Skip to main content
ವಿಶಿಷ್ಟ ಸಂಗೀತ ವಾದ್ಯ ನಿರ್ಮಿಸಿದ ವಿದ್ಯಾರ್ಥಿಗಳು

ವಿಶಿಷ್ಟ ಸಂಗೀತ ವಾದ್ಯ ನಿರ್ಮಿಸಿದ ವಿದ್ಯಾರ್ಥಿಗಳು

ವಿಶಿಷ್ಟ ಸಂಗೀತ ವಾದ್ಯವನ್ನು ತಯಾರು ಮಾಡಿದ ಏಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ವಿದ್ಯಾರ್ಥಿಗಳು

ಹಳೆ ಕಾಲದ ಮೆಟಲ್ಗಳು

ಹಳೆ ಕಾಲದ ಮೆಟಲ್‌ಗಳನ್ನು ಬಳಸಿ ನಿರ್ಮಾಣವಾದ ಸಂಗೀತ ಉಪಕರಣ ಬೆಂಗಳೂರು, ಏಟ್ರಿಯಾ ವಿಶ್ವವಿದ್ಯಾಲಯದ ಇಂಟರ್ನ್ಗಳು ಪ್ರಾಚೀನ ಕಾಲದಲ್ಲಿ ಬಳಸಿದ ಮೆಟಲ್‌ಗಳನ್ನು ಆಯ್ದು, ವಿಭಿನ್ನ ರೀತಿಯ "ಸಂಗೀತ ಉಪಕರಣವನ್ನು" ನಿರ್ಮಿಸಿದ್ದಾರೆ. ಸ್ಕ್ರಾಪ್ ಮೆಟಲ್ ಮ್ಯೂಸಿಕ್ ಉಪಕರಣದ ವಿಶೇಷವೆಂದರೆ, ಈ ಉಪಕರಣವನ್ನು ವೃತ್ತಾಕಾರವಾಗಿ ತಿರುಗಿಸುವ ಮೂಲಕ ರಾಷ್ಟ್ರಗೀತೆಯನ್ನು ನುಡಿಸಬಹುದು. ಕೈಗಾರಿಕಾ ಹೊಲಿಗೆ ಯಂತ್ರಗಳು ಮತ್ತು ಗ್ರೈಂಡಿಂಗ್ ಮೋಟರ್‌ಗಳಿಂದ ಉಳಿದಿರುವ ಕೊಳವೆಗಳನ್ನು ಈ ಉಪಕರಣದ ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ.

ಹಳೆ ಕಾಲದ ಮೆಟಲ್

ಇದರಿಂದ ನಿರ್ಮಾಣಗೊಂಡ ಈ ಉಪಕರಣದಿಂದ ಸುಮಧುರ ನಾದ ಹೊರಹೊಮ್ಮುತ್ತದೆ. ಏಟ್ರಿಯಾ ವಿಶ್ವವಿದ್ಯಾಲಯದ ಇಂಟರ್ನ್ಗಳು ಒಂದು ತಿಂಗಳ ಕಾಲ ಶ್ರಮಿಸಿ ಈ ಸಂಗೀತ ಉಪಕರಣವನ್ನು ನಿರ್ಮಿಸಿದ್ದಾರೆ. ಈ ಉಪಕರಣದಿಂದ ರಾಷ್ಟ್ರಗೀತೆಯ ಚಿಕ್ಕ ಆವೃತ್ತಿಯನ್ನು ನುಡಿಸಲು ಸಾಧ್ಯವಾಗಲಿದೆ. ಜೊತೆಗೆ ಭಾರತೀಯ ರೋಲರ್ – ತೆಲಂಗಾಣ ಮತ್ತು ಕರ್ನಾಟಕದ ರಾಜ್ಯ ಪಕ್ಷಿಯನ್ನು ಸಹ ವಿನ್ಯಾಸಗೊಳಿಸಿದ್ದಾರೆ. ತಾವು ನಿರ್ಮಿಸಿದ ಹೊಸ ಸಂಗೀತ ಉಪಕರಣದ ಬಗ್ಗೆ ಮಾತನಾಡಿದ ಗುಂಪಿನ ಸದಸ್ಯರಲ್ಲೊಬ್ಬರಾದ ತೇಜಸ್ವಿ ಚಕ್ರವರ್ತಿ, “ಈ ಉಪಕರಣ ತಯಾರಿಸಲು ಒಂದು ತಿಂಗಳು ತೆಗೆದುಕೊಂಡಿದ್ದೇವೆ. ಇದಕ್ಕೆ "ಸ್ಕ್ರಾಪ್ ಮೆಟಲ್ ಮ್ಯೂಸಿಕ್ ಉಪಕರಣ" ಎಂದು ನಾಮಕರಣ ಮಾಡಿದ್ದೇವೆ," ಎಂದರು.

ಉಪಕರಣ

ಈ ಉಪಕರಣವು ಹಳೇ ಕಬ್ಬಿಣ ಹಾಗೂ ಅದುರಿನ ವಸ್ತುಗಳಿಂದ 80 ಕ್ಕೂ ಹೆಚ್ಚು ಕೊಳವೆ ಆಕಾರದ ವಸ್ತುಗಳನ್ನು ಸಂಗ್ರಹಿಸಿ ನಿರ್ಮಿಸಿದ್ದೇವೆ. ಈ ಕಲ್ಪನೆಯ ಹಿಂದಿನ ಸ್ಫೂರ್ತಿ ಕ್ಸೈಲೋಫೋನ್ ಎಂದು ತಮ್ಮ ಶ್ರಮದ ಬಗ್ಗೆ ಮಾತನಾಡಿದರು. ತಂಡದ ಭಾಗವಾಗಿದ್ದ ಜಾನ್ ಕರಮ್‌ಚಂದ್ ಮಾತನಾಡಿ, "ರಾಷ್ಟ್ರಗೀತೆಯ ಸಣ್ಣ ಆವೃತ್ತಿಯನ್ನು ಈ ಉಪಕರಣದಿಂದ ನುಡಿಸಬಹುದು. ಇದು ಭಾರತದ ನಾಗರಿಕರಲ್ಲಿ ರಾಷ್ಟ್ರೀಯ ಸಮಗ್ರತೆ, ಐಕ್ಯತೆ ಮತ್ತು ಸಹೋದರತ್ವವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ಈ ತಂಡದ ಮುಖ್ಯ ಭಾಗವಾದ ಜೋಯಲ್, ಕಾರ್ತಿಕ್, ಸೆಂಧಿಲ್ ಮತ್ತು ಸಿಲ್ವೆಸ್ಟರ್ ಅವರು ಅವರ ಸಂಗೀತ, ಶಿಲ್ಪಕಲೆ ಮತ್ತು ಎಂಜಿನಿಯರಿಂಗ್ ಪರಿಣಿತಿಯನ್ನು ಉಪಯೋಗಿಸಿ ಈ ಸಂಗೀತ ಉಪಕರಣವನ್ನು ನಿರ್ಮಿಸಿದ್ದಾರೆ. ಸಿಲ್ವೆಸ್ಟರ್ ಮಾತನಾಡಿ, "ಸ್ಕ್ರಾಪ್ ಮೆಟಲ್ ಮ್ಯೂಸಿಕ್ ಉಪಕರಣ"ವನ್ನು 15 ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ್ದಾರೆ.

ಸಂಗೀತ ಉಪಕರಣ

ಒಟ್ಟಾರೆ ಒಂದು ಅದ್ಭುತ ಸಂಗೀತ ಉಪಕರಣ ನಿರ್ಮಾಣ ಮಾಡಿದ ಹೆಮ್ಮೆ ಇದೆ" ಎಂದರು. ಏಟ್ರಿಯಾ ವಿಶ್ವವಿದ್ಯಾಲಯದ ನಿರ್ದೇಶಕ ಕೌಶಿಕ್ ರಾಜು, ಈ ಯೋಜನೆಯನ್ನು ಅಂತರ ಶಿಕ್ಷಣ ಚೈತನ್ಯವನ್ನು ಉತ್ತೇಜಿಸುವ ಮತ್ತು ಬೆಳೆಸುವ ವಿಶ್ವವಿದ್ಯಾಲಯದ ಧ್ಯೇಯದ ಅದ್ಭುತ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.

ಈ ವಿನೂತನ ಸಂಗೀತ ಉಪಕರಣವನ್ನು ಹೈದರಾಬಾದ್‌ನಲ್ಲಿ ನಡೆಯುವ ಮೇಕರ್ ಫೇರ್ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿ ರಾಜ್ಯದ ಕೀರ್ತಿ ಹೆಚ್ಚಿಸಲಿದ್ದೇವೆ. ಈ ಕಾರ್ಯಕ್ರಮವು ನವೆಂಬರ್ 10, 2019 ರಂದು ಹೈದರಾಬಾದ್‌ನ ಹೈಟೆಕ್ಸ್ ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ ಎಂದರು. ಪ್ರಸ್ತುತ ಈ ಉಪಕರಣ ಏಟ್ರಿಯಾ ಇನ್‌ಸ್ಟಿಟ್ಯೂಟ್‌ನಲ್ಲಿಯೇ ಇಡಲಾಗುತ್ತದೆ. ಜನರಿಗೆ ಪ್ರದರ್ಶಿಸಿ, ಸಂಗೀತ ನುಡಿಸಲಾಗುತ್ತದೆ ಎಂದು ವಿವರಿಸಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.