Skip to main content
ಗೌರಿಹಬ್ಬದಂದು ಆರಂಭವಾಯಿತು *"ಲವ್ ಮಿ or ಹೇಟ್ ಮಿ".

ಗೌರಿಹಬ್ಬದಂದು ಆರಂಭವಾಯಿತು *"ಲವ್ ಮಿ or ಹೇಟ್ ಮಿ".

ಗೌರಿಹಬ್ಬದಂದು ಆರಂಭವಾಯಿತು *"ಲವ್ ಮಿ or ಹೇಟ್ ಮಿ".

Kannada new film

* *ಡಾರ್ಲಿಂಗ್ ಕೃಷ್ಣ - ರಚಿತಾ ರಾಮ್* ಅಭಿನಯದ ಚಿತ್ರಕ್ಕೆ *ದೀಪಕ್ ಗಂಗಾಧರ್* ನಿರ್ದೇಶನ. ನಾಡಿನಾದ್ಯಂತ ಗೌರಿ - ಗಣೇಶ ಹಬ್ಬದ ಸಡಗರ. ಗೌರಿ ಹಬ್ಬದ ಶುಭದಿನದಂದು *"ಲವ್ ಮಿ or ಹೇಟ್ ಮಿ"* ಚಿತ್ರದ ಮುಹೂರ್ತ ಸಮಾರಂಭ *ಧರ್ಮಗಿರಿ ಶ್ರೀ ಮಂಜುನಾಥ* ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ *ಮಿಲನ ನಾಗರಾಜ್* ಆರಂಭ ಫಲಕ ತೋರಿದರು.‌ *ದಿನಕರ್ ತೂಗುದೀಪ* ಕ್ಯಾಮೆರಾ ಚಾಲನೆ ಮಾಡಿದರು. *ದೀಪಕ್ ಗಂಗಾಧರ್* ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ತೂಗುದೀಪ ಸಂಸ್ಥೆಯ ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ, ದೀಪಕ್ ಗಂಗಾಧರ್ ಆ ನಂತರ ವಿತರಕರಾಗೂ ಹೆಸರು ಮಾಡಿರುವವರು. ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಗೌರಿ ಹಬ್ಬದ ಶುಭದಿನದಂದು ಚಿತ್ರ ಆರಂಭಿಸಿದ್ದೇವೆ. ಇದೇ ಹದಿಮೂರರಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ.‌ ಇದೊಂದು ಪಕ್ಕಾ ಲವ್ ಸ್ಟೋರಿ. ನಿಮ್ಮೆಲ್ಲರ ಬೆಂಬಲ ನಮಗಿರಲಿ ಎನ್ನುತ್ತಾರೆ ದೀಪಕ್ ಗಂಗಾಧರ್. ಒಳ್ಳೆಯ ಕಥೆ.‌ ಈ ಚಿತ್ರದಲ್ಲಿ ನನ್ನದು ಎರಡುರೀತಿಯ ಪಾತ್ರ. ಕಾಲೇಜ್ ಹುಡುಗನಾಗಿ ಹಾಗೂ ಕಾಲೇಜ್ ನಂತರದ ದಿನಗಳದ್ದು. ಲವ್ ಸಬ್ಜೆಕ್ಟ್ ನನಗೆ ಇಷ್ಟ ಹಾಗಾಗಿ ಹೆಚ್ಚಾಗಿ ಅದನೇ ಆಯ್ಕೆ ಮಾಡಿಕೊಳ್ಳುತ್ತೇನೆ.

Kannada new film

ನಾನು ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದೇವೆ. ನಾವಿಬ್ಬರು ಒಂದೇ ದಿನ ಚಿತ್ರರಂಗ ಪ್ರವೇಶಿಸಿದವರು. ಎಂಟು ವರ್ಷಗಳ ಹಿಂದೆ ನನ್ನ ಮದರಂಗಿ, ರಚಿತಾ ಅವರ ಬುಲ್ ಬುಲ್ ಒಂದೇ ದಿನ ತೆರೆ ಕಂಡಿತ್ತು. ಇಷ್ಟು ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೂಡಿ ಬಂದಿದೆ ಎಂದರು *ಡಾರ್ಲಿಂಗ್ ಕೃಷ್ಣ.* ನಿರ್ಮಾಪಕ *ಸುನೀಲ್* ಅವರು ಮಾತನಾಡುತ್ತಾ, ನನಗೆ ಕಾಲೇಜು ದಿನಗಳಿಂದಲ್ಲೂ ಸಿನಿಮಾ ನಿರ್ಮಾಣ ಮಾಡಬೇಕೆಂಬ ಹಂಬಲ.‌ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು.

ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು. ಚಿತ್ರದಲ್ಲಿ ಐದು ಹಾಡುಗಳಿವೆ. ಅಣ್ಣಾವ್ರ ಜನಪ್ರಿಯ ಹಾಡೇ ಚಿತ್ರದ ಗೀತೆಯಾಗಿದೆ. ತುಂಬಾ ಸುಮಧುರ ಗೀತೆಗಳು ಈ ಪ್ರೇಮಕಾಥಾನಕದಲಿರಲ್ಲಿದೆ ಎಂದು ಹಾಡುಗಳ ಹಾಗೂ ಸಂಗೀತದ ಬಗ್ಗೆ ವಿವರಣೆ ನೀಡಿದರು ಸಂಗೀತ ನಿರ್ದೇಶಕ ಹಾಗೂ ಸಹ ನಿರ್ಮಾಪಕ *ಶ್ರೀಧರ್ ಸಂಭ್ರಮ್.* ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ, ಈ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು ಛಾಯಾಗ್ರಹಕ *ಸಂತೋಷ್ ರೈ ಪಾತಾಜೆ.* ನಿರ್ದೇಶಕ ದೀಪಕ್ ಗಂಗಾಧರ್ ನನಗೆ ಬಹಳ ದಿನಗಳ ಪರಿಚಯ.

ಎಲ್ಲಾ ಹಾಡುಗಳನ್ನು ಬರೆಯಲು ಹೇಳಿದ್ದಾರೆ. ಎಲ್ಲಾ ಹಾಡುಗಳು ಮೆಲೋಡಿಯಾಗಿರಲಿದೆ ಎಂದು ಹಾಡುಗಳ ಬಗ್ಗೆ *ಕವಿರಾಜ್* ಮಾಹಿತಿ ನೀಡಿದರು. *ದೀಪಕ್ ಗಂಗಾಧರ್* ಮೂವೀಸ್ ಲಾಂಛನದಲ್ಲಿ *ಸುನೀಲ್ ಬಿ.ಎನ್* ಹಾಗೂ *ಮದನ್ ಗಂಗಾಧರ್* ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‌ *ಶ್ರೀಧರ್ ಸಂಭ್ರಮ್* ಹಾಗೂ *ಚಂದನ್* ಈ ಚಿತ್ರದ ಸಹ ನಿರ್ಮಾಪಕರು. *ನಾಗರಾಜ್ ಗೌಡ* ಕಾರ್ಯಕಾರಿ ನಿರ್ಮಾಪಕರು. *ಕೆ.ಎಂ.ಪ್ರಕಾಶ್* ಸಂಕಲನ, ‌ *ಈಶ್ವರಿ ಕುಮಾರ್* ಕಲಾ ನಿರ್ದೇಶನ, *ರವಿವರ್ಮ* ಸಾಹಸ ನಿರ್ದೇಶನ, *ಅಣ್ಣಯ್ಯ* ಸಹ ನಿರ್ದೇಶನ ಹಾಗೂ *ಮೋಹನ್* ಅವರ ನೃತ್ಯ ನಿರ್ದೇಶನವಿರುವ *"ಲವ್ ಮಿ or ಹೇಟ್ ಮಿ"* ಚಿತ್ರಕ್ಕೆ *ವಿಷ್ಣು ಹೆಬ್ಬಾರ್* ಸಂಭಾಷಣೆ ಬರೆಯುತ್ತಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.