ಕೊರೋನಾ ವಿರುದ್ದ ಹೋರಾಡುತ್ತಿರುವ ಪೊಲೀಸ್ ರ ಕುರಿತು ವಿಡಿಯೋ ಸಾಂಗ್
ಪೊಲೀಸ್ ರ ಕುರಿತು ವಿಡಿಯೋ ಸಾಂಗ್ ಬಿಡುಗಡೆ .

ಕೊರೋನ ವಿರುದ್ಧ ಹೋರಾಡುತ್ತಿರುವ ಪೊಲೀಸರ ಕುರಿತು ಎಸ್.ವಿ.ಪ್ರೊಡಕ್ಷನ್ಸ್ ಮೂಲಕ ಎಸ್ ವಿ ಬಾಬು ಅವರು ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದಾರೆ. ಎಲ್ಲರ ಸೋದರರು ಇವರು. ಎಲ್ಲರ ಮಿತ್ರರರು ಇವರು ಎಂದು ಆರಂಭವಾಗುವ ಈ ಹಾಡನ್ನು ಇಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬಿಡುಗಡೆ ಮಾಡಿದರು. ಹಾಡನ್ನು ವೀಕ್ಷಿಸಿದ ಭಾಸ್ಕರ್ ರಾವ್ ಅವರು ತುಂಬಾ ಚೆನ್ನಾಗಿದೆ ಎಂಬ ಪ್ರಶಂಸೆ ಮಾತುಗಳಾಡಿದರು.
ಅಭಿಮಾನ್ ರಾಯ್ ಹಾಡು ಬರೆದು, ಸಂಗೀತ ನೀಡಿ, ಅವರೆ ಹಾಡಿದ್ದಾರೆ. ಖ್ಯಾತ ನಟ ಸಾಯಿಕುಮಾರ್ ಹಾಡಿಗೂ ಮೊದಲು ತಮ್ಮ ಮಾತಿನ ಮೂಲಕ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಎಸ್.ವಿ.ಪ್ರೊಡಕ್ಷನ್ಸ್ ನ ಎಸ್.ವಿ.ಬಾಬು, ನಿರ್ಮಾಪಕ ಸಾ ರಾ ಗೋವಿಂದು, ಕೆ.ಎಂ.ವೀರೇಶ್ ಹಾಗೂ ಅನಂತು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.. ಲಾಕ್ ಡೌನ್ ಆರಂಭದ ದಿನದಿಂದ ಪೊಲೀಸ್ ಇಲಾಖೆ ಅವರು ಜನರಿಗಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಇವರಿಗೆ ಎಷ್ಟು ಧನ್ಯವಾದ ತಿಳಿಸಿದರು ಸಾಲದು.. ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎಸ್.ವಿ.ಬಾಬು ಅವರು ಲಾಕ್ ಡೌನ್ ಆರಂಭವಾದ ದಿನದಿಂದಲೂ ಸುಮಾರು ೫೫೦ಕ್ಕೂ ಅಧಿಕ ಪೊಲೀಸನವರಿಗೆ ಬಿಸ್ಕತ್ತು ಮುಂತಾದ ಪದಾರ್ಥಗಳನ್ನು ಹಂಚುತ್ತಿದ್ದಾರೆ.ಲಾಕ್ ಡೌನ್ ಮುಗಿಯುವವರೆಗೂ ಈ ಪದಾರ್ಥಗಳನ್ನು ಹಂಚುವುದಾಗಿ ಎಸ್.ವಿ.ಬಾಬು ತಿಳಿಸಿದ್ದಾರೆ.
Recent comments