Skip to main content
ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದಲ್ಲಿ "ಇನಾಮ್ದಾರ್* "

ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದಲ್ಲಿ "ಇನಾಮ್ದಾರ್* "

ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದಲ್ಲಿ "ಇನಾಮ್ದಾರ್* ".

Kannada

*ಜನಾಂಗೀಯ ಘರ್ಷಣೆ ಸುತ್ತ ಹೆಣೆದಿರುವ ಕಥೆ.* ಕೆಲವು ವರ್ಷಗಳ ಹಿಂದೆ " ಕತ್ತಲೆಕೋಣೆ" ಎಂಬ ಚಿತ್ರ ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಅಜ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ "ಇನಾಮ್ದಾರ್".

ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೆ ಹಾಗೂ ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೆ ಇರುವ ನಂಟನ್ನು ‌ಹಾಗೂ ಕಪ್ಪು - ಬಿಳುಪು ವರ್ಣದ ಜನರ ಘರ್ಷಣೆ ಸುತ್ತ ಈ ಚಿತ್ರಕಥೆ ಹೆಣೆದಿದ್ದೇನೆ. ಕಾಡಿನ‌ ಮುಗ್ಧ ಜನರಿಗೆ ಆಗುತ್ತಿರುವ ಅನ್ಯಾಯ ಎತ್ತಿ‌ಹಿಡಿಯುವ ಪ್ರಯತ್ನ ಮಾಡುತ್ತಿದ್ದೇನೆ.

ಡಬ್ಬಲ್ ಸ್ಕ್ರೀನ್ ಪ್ಲೇ ನಡುವೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಇನಾಮ್ದಾರ್ ಕುಟುಂಬಗಳಿದೆ. ಅದಕ್ಕೆ ಅದರದೇ ಆದ ಕಥೆಯೂ ಇದೆ. ನಾವು ಆಯ್ಕೆ ಮಾಡಿಕೊಂಡಿರುವ " ಇನಾಮ್ದಾರ್ " ಶಿವಾಜಿ ಮಹಾರಾಜರ ಮಗ ಶಂಭು ಮಾಹಾರಾಜರ ವಂಶಸ್ಥರದು. ಈ ಚಿತ್ರಕ್ಕೆ ಕಪ್ಪು ಸುಂದರಿಯ ಸುತ್ತ ಎಂಬ ‌ಅಡಿಬರಹ ಕೂಡ ಇದೆ.

ರಂಜನ್ ಛತ್ರಪತಿ ಎಂಬ ಹೊಸ ಪ್ರತಿಭೆ ನಾಯಕನಾಗಿ ನಟಿಸುತ್ತಿದ್ದು, ಭೂಮಿ ಶೆಟ್ಟಿ, ಎಸ್ತರ್ ನರೋನ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಎಂ.ಕೆ.ಮಠ, ರಘು ಪಾಂಡೇಶ್ವರ್ ಮುಂತಾದವರ ತಾರಾಬಳಗವಿರುತ್ತದೆ. ನುರಿತ ತಂತ್ರಜ್ಞರು ಈ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಪ್ಸೆ ಗುಡ್ಡ ಪ್ರದೇಶದಲ್ಲಿ ಈಗಾಗಲೇ ಕಲಾ ನಿರ್ದೇಕರು ಗುಡಿಸಿಲಿನ ಸೆಟ್ ಹಾಕುತ್ತಿದ್ದಾರೆ. ಫೆಬ್ರವರಿ ಮಧ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.

ಹಲವು ವರ್ಷಗಳ ಹಿಂದೆ ನಟನಾಗಬೇಕೆಂದು ಸಾಕಷ್ಟು ಕನಸು ಹೊತ್ತು ಬಂದವನು. ಆದರೆ ಆಗಿರಲಿಲ್ಲ. ಸಮಯ ಈಗ ಕೂಡಿ ಬಂದಿದೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡುತ್ತಿದ್ದೇನೆ. ಅವಕಾಶ ಕೊಟ್ಟ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕ ರಂಜನ್ ಛತ್ರಪತಿ. ನನಗೆ ಸಂದೇಶ್ ಅವರು ಹೇಳಿದ ತಕ್ಷಣ ಈ ಪಾತ್ರದಲ್ಲಿ ಅಭಿನಯಿಸಬೇಕೆಂದು ಆಸೆಯಾಯಿತು. ನಾನು ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇನೆ ಎಂದರು ಭೂಮಿ ಶೆಟ್ಟಿ. ಛಾಯಾಗ್ರಹಣದ ಬಗ್ಗೆ ಸುನೀಲ್ ನರಸಿಂಹಮೂರ್ತಿ, ಸಂಗೀತದ ಕುರಿತು ರಾಕಿ ಸೋನು ಹಾಗೂ ಸಂಕಲನದ ವಿಷಯವಾಗಿ ಶಿವರಾಜ್ ಮೇಹು ಮಾತನಾಡಿದರು. ಅಮಿನ ಅವರು ಪತ್ರಿಕಾಗೋಷ್ಠಿಗೆ ಆಗಮಿಸಿ ಶುಭ ಕೋರಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.