Skip to main content
ಡಿಜಿಟಲ್ ಗ್ರಂಥಾಲಯಕ್ಕೆ ದಾಖಲೆ ಚಂದಾದಾರರು: ಸುರೇಶ್ ಕುಮಾರ್ ಶ್ಲಾಘನೆ.

ಡಿಜಿಟಲ್ ಗ್ರಂಥಾಲಯಕ್ಕೆ ದಾಖಲೆ ಚಂದಾದಾರರು: ಸುರೇಶ್ ಕುಮಾರ್ ಶ್ಲಾಘನೆ.

ಡಿಜಿಟಲ್ ಗ್ರಂಥಾಲಯಕ್ಕೆ ದಾಖಲೆ ಚಂದಾದಾರರು: ಸುರೇಶ್ ಕುಮಾರ್ ಶ್ಲಾಘನೆ.

Laibrery

ಬೆಂಗಳೂರು: ಕರ್ನಾಟಕ ಗ್ರಂಥಾಲಯ ಇಲಾಖೆ ಇಡೀ ದೇಶದಲ್ಲೇ  ಮಂಚೂಣಿಯಲ್ಲಿದೆ ಎಂದು ಹೇಳಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಡಿಜಿಟಲ್ ಗ್ರಂಥಾಲಯಕ್ಕೆ 6.50 ಲಕ್ಷ ಸದಸ್ಯರು ಚಂದಾದಾರರಾಗಿದ್ದಾರೆಂದು  ಹೇಳಿದ್ದಾರೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರಕ ವ್ಯಾಪ್ತಿಯ ದೊಡ್ಡನೆಕ್ಕುಂದಿ ವಾರ್ಡಿನ    ತೂಬರಹಳ್ಳಿಯಲ್ಲಿ ಪಂಡಿತ ದೀನದಯಾಳ ಡಿಜಿಟಲ್ ಗ್ರಂಥಾಲಯದ ನೂತನ ಕಟ್ಟಡ ಮತ್ತು ಪುಸ್ತಕ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಜ್ಞಾನಾಧಾರಿತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

Laibrery

ನಳಂದಾ ವಿಶ್ವವಿದ್ಯಾನಿಲಯ ಆ ಕಾಲದಲ್ಲಿಯೇ ಜ್ಞಾನ ಪ್ರಸಾರಕ್ಕೆ  ಹೆಸರಾಗಿತ್ತು. ಅಪಾರ ಪುಸ್ತಕ ಸಂಗ್ರಹ ಹೊಂದಿದ್ದ ಆ ವಿಶ್ವವಿದ್ಯಾನಿಲಯ ಜ್ಞಾನ ಪ್ರಸಾರದಲ್ಲಿ  ಮಂಚೂಣಿಯಲ್ಲಿತ್ತು ಎಂದು ಮೆಲಕು ಹಾಕಿದರು.      ಗ್ರಂಥಾಲಯದೊಂದಿಗಿನ ತಮ್ಮ ಸಂಬಂಧವನ್ನು  ಸ್ಮರಿಸಿಕೊಂಡ ಸಚಿವರು,  ನನ್ನ ಜೀವನದಲ್ಲಿ ನಾನೇನಾದರೂ    ಸಾಧನೆ ಮಾಡಿದ್ದಾದರೆ ಅದರ ಎಲ್ಲ ಶ್ರೇಯಸ್ಸು  ಸಾರ್ವಜನಿಕ ಗ್ರಂಥಾಲಯಕ್ಕೆ ಅರ್ಪಿತವಾಗಬೇಕು. ಗ್ರಂಥಾಲಯದ ಓದಿನ ಮೂಲಕವೇ ನಾನು ಕಾನೂನು ಪದವಿ ಪಡೆಯುವಂತಾಯಿತು. ಗ್ರಂಥಾಲಯ ಎಂಬುದು ಶ್ರೀಸಾಮಾನ್ಯನ ಒಂದು ವಿಶ್ವವಿದ್ಯಾಲಯವಿದ್ದಂತೆಖ ಎಂದು ಅಭಿಪ್ರಾಯಪಟ್ಟರು.

Laibrery

ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದಿನ ಅವಶ್ಯಕತೆಗಳಿಗನುಗುಣವಾಗಿ ಡಿಜಿಟಲ್ ಗ್ರಂಥಾಲಯಗಳನ್ನು ರಾಜ್ಯಾದ್ಯಂತ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ   ರಾಜ್ಯದೆಲ್ಲೆಡೆ 273 ಡಿಜಿಟಲ್ ಗ್ರಂಥಾಲಯಗಳು ಕಾರ್ಯಾರಂಭ ಮಾಡಿದ್ದು, ಇಡೀ ದೇಶದಲ್ಲಿ ಇದು ಅಭೂತ ಪ್ರಯತ್ನವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು. ಕೋವಿಡ್ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಉಪಕ್ರಮವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆಪ್ನ್ನು ಲೋಕಾರ್ಪಣೆಗೊಳಿಸಿದ್ದು, ಇಂದು ಆರುವರೆ ಲಕ್ಷಕ್ಕೂ ಹೆಚ್ಚು ಜನ ಈ ಆಪ್ ಬಳಸುತ್ತಿದ್ದಾರೆ.

ಇದು ಸಾರ್ವಕಾಲಿಕ ದಾಖಲೆಯಾಗಿದ್ದು, ಒಂದು ಲಕ್ಷಕ್ಕೂ ಮೀರಿದ ಪುಸ್ತಕಗಳು ಈ ಆಪ್ನಲ್ಲಿ ಲಭ್ಯವಿವೆ ಎಂದು ಅವರು ಹೇಳಿದರು. ಪುಸ್ತಕ ಸಂಸ್ಕೃತಿ ಬೆಳೆಸಲು ರಾಜ್ಯಾದ್ಯಂತ 6841 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದು ದೇಶದಲ್ಲಿಯೇ ಮಾದರಿ ಗ್ರಂಥಾಲಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳನ್ನು ಅವಶ್ಯಕ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು. ಸ್ಥಳೀಯ ವಿಧಾನಸಭಾ ಸದಸ್ಯ ಅರವಿಂದ ಲಿಂಬಾವಳಿ  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.   

ಬಿಬಿಎಂಪಿ ಸದಸ್ಯ ಸೇರಿದಂತೆ  ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ ಕುಮಾರ ಎಸ್. ಹೊಸಮನಿ ಸ್ವಾಗತಿಸಿದರು.                    

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.