Skip to main content
ನತಾಶಾ ಜೊತೆ ಮದುವೆಗೆ ಒಪ್ಪಿಗೆ ಹಾರ್ಧಿಕ್ ಪಾಂಡ್ಯ

ನತಾಶಾ ಜೊತೆ ಮದುವೆಗೆ ಒಪ್ಪ್ಪಿಗೆ ಹಾರ್ಧಿಕ್ ಪಾಂಡ್ಯ

ನತಾಶ ಅವರೊಂದಿಗಿನ ಸಂಬಂಧ ಒಪ್ಪಿಕೊಂಡ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ

Hardhik pandy

ಮುಂಬೈ: ಹಲವು ದಿನಗಳಿಂದ ತಮ್ಮ ಪ್ರೇಯಸಿ ವಿಚಾರದ ಕುರಿತು ಗೊಂದಲ ಮೂಡಿಸಿದ್ದ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೊನೆಗೂ 2020 ವರ್ಷದ ಮೊದಲನೇ ದಿನವೇ ಸ್ಪಷ್ಟಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ನಲ್ಲಿ ತಮ್ಮ ಪ್ರೇಯಸಿಯೊಂದಿಗಿನ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ‘‘ನನ್ನ ಪಟಾಕಿಯೊಂದಿಗೆ ಹೊಸ ವರ್ಷವನ್ನು ಆರಂಭಿಸುತ್ತಿದ್ದೇನೆ’’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದರೊಂದಿಗೆ ನಟಿ ನತಾಶ ಸ್ಟ್ಯಾನ್ಕೊವಿಚ್ ಅವರೊಂದಿಗಿನ ಸಂಬಂಧವನ್ನು ಭಾರತ ತಂಡದ ಆಟಗಾರ ಸ್ಪಷ್ಟಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಅವರ ನಡುವಿನ ಡೇಟಿಂಗ್ ವಿಚಾರ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

Hardhik

ಇದೀಗ ಹಾರ್ದಿಕ್ ಪಾಂಡ್ಯ ಅವರೇ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ತಮ್ಮ ಪ್ರೇಯಸಿ ಬಗ್ಗೆೆ ಸ್ಪಷ್ಟಪಡಿಸಿದ್ದಾರೆ. ಪೋಸ್ಟ್‌‌ಗೆ ಸಹ ಆಟಗಾರ ಯಜುವೇಂದ್ರ ಚಾಹಲ್ ಹಾಗೂ ಹಾರ್ದಿಕ್ ಸಹೋದರಿ ಪಂಖೂರಿ ಶರ್ಮಾ ಅವರು ಮೊದಲ ಕಾಮೆಂಟ್ ಮಾಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅವರು 2019ರ ಸೆಪ್ಟೆೆಂಬರ್‌ನಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ.

ಕೊನೆಯ ಹಂತದ ಪುನಃಶ್ಚೇತನದಲ್ಲಿರುವ ಅವರು, ಮುಂದಿನ ತಿಂಗಳು ನ್ಯೂಜಿಲೆಂಡ್ ಪ್ರವಾಸದ ಭಾರತ ಎ ತಂಡಕ್ಕೆೆ ಆಯ್ಕೆಯಾಗಿದ್ದಾರೆ. ಆದರೆ, ಶ್ರೀಲಂಕಾ ವಿರುದ್ಧ ಟಿ-20 ಹಾಗೂ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಜನವರಿ 22 ರಿಂದ 26ರ ವರೆಗೆ ನಡೆಯುವ ಮೂರು ಅನಧೀಕೃತ ಏಕದಿನ ಪಂದ್ಯಗಳಿಗೆ ಭಾರತ ಎ ತಂಡದಿಂದ ಅವರು ಕಣಕ್ಕೆೆ ಇಳಿಯಲಿದ್ದಾರೆ. 2018ರ ಏಷ್ಯಾ ಕಪ್ ವೇಳೆ ಹಾರ್ದಿಕ್ ಮೊದಲ ಬಾರಿ ಬೆನ್ನು ನೋವಿಗೆ ಒಳಗಾಗಿದ್ದರು. 2019ರ ಐಸಿಸಿ ಏಕದಿನ ವಿಶ್ವಕಪ್ ಆಡಿದ್ದ ಅವರು ನಂತರ, ಭಾರತ ತಂಡದ ತವರು ಸರಣಿಗಳಿಂದ ಹೊರಗುಳಿದಿದ್ದರು. ತಂಡದ ಮ್ಯಾನೇಜ್‌ಮೆಂಟ್ ಜನವರಿ-ಫೆಬ್ರುವರಿಯ ನ್ಯೂಜಿಲೆಂಡ್ ಪ್ರವಾಸಕ್ಕೆೆ ಆಲ್‌ರೌಂಡರ್ ಹಾರ್ದಿಕ್ ಅವರನ್ನೂ ತಂಡಕ್ಕೆೆ ಕರೆಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.