Skip to main content
ರಾಕ್ ಲೈನ್ ವೆಂಕಟೇಶ್ ಮೊಮ್ಮಗಳ ಮಧುರ ಧ್ವನಿಯಲ್ಲಿ ಕೃಷ್ಣ ಜನಾರ್ದನ

ರಾಕ್ ಲೈನ್ ವೆಂಕಟೇಶ್ ಮೊಮ್ಮಗಳ ಮಧುರ ಧ್ವನಿಯಲ್ಲಿ ಕೃಷ್ಣ ಜನಾರ್ದನ

ರಾಕ್ ಲೈನ್ ವೆಂಕಟೇಶ್ ಮೊಮ್ಮಗಳ ಮಧುರ ಧ್ವನಿಯಲ್ಲಿ ಕೃಷ್ಣ ಜನಾರ್ದನ

ರಾಕ್ ಲೈನ್ ವೆಂಕಟೇಶ್ ಮೊಮ್ಮಗಳ ಮಧುರ ಧ್ವನಿಯಲ್ಲಿ ಕೃಷ್ಣ ಜನಾರ್ದನ

ಧೀರ ರಾಕ್ ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಪಕರಾಗಿ, ನಟನಾಗಿ ಭಾರತದಾದ್ಯಂತ ಹೆಸರು ಮಾಡಿದ್ದಾರೆ. ಅವರ ಪುತ್ರ ಯತೀಶ್ ಕೂಡಾ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಈಗ ಯತೀಶ್ ಅವರ ಪುತ್ರಿ ಶರಯೂ ಗಾಯಕಿಯಾಗಿ ಸಾಂಸ್ಕೃತಿಕ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾಳೆ. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರೂಪಿಸಿರುವ ʻಕೃಷ್ಣ ಜನಾರ್ದನʼ ಹಾಡಿನ ರೀಮಿಕ್ಸ್ ಹಾಡಿಗೆ ಶರಯೂ ದನಿ ನೀಡಿದ್ದಾಳೆ. ಶ್ರೀ ಕೃಷ್ಣನ ಅವತಾರವನ್ನು ಪರಿಚಯುಸುವ ಕೃಷ್ಣ ಜನಾರ್ದನ ಹಾಡು ಸುಶ್ರಾವ್ಯವಾಗಿ ಮೂಡಿಬಂದಿದೆ. ಶರಯೂ ವೈ ಮಲ್ಲೇಶ್ವರಂನ ಬ್ರಿಗೇಡ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಶರಯೂ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಅನುಪಮಾ ರಚಿಸಿ ಸಂಗೀತ ಸಂಯೋಜಿಸಿದ್ದ ಮೂಲ ಹಾಡಿಗೆ ಈಗ ಶರಯೂ ದನಿ ನೀಡಿರುವುದು ಮಾತ್ರವಲ್ಲದೆ ದೃಶ್ಯರೂಪಕದಲ್ಲೂ ಭಾಗಿಯಾಗಿದ್ದಾಳೆ.

ಶ್ರೀ ಕೃಷ್ಣನನ್ನು ಪೂಜಿಸುವ ಹಾಡಿನೊಂದಿಗೆ ಶರಯೂ ಭಾವಾಭಿವ್ಯಕ್ತಿ ಕೂಡಾ ಇಲ್ಲಿ ಅನಾವರಣಗೊಂಡಿದೆ. ಸ್ಯಾಮ್ ಪ್ರೋಗ್ರಾಮಿಂಗ್ನೊಂದಿಗೆ ಸಂಭ್ರಮ್ ಸ್ಟುಡಿಯೋದಲ್ಲಿ ಈ ಹಾಡಿಗೆ ರೀರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ಮಾಡಲಾಗಿದೆ. ಫಣೀಂದ್ರ ರೆಡ್ಡಿ ಛಾಯಾಗ್ರಹಣ, ಸಿಂಧೂರಿ ಯತೀಶ್ ಕ್ರಿಯೇಟೀವ್ ಹೆಡ್ ಹಾಗೂ ಸ್ಟೈಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಶರಯೂ ವೈ ಯೂ ಟ್ಯೂಬ್ ಚಾನೆಲ್ಲಿನಲ್ಲಿ ಈ ಹಾಡು ಬಿಡುಗಡೆಯಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.