Skip to main content
SFI & DYFI ,ಸಿರವಾರ ತಾಲ್ಲೂಕು ಸಮಿತಿವತಿಯಿಂದ ರಕ್ತದಾನ ಸಿಬಿರ .

SFI & DYFI ,ಸಿರವಾರ ತಾಲ್ಲೂಕು ಸಮಿತಿವತಿಯಿಂದ ರಕ್ತದಾನ ಸಿಬಿರ .

SFI & DYFI ,ಸಿರವಾರ ತಾಲ್ಲೂಕು ಸಮಿತಿವತಿಯಿಂದ ರಕ್ತದಾನ ಸಿಬಿರ .

Raichur

ಸಿರವಾರ: ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಸಿರವಾರ ತಾಲ್ಲೂಕು ಸಮಿತಿ ಹಾಗೂ ಪಟ್ಟಣದ ಇತರ ಯುವಕರ ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕು ಆಡಳಿತ ವೈದ್ಯ ಅಧಿಕಾರಿ ಚಂದ್ರಶೇಖರಯ್ಯ, ಸಿರವಾರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ರಾದ ಡಾ. ಸುನೀಲ್ ಸರೋದೆ ಮತ್ತು ಪರಿಮಳ ರಾಠೋಡ್, JDS ಪಟ್ಟಣದ ಯುವ ಮುಖಂಡರಾದ ಲೋಕರೇಡ್ಡಿ, ಜ್ಞಾನ ಮಿತ್ರಾ, ಬಸವರಾಜ ಸೇರಿ ಇತರರು ಉದ್ಘಾಟಿಸಿದರು.

ನಂತರ ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯ ಮಾತನಾಡತ್ತಾ ಕೊರೋನಾ ಲಾಕ್ ಡೌನ್ ನ ಈ ಸಂಧರ್ಭದಲ್ಲಿ ಎಲ್ಲೆಡೆಯೂ ರೋಗಿಗಳಿಗೆ ರಕ್ತದ ಅಭಾವ ಉಂಟಾಗಿದೆ ಇದನ್ನು ಅರಿತುಕೊಂಡು ನಾವುಗಳು ನಮ್ಮ ಸಂಘಟನೆಯ ನೇತೃತ್ವದಲ್ಲಿ ರಾಜ್ಯವ್ಯಾಪಿ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ರೋಗಿಗಳಿಗೆ ನೆರವಾಗುತ್ತಿದ್ದೇವೆ. ಕೊರೋನಾ ವೈರಸ್ ಭೀತಿಯಿಂದ ಹೊರ ಬಂದು ದೈಹಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಆರೋಗ್ಯ ಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಮತ್ತು ಲಾಕ್ ಡೌನ್ ನಿಯಮಗಳನ್ನು ಪಾಲಿಸಿ ರಕ್ತದಾನ ಮಾಡಬೇಕು ಜೊತೆಗೆ ರಕ್ತದಾನದ ಬಗ್ಗೆ ಗ್ರಾಮೀಣ ಜನತೆಯಲ್ಲಿ ಇರುವ ತಪ್ಪು ಕಲ್ಪನೆ ಮತ್ತು ಭಯವನ್ನು ದೂರ ಮಾಡಿ ರಕ್ತದಾನದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಮೂಲಕ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವಲ್ಲಿ ಇಂದಿನ ವಿದ್ಯಾರ್ಥಿ - ಯುವಜನರು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

Raichur

ನಂತರ ಪಟ್ಟಣದ ಮುಖಂಡರಾದ ಜಿ. ಲೋಕರೇಡ್ಡಿ ಮಾತನಾಡಿ ಲಾಕ್ ಡೌನ್ ಸಮಯದಲ್ಲಿ ಮುಂದೆ ಬಂದು ರಕ್ತದಾನದ ಶಿಬಿರವನ್ನು ಏರ್ಪಡಿಸುವ ಮೂಲಕ ಶ್ಲಾಘನೀಯ ಕೆಲಸವನ್ನು SFI ಮತ್ತು DYFI ಸಂಘಟನೆ ಮಾಡುತ್ತಿದೆ. ನಮ್ಮ ಭಾಗದಲ್ಲಿ ರಕ್ತದ ಸಮಸ್ಯೆ ತುಂಬಾ ಇದೆ ಅದನ್ನು ನಾವುಗಳು ನಿಗಿಸುವ ಕೆಲಸ ಮಾಡೋಣ ನಾನು ಇಂದಿನ ರಕ್ತದಾನದ ಶಿಬಿರ ದಲ್ಲಿ ರಕ್ತದಾನ ಮಾಡುತ್ತಿದ್ದೇನೆ ಎಂದು ಮಾತನಾಡಿದರು.

Raichur

ನಂತರ ಸಂಜೀವಿನ ಟ್ರಸ್ಟ್ ಮುಖ್ಯಸ್ಥರಾದ ಜ್ಞಾನ ಮೀತ್ರಾ, VRS ಶಿಕ್ಷಣ ಸಂಸ್ಥೆಯ ಟಿ. ಬಸವರಾಜ, SFI ಜಿಲ್ಲಾಧ್ಯಕ್ಷ, ರಮೇಶ್ ವೀರಾಪುರ, ಪತ್ರಕರ್ತ ಸುರೇಶ, ವೈದ್ಯರು ಮಾತನಾಡಿದರು. ಈ ರಕ್ತದಾನ ಶಿಬಿರದಲ್ಲಿ ಆರೋಗ್ಯ ಸಿಬ್ಬಂದಿ ಸೇರಿ 52 ಕ್ಕೂ ಅಧಿಕ ಜನ ವಿದ್ಯಾರ್ಥಿ- ಯುವಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. DYFI ರಾಜ್ಯ ಸಮಿತಿ ಸದಸ್ಯರಾದ ಚಂದ್ರಶೇಖರ ಗೌಡ, SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ಚರಾಳ, SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, SFI ತಾಲೂಕು ಅಧ್ಯಕ್ಷ ಚಿದಾನಂದ ಕರಿಗೂಳಿ, ಕಾರ್ಯದರ್ಶಿ ಪ್ರವೀಣ್ ಕುಮಾರ್, ರೀಮ್ಸ್ ಆಸ್ಪತ್ರೆಯ ವೈದ್ಯ ಸವೀತಾ, ಶಿವಶರಣ ಸಾಹುಕಾರ್ ಅರಿಕೇರಿ, ಗ್ಯಾನಪ್ಪ, ದಾನಪ್ಪ, ನಾಗರಾಜ್ ಗೌಡ, ಶಾಂತಪ್ಪ ಪೀತಗಲ್, ಯಮನೂರು, ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣಾ ನಾಯಕ, ಪ್ರೇಮ್ ಕವಿತಾಳ, ಮುತ್ತಣ್ಣ, ಬಸವರಾಜ ಚಡಕಲ ಗುಡ್ಡ, ಬಸವಲಿಂಗ ಬ್ಯಾಗವಾಟ್ ಸೇರಿ ಸಮುದಾಯ ಆರೋ ಕೇಂದ್ರದ ಸಿಬ್ಬಂದಿ ಹಾಗೂ ರೀಮ್ಸ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ಸೇರಿ ಇತರರು ಇದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.