Skip to main content
ಶಿವಾಜಿ ಸುರತ್ಕಲ್ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದ B4u .

ಶಿವಾಜಿ ಸುರತ್ಕಲ್ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದ B4u .

ಶಿವಾಜಿ ಸುರತ್ಕಲ್ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದ B4u.

ಶಿವಾಜಿ ಸುರತ್ಕಲ್

ರಮೇಶ್ ಅರವಿಂದ್ ರವರ 101 ನೇ ಚಿತ್ರವಾದ ಶಿವಾಜಿ ಸುರತ್ಕಲ್ ಫೆಬ್ರವರಿ 21 ರಂದು ಬಿಡುಗಡೆಯಾಗಿ ಮೂರು ವಾರದ ವರೆಗೆ ಯಶಸ್ವಿ ಪ್ರದರ್ಶನ ಕಂಡಿತು. ಪತ್ರಕರ್ತರಿಂದ ಹಾಗೂ ಸಿನಿ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿತ್ತು. ಜಗತ್ತಿನಾದ್ಯಂತ ಹರಡಿರುವ covid 19 ಡಿಸೀಸ್ ನ ಕಾರಣದಿಂದ ಸಾರ್ವಜನಿಕರು ಚಿತ್ರಮಂದಿರಗಳಿಂದ ದೂರ ಉಳಿಯಬೇಕಾಯಿತು. ಒಂದು ಖುಷಿಯ ವಿಷಯ ಏನೆಂದರೆ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ಹಾಗೂ ಉತ್ತರ ಭಾರತದ ಎಲ್ಲ ಭಾಷೆಯ ಡಬ್ಬಿಂಗ್ ರೈಟ್ಸ್ ಅನ್ನು B4u movies ಅವರು ಪಡೆದುಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಹಿಂದಿ ಅವತರಣೆಯ ನಾಯಕ ನಟ, ನಿರ್ದೇಶನ ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಕನ್ನಡದ ಈ ಚಿತ್ರವನ್ನು ಆಕಾಶ್ ಶ್ರೀವತ್ಸ ರವರು ನಿರ್ದೇಶಿಸಿದ್ದು ಅಭಿಜಿತ್ ರಮೇಶ್ ಮತ್ತು ಆಕಾಶ್ ಶ್ರೀವತ್ಸ ರವರು ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನೂಪ್ ಗೌಡ ಹಾಗೂ ರೇಖಾ ಕೆ.ಎನ್ ರವರು ನಿರ್ಮಾಣ ಮಾಡಿದ್ದಾರೆ. ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರು ಬಿಡುಗಡೆಯ ಸಮಯದಲ್ಲೇ ನೀಡಿದ ಹೇಳಿಕೆಯ ಪ್ರಕಾರ ಚಿತ್ರದ ಎರಡನೇ ಭಾಗ (ಶಿವಾಜಿ ಸುರತ್ಕಲ್ - 2 ) ರ ಚಿತ್ರಕಥೆ ಕೆಲಸ ನಡೆಯುತ್ತಿದೆ. ಆಕಾಶ್ ಶ್ರೀವತ್ಸ ಹಾಗೂ ರಮೇಶ್ ಅರವಿಂದ್ ರವರು ವಿಡಿಯೋ ಕಾಲ್ ಮುಖಾಂತರ ಚಿತ್ರಕಥೆಯ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಲಾಕ್ ಡೌನ್ ಮುಗಿದ ನಂತರ ಶಿವಾಜಿ ಸುರತ್ಕಲ್ - 2 ಪ್ರಾರಂಭವಾಗುವ ಸಾಧ್ಯತೆಗಳಿವೆ. ಇನ್ನ ಕೆಲವು ದಿನಗಳಲ್ಲಿ ಬೇರೆ ಭಾಷೆಯ ಡಬ್ಬಿಂಗ್ ಹಾಗೂ ರಿಮೇಕ್ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಚಿತ್ರತಂಡ ನೀಡಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.