ ಮಾಡಲಿದ್ದಾರೆ.

ಖ್ಯಾತ ಚಿತ್ರ ನಿರ್ದೇಶಕ ಓಂ ಸಾಯಿ ಪ್ರಕಾಶ್, ನಿರ್ಮಾಪಕ ಎಸ್.ಎ.ಗೋವಿಂದ ರಾಜ್, ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ.ಮನೋಹರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನಿಲ್ ಪುರಾಣಿಕ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಹೊಸಮನಿ, ಡಾ.ಸಿ.ಸೋಮಶೇಖರ್, ಧೀರೆನ್ ರಾಮ್‌ಕುಮಾರ್, ಭಾ.ಮ.ಹರೀಶ್, ನಟಿ ಪ್ರೇಮಾ, ಕಿರುತೆರೆ ನಟಿ ಅಪೂರ್ವ ಡಿ. ಸಾಗರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾ ಮಂಡಲದ ರಾಜ್ಯಾಧ್ಯಕ್ಷ ಎಲ್.ನಾಗರಾಜಚಾರ್ ಭಾಗವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಎನ್.ಆರ್.ರಮೇಶ್‌ರವರಿಗೆ `ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ. ಅಲ್ಲದೆ ಇದೆ ಸಮಾರಂಭದಲ್ಲಿ `ಅಲ್ಲಮ ಪ್ರಭು ದೇವರು' `ಕೈವಾರ ತಾತಯ್ಯ' ಮುಕ್ತಕ ಕಾವ್ಯ, `ರಾಮಕಥಾ ಮಿತ್ರ' `ಊರುಗೋಲಿನ ಸುತ್ತ ಮುತ್ತ' ಕೃತಿಗಳಿಗೆ `ಸಾಹಿತ್ಯ ಸುಮ ಪ್ರಶಸ್ತಿ' ನೀಡಲಾಗುತ್ತದೆ ಎಂದು ಕಾವ್ಯಸ್ಪಂದನ ಪಬ್ಲಿಕೇಷನ್ ಸಂಸ್ಥೆಯ ಮಾಲೀಕರಾದ ಭದ್ರಾವತಿ ರಾಮಾಚಾರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.