ದುನಿಯಾ ವಿಜಯ್ ಅವರಿಂದ "ALLA ನವೀನಾ" ಆಲ್ಬಂ ಸಾಂಗ್ ಬಿಡುಗಡೆ.
ದುನಿಯಾ ವಿಜಯ್ ಅವರಿಂದ "ALLA ನವೀನಾ" ಆಲ್ಬಂ ಸಾಂಗ್ ಬಿಡುಗಡೆ.

ರಾಜ್ ಬಿ ಶೆಟ್ಟಿ - ಅಥರ್ವ ಅಭಿನಯದ ಈ ಹಾಡಿಗೆ ನಾಗಾರ್ಜುನ ಶರ್ಮ ನಿರ್ದೇಶನ. ನಾವು ಸಾಮಾನ್ಯವಾಗಿ ಆಡುವ ಮಾತುಗಳಲ್ಲಿ. ಅಲ್ಲಾ ಎಂಬ ಶಬ್ದ ಹೆಚ್ಚು ಉಚ್ಚಾರಣೆ ಮಾಡುತ್ತೇವೆ. ’ALLA ಹೀಗೇಕೆ, ALLA ನೀನೇನು ಮಾಡಿದೆ’ ಹೀಗೆ ಅನೇಕ ಮಾತುಗಳ ಜೊತೆಗೆ ALLA ಎಂಬ ಪದವನ್ನು ಹೆಚ್ಚಾಗಿ ಬಳಸುತ್ತೇವೆ. ಈ ಶಬ್ದದಿಂದ ಪ್ರೇರಿಪಿತರಾದ ಯುವ ಪ್ರತಿಭೆಗಳ ತಂಡವೊಂದು ’ALLA ನವೀನಾ’ ಎನ್ನುವ ನಾಲ್ಕು ನಿಮಿಷದ ವಿಡಿಯೋ ಆಲ್ಬಂ ಸಿದ್ದಪಡಿಸಿದ್ದಾರೆ.
’ಅವನೇ ಶ್ರೀಮನ್ನಾರಾಯಣ’, ’ಸಲಗ’ ಚಿತ್ರಗಳಿಗೆ ಹಾಡನ್ನು ಬರೆದಿರುವ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು, ನಿರ್ದೇಶನ ಮಾಡಿದ್ದಾರೆ. ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್ ಮಾತನಾಡಿ, ಮುಂದೆ ನಾಗಾರ್ಜುನ್ ಶರ್ಮ ನಿರ್ದೇಶಕರಾಗುವ ಎಲ್ಲಾ ಲಕ್ಷಣಗಳು ಇದೆ.
"ಬೇಕಾ ಪ್ರೀತಿ ಬೇಡ್ವಾ’ ಗೀತೆ ನೋಡಲು, ಕೇಳಲು ತುಂಬಾ ಚೆನ್ನಾಗಿದೆ. ನಾನು ಸರ್ಕಸ್ ಹೊಡಿಬೇಕಾದಾಗ ಇಂತಹ ಯಾವುದು ಗೊತ್ತಿರಲಿಲ್ಲ. ಈಗ ಹಾಗಲ್ಲ. ನಾವು ಒಂದು ಹಾಡಿನ ಮೂಲಕ ನಮ್ಮ ಪ್ರತಿಭೆ ತೋರಿಸಬಹುದು. . ಇವತ್ತು ನಮ್ಮನ್ನು ಸಾಬೀತು ಪಡಿಸಿಕೊಳ್ಳಲು ಹಾಡು, ಕಿರುಚಿತ್ರ ಹೀಗೆ ಅನೇಕ ವೇದಿಕೆಯಿದೆ. ಪತ್ರಿಕೆ, ದೃಶ್ಯ ಮಾದ್ಯಮ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದೀರಾ. ಇದೇ ರೀತಿ ಮುಂದುವರೆಯಲಿ. ನಾನು ನಿಮ್ಮ ಜೊತೆ ಇರುತ್ತೆನೆಂದು ಹೇಳಿ ತಂಡಕ್ಕೆ ಶುಭ ಹಾರೈಸಿದರು. ನಾವು ಹೆಚ್ಚು ಬಳಸುವ ಪದವನ್ನು ತೆಗೆದುಕೊಂಡು ಹಾಡನ್ನು ಮಾಡಿದ್ದೇವೆ. ನಿರಾಸೆ ಮತ್ತು ಹಾಸ್ಯದ ರೂಪದಲ್ಲಿ ಗೀತೆ ಬಂದಿದೆ. ನೋಡುವವರಿಗೆ ಬೇಜಾರು ಮಾಡದೆ, ನಗಿಸಿಕೊಂಡು ತತ್ವಗಳನ್ನು ಹೇಳಲಾಗಿದೆ. ಇಂದಿನ ಯುವ ಜನಾಂಗಕ್ಕೆ ಬುದ್ದಿವಾದ ಹೇಳುವ ಪಾತ್ರದಲ್ಲಿ ರಾಜ್.ಬಿ.ಶೆಟ್ಟಿ ಚೆನ್ನಾಗಿ ನಟಿಸುವ ಜತೆಗೆ ಹೆಜ್ಜೆ ಹಾಕಿದ್ದಾರೆ. ಅಭಿನಯ ತರಂಗ ವಿದ್ಯಾರ್ಥಿ ಅಥರ್ವ ನಾಯಕನಾಗಿ ಪರಿಚಯಗೊಂಡಿದ್ದಾರೆ. ಇವರೊಂದಿಗೆ ಸ್ಪೂರ್ತಿ ಉಡಿಮನೆ ಕಾಣಿಸಿಕೊಳ್ಳುತ್ತಾರೆ. ಮಾಡ್ರನ್ ಯುಗದಲ್ಲಿ ಲವ್ ಯಾವ ತರಹ ಇರುತ್ತದೆ ಎಂಬುದನ್ನು ತೋರಿಸಲಾಗಿದೆ. ಖ್ಯಾತ ಗಾಯಕ ಆಂಥೋನಿ ದಾಸ್ ಈ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಹಾಡು ಮೂಡಿಬಂದಿದೆ.
ಕನ್ನಡದಲ್ಲಿ ಪರಂ ವಾ ಸ್ಟುಡಿಯೋದವರು ಬಿಡುಗಡೆ ಮಾಡುತ್ತಿದ್ದು, ತಮಿಳಿನಲ್ಲಿ ಐರಾ ಮ್ಯೂಸಿಕ್ ಸಂಸ್ಥೆಯುವರು ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ನಿರ್ದೇಶಕ ನಾಗಾರ್ಜುನ ಶರ್ಮ ಮಾಹಿತಿ ನೀಡಿದರು. ಆನಂದ್ ರಾಜ್ವಿಕ್ರಂ ಸಂಗೀತ ನಿರ್ದೇಶನ, ವಿಶ್ವಾಸ್ ಛಾಯಾಗ್ರಹಣ ಹಾಗೂ ನೃತ್ಯ ನಿರ್ದೇಶನ ಮುರುಗ ಅವರದಾಗಿದೆ. ಹೆಸರುಘಟ್ಟ ಬಳಿ ಇರುವ ಕಸಿಪು ಲಾಂಜ್ದಲ್ಲಿ ನಾಲ್ಕು ರಾತ್ರಿಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
Recent comments