Skip to main content
 ಭಾರತದ ಮೊಟ್ಟ ಮೊದಲ ಫಿಟ್ನೆಸ್  ಮಹಿಳೆ ಶೆಲ್ಲೀ ಅರೋರಾ.

ಭಾರತದ ಮೊಟ್ಟ ಮೊದಲ ಫಿಟ್ನೆಸ್ ಮಹಿಳೆ ಶೆಲ್ಲೀ ಅರೋರಾ.

ಭಾರತದ ಮೊಟ್ಟ ಮೊದಲ ಫಿಟ್ನೆಸ್ ಮಹಿಳೆ ಶೆಲ್ಲೀ ಅರೋರಾ.

 ಭಾರತದ ಮೊಟ್ಟ ಮೊದಲ ಫಿಟ್ನೆಸ್  ಮಹಿಳೆ ಶೆಲ್ಲೀ ಅರೋರಾ.

ಸಂಪೂರ್ಣ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯ ಸರ್ವಶ್ರೇಷ್ಟ ವೇದಿಕೆಯಾದ “ ನ್ಯಾಚುರಲ್ ಒಲಿಂಪಿಯಾ’ದಲ್ಲಿ ಸ್ಪರ್ಧಿಸಿದ ಭಾರತದ ಮೊಟ್ಟ ಮೊದಲ ಮಹಿಳೆ ಬೆಂಗಳೂರಿನ ಶೆಲ್ಲೀ ಅರೋರಾ. “ ಐಎನ್ಬಿಎ ಏಷ್ಯಾ ಪೆಸಿಫಿಕ್ ಫಿಟ್ನೆಸ್ ಸ್ಪರ್ಧೆಯ ಮಹಿಳಾ ಫಿಸಿಕ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ನಾಲ್ಕು ತಿಂಗಳರದಲ್ಲಿ ಬೆಂಗಳೂರಿನ 40ವರ್ಷದ ಮಹಿಳೆ ಶೆಲ್ಲೀ ಅರೋರಾ, ಮತ್ತೊಂದು ಮಹತ್ವದ ಹೆಜ್ಜೆಯಿಡುವ ಮೂಲಕ ತಮ್ಮ ಸಾಧನೆಯ ಕಿರಿಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದಾರೆ.ಅಮೆರಿಕ ಲಾಸ್ ವೇಗಸ್ನಲ್ಲಿ ಸೆ14 ರಿಂದ ಸೆ.17ರವರೆಗೆ ನಡೆದ ನ್ಯಾಚುರಲ್ ಒಲಿಂಪಿಯಾ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಬೆಂಗಳೂರು: ಮಾರ್ಕೆಟಿಂಗ್ ಕ್ಷೇತ್ರದ ವೃತ್ತಿಪರರಾದ ಬೆಂಗಳೂರಿನ ಮಹಿಳೆ ಶೆಲ್ಲೀ ಅರೋರಾ, ತಮ್ಮ ಫಿಟ್ನೆಸ್ ಅಭಿಯಾನದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಮುಟ್ಟಿದ್ದಾರೆ,ಐಎನ್ಬಿಎ ನ್ಯಾಚುರಲ್ ಒಲಿಂಪಿಯಾದಲ್ಲಿ ಪಾಲ್ಗೊಂಡು ಭಾರತದ್ ಮೊಟ್ಟ ಮೊದಲ ಮಹಿಳೆ ಎಂಬ ಕೀರ್ತಿ ಸಂಪಾದಿಸಿದ್ದಾರೆ.ಅಷ್ಟೇ ಅಲ್ಲದೆ ಸ್ಪೋರ್ಟ್ಸ್ ಮಾಡೆಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಪ್ರೋ ಬಿಕಿನಿ ಡೀವಾ ಮಾಡೆಲ್ ವಿಭಾಗದಲ್ಲಿ ಅಗ್ರ ,10ರೊಳಗೆ ಗುರುತಿಸಿಕೊಂಡಿದ್ದಾರೆ. “ ಸಂಪೂರ್ಣ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯ ಸರ್ವಶ್ರೇಷ್ಟ ವೇದಿಕೆ (ನ್ಯಾಚುರಲ್ ಒಲಿಂಪಯಾ )ಯಲ್ಲಿ ಪಾಲ್ಗೊಂಡಿರುವುದಕ್ಕೆ ಅತೀವ ಸಂತಸವಿದೆ,ಐಎನ್ ಬಿಎ ಅತ್ಯಂತ ವೃತ್ತಿಪರ ಒಕ್ಕೂಟವಾಗಿದ್ದು,ನ್ಯಾಚುರಲ್ ಬಾಡಿಬಿಲ್ಡರ್ ಗಳಿಗೆ ಜಾಗತಿಕ ಮಟ್ಟದ ಅತ್ಯುತ್ತಮ ವೇದಿಕೆಯನ್ನು ಒದಗಿಸಿಕೊಡುತ್ತಿದೆ, ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ ಸರ್ವಶ್ರೇಷ್ಠ ಅಥ್ಲೀಟ್ಗಳ ಎದುರು ಸ್ಪರ್ಧಿಸಿರುವುದು ನನಗೆ ಸಿಕ್ಕ ಗೌರವವಾಗಿದೆ,” ಎಂದ ಶೆಲ್ಲೀ ಅರೋರಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ .

 ಭಾರತದ ಮೊಟ್ಟ ಮೊದಲ ಫಿಟ್ನೆಸ್  ಮಹಿಳೆ ಶೆಲ್ಲೀ ಅರೋರಾ.

ಐಎನ್ಬಿಎ ( ಇಂಟರ್ ನ್ಯಾಷನಲ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್ ) ಆಯೋಜಿಸಿದ್ದ 22ನೇ ಆವೃತ್ತಿ ನ್ಯಾಚುರಲ್ ಒಲಿಂಪಿಯಾ ಸ್ಪರ್ಧೆಯನ್ನು ಅಮೆರಿಕದ ಲಾಸ್ ವೇಗಸ್ನಲ್ಲಿ ನಡೆಸಲಾಗಿತ್ತು. ಇದು ನ್ಯಾಚುರಲ್ ಬಾಡಿಬಿಲ್ಡಿಂಗ್ ನಲ್ಲಿ ಸರ್ವಶ್ರೇಷ್ಠ ಸ್ಪರ್ಧೆಯಾಗಿದೆ ಐಎನ್ಬಿಎ ನ್ಯಾಚುರಲ್ ಒಲಿಂಪಿಯಾ 2019ರ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ರಾಷ್ಟ್ರಗಳಿಂದ ನೂರಾರು ಅಥ್ಲಿಟ್ಗಳು ಪಾಲ್ಗೊಂಡಿದ್ದರು ಅಂದಹಾಗೆ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಹಾದಿ ಅಷ್ಟು ಸುಲಭಾದ್ದಾಗಿರಲಿಲ್ಲ ಕಠಿಣ ವ್ಯಾಯಾಮ ಮತ್ತು ಅಗತ್ಯದ ಆಹಾರ ಕ್ರಮ ಎಲ್ಲಾಕ್ಕಿಂತಲೂ ಮಿಗಿಲಾಗಿ ತಮ್ಮ ವೃತ್ತಿ ಜೀವನದ ಜೊತೆಯಲ್ಲಿ ಇದನ್ನು ನಿಭಾಯಿಸುವುದು ಬಹುದೊಡ್ಡ ಸವಾಲಾಗಿತ್ತು. “ ಜಾಗತಿಕ ಮಟ್ಟದ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊಟ್ಟ ಮೊದಲ ಮಹಿಳೆ ಎಂದೆನಿಸಿಕೊಂಡಿರುವುದಕ್ಕೆ ಹೆಮ್ಮೆಯಿದೆ ಭಾರತದಲ್ಲಿ ಮಹಿಳೆಯರ ಬಾಡಿಬಿಲ್ಡಿಂಗ್ ಗೆ ಅಷ್ಟು ಮಹತ್ವವಿಲ್ಲ ಹೀಗಿದ್ದರೂ ಈ ಕ್ಷೇತ್ರದಲ್ಲಿ ಅತ್ಯೂನ್ನತ ಸಾಧನೆ ಮಾಡಿರುವುದಕ್ಕೆ ಸಂತಸವಿದೆ ಆದರೆ ಈ ಪಯಣ ಅಷ್ಟು ಸುಲಭವಾಗಿರಲಿಲ್ಲ 36 ಗಂಟೆಗಳ ಪ್ರಯಾಣದ ಬಳಿಕ ದೇಹ ದಣಿದಿರುತ್ತದೆ ಚೇತರಿಸಲು ಸಮಯ ಬೇಕಿರುತ್ತದೆ ಆದರೆ ಇಲ್ಲಿ ಬಂದಿಳಿದ ಮರು ದಿನವೇ ಜಿಮಗೆ ತೆರೆಳಿದ್ದೆ ಎಲ್ಲಾ ಅಡೆತಡೆಗಳ ನಡುವೆಯೂ ಪರಿಸ್ಥಿತಿಯನ್ನು ನಿಭಾಯಿಸೆದೆ ಇದರ ಶ್ರೇಯಸ್ಸು ನನ್ನ ಕೋಚ್ಗೆ ಸಲ್ಲುತ್ತದೆ ವಿಮಾನ ಪ್ರಯಾಣದ ವೇಳೆ ನಾನು ತೆಗೆದುಕೊಳ್ಳಬೇಕಾದ ಆಹಾರ ಕುರಿತಾಗಿ ವ್ಯವಸ್ಥಿತ ಯೋಜನೆ ನೀಡಿದ್ದರು ಅಂತೆಯೇ ಆಹಾರ ಪದಾರ್ಥಗಳನ್ನು ಫ್ರೀಝ್ ಮಾಡಿ ತೆಗೆದುಕೊಂಡು ಹೋಗಿದ್ದೆ.” ಎಂದು ಶೆಲ್ಲೀ ಹೇಳಿದ್ದಾರೆ .

ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಶೆಲ್ಲೀ ಬಹುದೊಡ್ಡ ನೆಗೆತ ಕಂಡಿದ್ದು ಏಷ್ಯಾ ಪೆಸಿಫಿಕ್ ಚಾಂಪಿಯನ್ ಫಿಪ್ ಗೆಲುವಿನ ಬಳಿಕ ನೇರವಾಗಿ ಐಎನ್ಬಿಎ ಆಯೋಜನೆಯ ಅಂತಾರಾಷ್ಟ್ರೀಯ ಮಟ್ಟದ ನ್ಯಾಚುರಲ್ ಒಲಿಂಪಿಯಾಗೆ ಕಾಲಿಟ್ಟಿದ್ದಾರೆ. ಇದಕ್ಕೆ ನ್ಯಾಚುರಲ್ ಬಾಡಿಬಿಲ್ಡಿಂಗ್ ಅಭ್ಯಾಸವೇ ಮಂತ್ರ ಎಂದು ಶೆಲ್ಲೀ ಹೇಳಿಕೊಂಡಿದ್ದಾರೆ “ ಒಂದರ ನಂತರ ಒಂದು ಸ್ಪರ್ಧೆಗಳಲ್ಲಿ ಪಾಲ್ಗೋಳ್ಳುವುದು ಸಾಧ್ಯವಾಗಿದೆ ಇದಕ್ಕೆ ಕಠಿಣ ವ್ಯಾಯಾಮ ಮತ್ತು ಶಿಸ್ತು ಅಗತ್ಯ ನೈಸರ್ಗಿಕ ಬಾಡಿಬಿಲ್ಡಿಂಗ್ ಇಲ್ಲಿ ಮುಖ್ಯ ನೈಸರ್ಗಿಕವಾಗಿ ಮಾಂಸಖಂಡಗಳು ಬೆಳೆಯುವಂತೆ ಮಾಡಲು ಸಮಯ ತೆಗೆದುಕೊಳ್ಳುತ್ತದೆ ಆದರೆ ಸ್ಟೆರಾಯ್ಡಾಗಳ ಬಳಕೆ ಮಾಡಿ ಶ್ರೀಘ್ರವಾಗಿ ಮಾಂಸಖಂಡಗಳನ್ನು ಬೆಳೆಸಿಕೊಳ್ಳುವುದರಿಂದ ಲಾಭಕ್ಕಿಂತಲೂ ಅಡ್ಡ ಪರಿಣಾಮಗಳೆ ಹೆಚ್ಚಿರುತ್ತದೆ. ಎಂದು ಶೆಲ್ಲೀ ವಿವರಿಸಿದ್ದಾರೆ. ಕಳೆದ 17 ವರ್ಷಗಳಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಮಾರ್ಕೆಟಿಂಗ್ ವೃತ್ತಿಪರರಾಗಿ ಕೆಲಸ ಮಾಡುತ್ತಿರುವ ಶೆಲ್ಲೀ ಅರೋರಾ, ವೃತ್ತಿಪರರು ಫಿಟ್ನೆಸ್ ಕಡೆಗೆ ಗಮನ ನೀಡಿ ತಮ್ಮಆರೋಗ್ಯ ಸುಧಾರಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

 ಭಾರತದ ಮೊಟ್ಟ ಮೊದಲ ಫಿಟ್ನೆಸ್  ಮಹಿಳೆ ಶೆಲ್ಲೀ ಅರೋರಾ.

“ಕಾರ್ಪೊರೇಟ್ ಜಗತ್ತಿನಲ್ಲಿ ಜೀವನ ಬಹಳ ಕಷ್ಟವಾಗಿರುತ್ತದೆ.ಅತಿಯಾದ ಕೆಲಸ ಕಾರ್ಯಗಳಿಂದಾಗಿ ನಾವು ನಮ್ಮ ಆರೋಗ್ಯ ಮತ್ತು ಫಿಟ್ನೆಸ್ ಕಡೆಗೆ ಗಮನ ನೀಡುವುದಿಲ್ಲ ವೃತ್ತಿಪರರು ತಮ್ಮ ಫಿಟ್ನೆಸ್ ಕಡೆಗೆ ಗಮನ ನೀಡಿ ಲವಲವಿಕೆಯಿಂದ ಇರಬೇಕು “ ಎಂದಿದ್ದಾರೆ .ನ್ಯಾಚುರಲ್ ಒಲಿಂಪಿಯಾದಲ್ಲಿ ಲಭ್ಯವಾದ ಯಶಸ್ಸಿನ ಬಳಿಕ ಮತ್ತಷ್ಟು ಪ್ರೇರಿಪಿತರಾಗಿರುವ ಶೆಲ್ಲೀ ಅರೋರಾ.2020ರ ಸಾಲಿನಲ್ಲಿ ಮತ್ತಷ್ಟು ಸ್ಪರ್ಧೆಗಳಲ್ಲಿ ಪಾಲ್ಗೋಳ್ಳುವುದನ್ನು ಎದುರು ನೋಡುತ್ತಿದ್ದಾರೆ ಅಷ್ಟೇ ಅಲ್ಲದೆ ಆನ್ಲೈನ್ ಮೂಲಕ ಫಿಟ್ನೆಸ್ ಕಾರ್ಯಕ್ರಮಗಳನ್ನು ಆಯೋಜಿಸುವು ಯೋಜನೆ ಆರಂಭಿಸುತ್ತಿದ್ದು, ಜನಸಾಮಾನ್ಯರನ್ನು ಫಿಟ್ ಆಗಿಸುವ ಗುರಿ ಹೊಂದಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.