Skip to main content
ಜನವರಿಯಲ್ಲಿ  ಶುಗರ್ ಫ್ಯಾಕ್ಟರಿ ಆರಂಭ

ಜನವರಿಯಲ್ಲಿ *ಶುಗರ್ ಫ್ಯಾಕ್ಟರಿ* ಆರಂಭ

ಜನವರಿಯಲ್ಲಿ ಶುಗರ್ ಫ್ಯಾಕ್ಟರಿ ಆರಂಭ.

Kannada new film

ದೀಪಕ್ ಅರಸ್   ನಿರ್ದೇಶನದ ಚಿತ್ರದಲ್ಲಿ ‌ ಡಾರ್ಲಿಂಗ್ ಕೃಷ್ಣ- ಸೋನಲ್ ಮಾಂಟೆರೊ ನಾಯಕ- ನಾಯಕಿ.

ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ಶುಗರ್ ಫ್ಯಾಕ್ಟರಿ ಎಂಬ ಶೀರ್ಷಿಕೆ ಖಾತ್ರಿಯಾಗಿದೆ. *ಕೃಷ್ಣ* ಅವರಿಗೆ ನಾಯಕಿಯಾಗಿ ಬೆಡಗಿ *ಸೋನಾಲ್ ಮಾಂಟೆರೊ* ಅಭಿನಯಿಸುತ್ತಿದ್ದಾರೆ.

ಫನ್ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರ ಚಿತ್ರವನ್ನು *ದೀಪಕ್ ಅರಸ್* ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ *ಮನಸಾಲಜಿ* ಎಂಬ ಚಿತ್ರ ನಿರ್ದೇಶಿಸಿದ್ದ ದೀಪಕ್ ಅರಸ್ ಅವರಿಗೆ ಇದು ದ್ವಿತೀಯ ನಿರ್ದೇಶನದ ಚಿತ್ರ. ದೀಪಕ್ ಅರಸ್ ಕನ್ನಡದ ಖ್ಯಾತ ನಟಿ *ಅಮೂಲ್ಯ* ಅವರ ಸಹೋದರ. *ದೀಪಕ್ ಅರಸ್* ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು *ಬಹದ್ದೂರ್ ಚೇತನ್ ಕುಮಾರ್* ಬರೆಯುತ್ತಿದ್ದಾರೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ *ಗಿರೀಶ್ ಆರ್* ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಹಂತಹಂತವಾಗಿ ಗೋವಾ, ಮೈಸೂರು ಹಾಗೂ ಅಬ್ರಾಡ್ ನಲ್ಲಿ ಚಿತ್ರೀಕರಣ ಸಾಗಲಿದೆ. ಆರು ಹಾಡುಗಳಿದ್ದು, *ಕಬೀರ್ ರಫಿ* ಸಂಗೀತ ನೀಡುತ್ತಿದ್ದಾರೆ. *ಸಂತೋಷ್ ರೈ ಪಾತಾಜೆ* ತಮ್ಮ ಕ್ಯಾಮೆರಾದಲ್ಲಿ *ಶುಗರ್ ಫ್ಯಾಕ್ಟರಿ* ಯನ್ನು ಸುಂದರವಾಗಿ ಸೆರೆಹಿಡಿಯಲಿದ್ದಾರೆ.‌ ಈ ಚಿತ್ರದಲ್ಲಿ *ಡಾರ್ಲಿಂಗ್ ಕೃಷ್ಣ* ಅವರಿಗೆ ಮೂರು ನಾಯಕಿಯರಿದ್ದು, *ಸೋನಾಲ್ ಮಾಂಟೆರೊ* ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನಿಬ್ಬರು ನಾಯಕಿಯರು ಸೇರಿದಂತೆ ಉಳಿದ ತಾರಾಬಳಗದ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.