Skip to main content
8 ಮೋಟಾರ್ ಸೈಕಲ್ ಕದ್ದ ಕಳ್ಳ ಈಗಾ ಪೊಲೀಸರ ವಶದಲ್ಲಿ

8 ಮೋಟಾರ್ ಸೈಕಲ್ ಕದ್ದ ಕಳ್ಳ ಈಗಾ ಪೊಲೀಸರ ವಶದಲ್ಲಿ

8 ಮೋಟಾರ್ ಸೈಕಲ್ ಕದ್ದ ಕಳ್ಳ ಈಗಾ ಪೊಲೀಸರ ವಶದಲ್ಲಿ .

Raichur

ಸಿರವಾರ:ಕೆಲದಿನಗಳಿಂದ ತಾಲೂಕಿನಲ್ಲಿ ಮೋಟಾರ್ ಸೈಕಲ್ ಕಳ್ಳತನ ಪ್ರಕರಣ ಹೆಚ್ಚಾದ ಬೆನ್ನಲ್ಲೇ,ಹೆಚ್ತ್ತುಕೊಂಡ ಜಿಲ್ಲಾ ಪೊಲೀಸ್ವರಿಷ್ಠ ಅಧಿಕಾರಿಗಳ ತಂಡ 8 ಬೈಕ್ ಕದ್ದ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 27 ಜೂನ್ ರಂದು ಸಿರವಾರದ ಮಲ್ಲಯ್ಯ ತಂದೆ ಬಾಲಯ್ಯ ಇವರಿಗೆ ಸಂಭದಿಸಿದ ಮೋಟಾರ್ ಸೈಕಲ್ ಪಟ್ಟಣದ ಕಂದಕೂರು ಆಸ್ಪತ್ರೆಯ ಪಕ್ಕದಲ್ಲಿ ನಿಲ್ಲಿಸಿದ ಇವರ ಬೈಕ್ ಕಳುವಾಗಿದೆ ಎಂದು ದೂರು ನೀಡಿದ್ದರು ಮತ್ತು ದಿನಾಂಕ 14 ಫ್ರೆಬ್ರವರಿಯಂದು ದೇವದುರ್ಗ ಕ್ರಾಸ್ ಬಳಿ ಶಿವಪ್ಪ ತಂದೆ ಮಾನಸಯ್ಯಾ ಇವರು ತಮ್ಮ ಮೋಟಾರ್ ಸೈಕಲ್ ಕಳುವು ಆಗಿದೆ ಎಂದು ನೀಡಿದ ಇವರಿಬ್ಬರ ದೂರಿನ ಆದರಾದ ಮೇಲೆ,ಈ ಎರಡು ಪ್ರಕರಣ ಗಂಭೀರವಾಗಿ ಪರಿಗಣಿಸಿ, ಆರೋಪಿ ಪತ್ತೆಗಾಗಿ ಶ್ರೀ ಸಿ .ಬಿ .ವೇದಾಮೂರ್ತಿ ಎಸ್ .ಪಿ ರಾಯಚೂರು ,ಶ್ರೀ ಹರಿಬಾಬು ಹೆಚ್ಚುವರಿ ಎಸ್ಪಿ ರಾಯಚೂರು ,ಶ್ರೀ ವಿಶ್ವನಾಥ್ ರಾವ್ ಕುಲಕರ್ಣಿ ಡಿ ಎಸ್ ಪಿ ಸಿಂಧನೂರು ಇವರ ಮಾರ್ಗದರ್ಶನದಲ್ಲಿ ,ಶ್ರೀ ದತ್ತಾತ್ರೇಯ ಕಾರ್ನಾಡ್ ಸಿ ಪಿ ಐ ಮಾನವಿ,ಶ್ರೀ ಮತಿ ಸುಜಾತಾ ಪಿ ಎಸ್ ಐ ಸಿರವಾರ ಇವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಯವರಾದ ಮಹೇಶ್,ಕೆ.ಗೋಪಿ,ಆಂಜನೇಯ,ಶರಣಬಸವ,ಅಮರೇಶ,ದೇವಪ್ಪ,ಹನುಮಂತ ಸಿಬ್ಬಂದಿಯವರನ್ನೋಳಗೊಂಡ ತಂಡ ರಚಿಸಲಾಗಿತ್ತು .

ಪೊಲೀಸ್ ತಂಡ ಖಚಿತ ಮಾಹಿತಿ ಮೇರೆಗೆ ದಿನಾಂಕ 29-06-2020ರಂದು ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಆರೋಪಿಯಾದ ಬೂದೆಪ್ಪ ತಂದೆ ಮಾನಸಯ್ಯ 22 ವರ್ಷ ಜೆ ಸಿ ಬಿ ಆಪರೇಟರ್ ಸೋಮನಮರಡಿ ಈ ತನನ್ನು ಮೋಟಾರ್ ಸೈಕಲ್ನೊಂದಿಗೆ ಬಂಧಿಸಿ ವಿಚಾರಿಸಿದಾಗ ,ಕಳ್ಳತನ ಮಾಡಿದ್ದಲ್ಲಿ 6 ಮೋಟಾರ್ ಸೈಕಲ್ ಸಿರವಾರದ ಬೈಕ್ಗಾಳಗಿದ್ದು,2ದೇವದುರ್ಗಕ್ಕೆ ಸಂಭದಪಟ್ಟಿವೆ ಎಂದು ತಿಳಿದು ಬಂದಿದೆ.ಜೊತೆಗೆ 280000ರೂಪಾಯಿಗಳ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇನ್ನೂ ಆರೋಪಿ ನಕಲಿ ಕೀಲಿಗಳನ್ನು ಬಳಸಿ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ .

ಇನ್ನೂ ಪೊಲೀಸ್ ಕಾರ್ಯತಂಡದ ಕೆಲಸವನ್ನ ಮೆಚ್ಚಿ ಶ್ರೀ ಸಿ ಬಿ ವೇದಾಮೂರ್ತಿ ಎಸ್ ಪಿ .ಐ ಪಿ ಎಸ್ ಇವರು ಪ್ರಶಂಸನೀಯ ಮಾಡಿದ್ದು ತಂಡಕ್ಕೆ ಬಹುಮಾನ ಘೋಷಣೆಮಾಡಿದ್ದಾರೆ .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.