Skip to main content
2019ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು: ಅಗ್ರ ಐದರಲ್ಲಿ ಕನ್ನಡಿಗ ಮಯಾಂಕ್ :

2019ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು: ಅಗ್ರ ಐದರಲ್ಲಿ ಕನ್ನಡಿಗ ಮಯಾಂಕ್ :

2019ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು: ಅಗ್ರ ಐದರಲ್ಲಿ ಕನ್ನಡಿಗ ಮಯಾಂಕ್ :

Mayank

ನವದೆಹಲಿ: ಕಳೆದ 2018ರ ಕೊನೆಯಲ್ಲಿ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು 2019ರ ಆವೃತ್ತಿಯಲ್ಲಿ ರನ್ ಹೊಳೆ ಹರಿಸಿದ್ದಾರೆ. ಇದರೊಂದಿಗೆ ದೀರ್ಘ ಅವಧಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ೫ ಸ್ಥಾನ ಪಡೆದಿದ್ದಾರೆ. ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಭಾರತ ಅಗ್ರ ಸ್ಥಾನ ಕಾಪಾಡಿಕೊಂಡರೆ, ನಾಯಕ ವಿರಾಟ್ ಕೊಹ್ಲಿ ನಂ. 1 ಶ್ರೇಯಾಂಕದಲ್ಲಿ 2019 ನೇ ವರ್ಷವನ್ನು ಮುಗಿಸಿದ್ದಾರೆ. ಆದಾಗ್ಯೂ ಅವರು ಟೆಸ್ಟ್‌ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸಿದ ಅಗ್ರ 5 ಬ್ಯಾಟ್ಸ್‌‌ಮನ್ ಗ ಪಟ್ಟಿಯಲ್ಲಿ ರನ್ ಮಷೀನ್ ಕೊಹ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

1.ಮಾರ್ನಸ್ ಲಾಬುಶೇನ್: ಆಸ್ಟ್ರೇಲಿಯಾ ತಂಡದ ಮಾರ್ನಸ್ ಲಾಬುಶೇನ್ 2019ರಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದಾರೆ. ಈ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದವ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಲಾಬುಶೇನ್ ಅಲಂಕರಿಸಿದ್ದಾರೆ. 10 ಪಂದ್ಯಗಳ 15 ಇನಿಂಗ್ಸ್‌‌ಗಲ್ಲಿ ಇವರು 68.13 ಸರಾಸರಿಯಲ್ಲಿ 1022 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 6 ಅರ್ಧಶತಕಗಳು ಇವೆ. ಕಳೆದ 2018ರಲ್ಲಿಯೇ ಪಾಕಿಸ್ತಾನ ವಿರುದ್ಧ ಟೆಸ್ಟ್‌ ಗೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು ಕಳಪೆ ಪ್ರದರ್ಶನ ನೀಡಿದ್ದರು. ಆದರೆ, 2019ರ ಆವೃತ್ತಿಯಲ್ಲಿ ರನ್ ಹೊಳೆ ಹರಿಸುವಲ್ಲಿ ಸಫಲರಾದರು. ಪಾಕ್ ವಿರುದ್ಧವೇ ಕಳೆದ ನವೆಂಬರ್‌ನಲ್ಲಿ ಬ್ರಿಸ್ಬೇನ್ ಹಾಗೂ ಅಡಿಲೇಡ್‌ನಲ್ಲಿ ಕ್ರಮವಾಗಿ 185 ಮತ್ತು 162 ರನ್ ಚಚ್ಚಿದ್ದರು.

2. ಸ್ಟೀವನ್ ಸ್ಮಿತ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರು 2019ರಲ್ಲಿ ಅತುಇ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಇವರು ಚೆಂಡೂ ವಿರೂಪ ಪ್ರಕರಣದಲ್ಲಿ ಒಂದು ಶಿಕ್ಷೆೆ ಅನುಭವಿಸಿ ಮತ್ತೇ ತಂಡ ಕೂಡಿಕೊಂಡ ಸ್ಮಿತ್, 2019ರ ಆವೃತ್ತಿಯಲ್ಲಿ 7 ಟೆಸ್‌ಟ್‌ ಪಂದ್ಯಗಳಿಂದ (11 ಇನಿಂಗ್ಸ್‌) 873 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಮೂರು ಶತಕ ಸೇರಿದಂತೆ ಹಲವು ಅರ್ಧಶತಕಗಳಿವೆ.

3.ಜೋ ರೂಟ್: ಇಂಗ್ಲೆೆಂಡ್ ಟೆಸ್ಟ್‌ ತಂಡದ ನಾಯಕ ಜೋ ರೂಟ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2019ರ ಋತುವಿನಲ್ಲಿ ರೂಟ್, 11 ಪಂದ್ಯಗಳಿಂದ ಎರಡು ಶತಕ ಹಾಗೂ ನಾಲ್ಕು ಅರ್ಧಶತಕಗಳೊಂದಿಗೆ 36.85 ಸರಾಸರಿಯಲ್ಲಿ 774 ರನ್ ದಾಖಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್ ಟೆಸ್ಟ್‌ ನಲ್ಲಿ ರೂಟ್ ದ್ವಿಶತಕ ಬಾರಿಸಿದ್ದರು. 441 ಎಸೆತಗಳಿಂದ 22 ಬೌಂಡರಿ ಹಾಗೂ ಒಂದು ಸಿಕ್ಸರ್‌ನೊಂದಿಗೆ ಒಟ್ಟು 226 ರನ್ ದಾಖಲಿಸಿದ್ದರು. ಈ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಗಿತ್ತು.

4.ಬೆನ್ ಸ್ಟೋಕ್ಸ್‌: ಇಂಗ್ಲೆೆಂಡ್ ತಂಡ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಕ್ರಿಕೆಟ್ ಎಲ್ಲ ಮಾದರಿಯಲ್ಲಿ ತಂಡಕ್ಕೆೆ ಭರವಸೆಯ ಆಟಗಾರರಾಗಿದ್ದಾರೆ. 2019ರ ವರ್ಷದಲ್ಲಿ ಅವರು ಆಡಿರುವ 10 ಪಂದ್ಯಗಳಿಂದ (19 ಇನಿಂಗ್ಸ್‌) 772 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ನಾಲ್ಕು ಅರ್ಧಶತಕಗಳಿವೆ. ಟೆಸ್ಟ್‌ ನಾಲ್ಕನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್‌‌ಮನ್ ಆಗಿ ಸ್ಟೋಕ್ಸ್‌ 2019ನೇ ವರ್ಷವನ್ನು ಪೂರ್ಣಗೊಳಸಿದ್ದಾರೆ.

5. ಮಯಾಂಕ್ ಅಗರ್ವಾಲ್: ಅತ್ಯಂತ ಕಡಿಮೆ ಅವಧಿಯಲ್ಲಿ ಟೀಮ್ ಇಂಡಿಯಾ ದ ಆರಂಭಿಕ ಬ್ಯಾಟ್ಸ್‌‌ಮನ್ ಆಗಿ ತನ್ನ ಸ್ಥಾನವನ್ನು ಗಟ್ಟಿಮಾಡಿದ್ದಾರೆ. ಮುರಳಿ ವಿಜಯ್ ಹಾಗೂ ಕೆ.ಎಲ್ ರಾಹುಲ್ ಆರಂಭಿಕರಾಗಿ ವಿಫಲರಾದ ಬಳಿಕ ಅವಕಾಶ ಪಡೆದ ಕರ್ನಾಟಕ ಆಟಗಾರ ಮಯಾಂಕ್ ಅಗರ್ವಾಲ್ ಸಿಕ್ಕ ಅವಕಾಶಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯಕ್ಕೆೆ ಪದಾರ್ಪಣೆ ಮಾಡಿದ್ದ ಮಯಾಂಕ್, 161 ಎಸೆತಗಳಲ್ಲಿ 76 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಎರಡನೇ ಇನಿಂಗ್ಸ್‌ ನಲ್ಲೂ ಅವರು 42 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 137 ರನ್ ಗಳಿಂದ ಜಯ ಸಾಧಿಸಿತ್ತು. ಅಂತಿಮವಾಗಿ ಭಾರತ 2-1 ಅಂತರದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದಿತ್ತು. ಅಂದಿನಿಂದ ಇಲ್ಲಿಯವರೆಗೂ ಅಗರ್ವಾಲ್ ಸ್ಥಿರ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದಾರೆ. 2019ನೇ ವರ್ಷದಲ್ಲಿ ಎರಡು ದ್ವಿಶತಕ ಬಾರಿಸಿದ್ದರು. ವಿಶಾಖಪಟ್ಟಣಂದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 215 ಹಾಗೂ ಇಂದೋರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 243 ರನ್ ಸಿಡಿಸಿದ್ದರು. 2019ರಲ್ಲಿ ಎಂಟು ಪಂದ್ಯಗಳಿಂದ ಬಲಗೈ ಬ್ಯಾಟ್ಸ್‌‌ಮನ್ 754 ರನ್ ದಾಖಲಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಎರಡು ಅರ್ಧಶತಕಗಳಿವೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.