'ಜಿಲ್ಕಾ' ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತಿದೆ.
'ಜಿಲ್ಕಾ' ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತಿದೆ.
ಲಾಕ್ಡೌನ್ ನಂತರ ಸಿನಿಮಾ ಥಿಯೇಟರುಗಳಿಗೆ ಸರಕಾರ ಇನ್ನೂ ಹಂಡ್ರೆಡ್ ಪರ್ಸೆಂಟ್ ಮಾನ್ಯತೆ ನೀಡಿಲ್ಲ. ಆದ್ದರಿಂದ ಯಾವ ಹೊಸ ಸಿನಿಮಾಗಳೂ ಬಿಡುಗಡೆಯಾಗುತ್ತಿಲ್ಲ ಎನ್ನುವ ಸಿನಿಪ್ರಿಯರಿಗೆ ಸಿಹಿ ಸುದ್ಧಿಯೆನೆಂದರೆ, ಇದೇ ಹತ್ತನೆಯ ತಾರೀಕು ಅಂದರೆ ಗಣೇಶ ಚತುರ್ಥಿಯ ದಿನ ಅಮೆಜಾನ್ ಪ್ರೈಮ್ ಮತ್ತು ನಮ್ಮ ಫ್ಲೆಕ್ಸ್ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ 'ಜಿಲ್ಕಾ' ಎನ್ನುವ ಅಪ್ಪಟ ಹಾಸ್ಯ, ಭಾವನಾತ್ಮಕ ಮತ್ತು ಇವತ್ತಿನ ಯಂಗ್ ಜನರೇಷನ್ನಿಗೆ ಒಪ್ಪುವಂತಹ ಮನೋರಂಜನೆಯ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಕವೀಶ್ ಶೆಟ್ಟಿ ಎನ್ನುವ ಉಡುಪಿ ಮೂಲದ ಯುವ ನಟ ತನ್ನದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಚಿತ್ರದ ಮೂಲಕ ಉದಯೋನ್ಮುಖ ನಾಯಕ ಮತ್ತು ನಿರ್ದೇಶಕನಾಗಿ ಹೊರ ಹೊಮ್ಮಿದ್ದಾನೆ.
ಈ ಚಿತ್ರದಲ್ಲಿ ಎರಡು ತಲೆಮಾರುಗಳಲ್ಲಿ ಮನುಷ್ಯನ ಸಂಬಂಧ ಮತ್ತು ಭಾವನೆಗಳಲ್ಲಿ ಉಂಟಾದ ಬದಲಾವಣೆ ಮತ್ತು ಅದರ ಪ್ರಭಾವಗಳನ್ನು ತುಂಬಾ ಸೊಗಸಾಗಿ ಚಿತ್ರಿಸಲಾಗಿದೆ. ಅಲ್ಲದೆ, ಕವೀಶ್ ಶೆಟ್ಟಿ ಪಾತ್ರಕ್ಕೆ ಸಹಜತೆಯನ್ನು ಒದಗಿಸುವ ಕಾರಣಕ್ಕೆ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ನಾಯಕನ ದೈಹಿಕ ತೂಕವನ್ನು 52, 68 ಮತ್ತು 78 ಕೆಜಿಯಷ್ಟು ತೂಕವನ್ನು ಪಾತ್ರದ ವಯಸ್ಸಿಗೆ ತಕ್ಕಂತೆ ಶ್ರಮವಹಿಸಿ ಏರಿಳಿತಗೊಳಿಸಿ ನಟಿಸಿರುವುದು ವಿಶೇಷವಾಗಿ ಎದ್ದು ಕಾಣುತ್ತದೆ.
ಈ ರೀತಿಯ ಬಾಡಿ ಟಾನ್ಸ್ಮಿಷನ್ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ಹೊಸತು ಹಾಗೆಯೇ ಈ ಚಿತ್ರದಲ್ಲಿ ಪ್ರಿಯಾ ಹೆಗ್ಡೆ, ಲಕ್ಷ್ಯ ಶೆಟ್ಟಿ, ಗೋಪಿಕಾ ದಿನೇಶ್ ಮುಂತಾದವರು ನಟಿಸಿದ್ದಾರೆ.
ಲಾಕ್ಡೌನಿಗೂ ಮುನ್ನ ಥಿಯೇಟರ್ನಲ್ಲಿ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದ್ದ ಚಿತ್ರ ಲಾಕ್ಡೌನ್ ಕಾರಣದಿಂದ ಹೆಚ್ಚಿನ ಸಿನಿಮಾ ಪ್ರಿಯರಿಗೆ ನೋಡುವ ಅವಕಾಶ ಸಿಕ್ಕಿರಲಿಲ್ಲ, ಅದೀಗ ಅಮೆಜಾನ್ ಪ್ರೈಮ್ ಮತ್ತು ನಮ್ಮ ಫ್ಲೆಕ್ಸ್ ಮೂಲಕ ನೆರವೇರುತ್ತಿದೆ, ತಪ್ಪದೇ ನೋಡಿ ಆನಂದಿಸಿ.
Recent comments