ಸಮಾಜದಲ್ಲಿ ನಡೆಯುವ ಅನೇಕ ದುಷ್ಟದಂಧೆಗಳ ವಿರುದ್ದ ಹೋರಾಡುವ ಅಸ್ತ್ರವೇ "ಸೋಲ್ಡ್".
ಸಮಾಜದಲ್ಲಿ ನಡೆಯುವ ಅನೇಕ ದುಷ್ಟದಂಧೆಗಳ ವಿರುದ್ದ ಹೋರಾಡುವ ಅಸ್ತ್ರವೇ "ಸೋಲ್ಡ್".

ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ ಪ್ರೇರಣ ಅಗರವಾಲ್ ನಿರ್ದೇಶನದ ಈ ಚಿತ್ರದ ಟ್ರೇಲರ್.* ಹೆಣ್ಣುಮಕ್ಕಳು ಹೆಚ್ಚಾಗಿ ನಟನನೆಯತ್ತ ಒಲವು ತೋರಿಸುತ್ತಾರೆ. ನಿರ್ದೇಶನಕ್ಕೆ ಬರುವುದು ತೀರ ಕಡಿಮೆ. ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಕೆಲವು ಕಡಿಮೆ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಪ್ರೇರಣ ಅಗರವಾಲ್, ಈಗ ವಿಭಿನ್ನ ಕಥಾಹಂದರ ಹೊಂದಿರುವ "ಸೋಲ್ಡ್" ಚಿತ್ರವನ್ನು ನಿರ್ದೇಶಿಸಿದ್ದಾರೆ.
ತಮ್ಮ ಪ್ರಥಮ ನಿರ್ದೇಶನದಲ್ಲೇ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಮಾನವ ಕಳ್ಳ ಸಾಗಾಣಿಕೆ ಹಾಗೂ ಬಾಲ ಕಾರ್ಮಿಕತೆಯ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ. ಚಿತ್ರ ಮಾರ್ಚ್ ನಾಲ್ಕರಂದು ತೆರೆ ಕಾಣುತ್ತಿದೆ. ಚಿತ್ರದ ನಿರ್ಮಾಪಕ ದೀಪಂ ಕೊಹ್ಲಿ, ಫಿಲಂ ಮೇಕಿಂಗ್ ವರ್ಕ್ ಶಾಪ್ ಮುಗಿಸಿ, ಆನಂತರ ನ್ಯೂಯಾರ್ಕ್ ಆಕಾಡೆಮಿಯಲ್ಲಿ ಅಭಿನಯ ತರಭೇತಿ ಪಡೆದಿದ್ದಾರೆ.

ಭಾರತಕ್ಕೆ ಬಂದ ನಂತರ ಕೆಲವು ಕಿರುಚಿತ್ರಗಳನ್ನು ನಿರ್ಮಿಸಿ, ಅಭಿನಯಿಸಿದ್ದಾರೆ. ಈಗ ಹಾರ್ನ್ ಓಕೆ ಫಿಲಂ ಎಂಬ ಸಂಸ್ಥೆ ತೆರೆದು, ಮೊದಲ ಪ್ರಯತ್ನವಾಗಿ "ಸೋಲ್ಡ್" ಚಿತ್ರ ನಿರ್ಮಿಸಿದ್ದಾರೆ. ತಮ್ಮ ಹಾಸ್ಯ ಅಭಿನಯದ ಮೂಲಕ ಡ್ಯಾನಿಶ್ ಸೇಠ್ ಈ ಚಿತ್ರದಲ್ಲಿ ಕಾಮಿಡಿ ಹೊರತು ಪಡಿಸಿ, ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಾನಿ ಆರ್ ಬಲ್ಲುಕರಾಯ ಎಂಬ ಬಾಲಕಿ ಈ ಚಿತ್ರದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ದೀಪಂ ಕೊಹ್ಲಿ, ಕಾವ್ಯ ಶೆಟ್ಟಿ, ಭರತ್ ಜೆ.ಬಿ, ಸಿದ್ಧಾರ್ಥ್ ಮಾಧ್ಯಮಿಕ, ಉಗ್ರಂ ಮಂಜು, ಭವಾನಿ ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಒಂದು ಹಾಡಿರುವ ಈ ಚಿತ್ರಕ್ಕೆ ಜೀತ್ ಸಿಂಗ್ ಸಂಗೀತ ನೀಡಿದ್ದಾರೆ. ಸಮೀರ್ ದೇಶಪಾಂಡೆ ಛಾಯಾಗ್ರಹಣ ಮಾಡಿದ್ದಾರೆ.
Recent comments