Skip to main content
"ಓರಿಯೋ" ಮೂಲಕ ಮತ್ತೆ  ಬರುತ್ತಿದ್ದಾರೆ ಬಿ.ಎಂ.ಟಿ.ಸಿ ಕಂಡಕ್ಟರ್ ನಂದನಪ್ರಭು.

"ಓರಿಯೋ" ಮೂಲಕ ಮತ್ತೆ ಬರುತ್ತಿದ್ದಾರೆ ಬಿ.ಎಂ.ಟಿ.ಸಿ ಕಂಡಕ್ಟರ್ ನಂದನಪ್ರಭು.

"ಓರಿಯೋ" ಮೂಲಕ ಮತ್ತೆ ಬರುತ್ತಿದ್ದಾರೆ ಬಿ.ಎಂ.ಟಿ.ಸಿ ಕಂಡಕ್ಟರ್ ನಂದನಪ್ರಭು.

Kannada new film

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ನವೆಂಬರ್ 29 ರಿಂದ ಆರಂಭ. ಕಳೆದ ಕೆಲವು ವರ್ಷಗಳ ಹಿಂದೆ ಬಿ.ಎಂ.ಟಿ.ಸಿ ಕಂಡಕ್ಟರ್ ನಂದನ್ ಪ್ರಭು "ಪ್ರೀತಿಯ ಲೋಕ" ಹಾಗೂ "ಲವ್ ಇಸ್ ಪಾಯ್ಸನ್" ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ "ಓರಿಯೋ". ಈ ಚಿತ್ರಕ್ಕೆ ದಿ ಬ್ಲ್ಯಾಕ್ ಅಂಡ್ ವೈಟ್ ಎಂಬ ಅಡಿಬರಹವಿದೆ.

ಚಿತ್ರ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಮುಂದೊಂದು ದಿನ ಹೀಗೂ ಆಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡುವ ವಿಭಿನ್ನ ಕಥಾಹಂದರ " ಓರಿಯೋ" ಚಿತ್ರದಲ್ಲಿದೆ ಎನ್ನುತ್ತಾರೆ‌ ನಂದನ್ ಪ್ರಭು. ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಮಾಜಿ ರಾಷ್ಟ್ರಪತಿ "ಡಾ. ಎ.ಪಿ. ಜೆ. ಅಬ್ದುಲ್ ಕಲಾಂ" ರವರ ಕಾರು ಚಾಲಕನಾಗಿ ಅವರ ಸೇವೆ ಮಾಡುತ್ತಿರುವಾಗ ಅವರು ಹೇಳಿದ ಕೆಲವು ಮಾತುಗಳೇ ಈ ಓರಿಯೋ ಚಿತ್ರದ ಕಥೆಗೆ ಸ್ಫೂರ್ತಿಯಾಗಿವೆ.

ನನ್ನ ಮೊದಲ "ಪ್ರೀತಿಯ ಲೋಕ"ಹಾಗೂ "ಲವ್ ಇಸ್ ಪಾಯಿಸನ್" ಚಿತ್ರಗಳಿಗೆ ನೀವೆಲ್ಲಾ ಪ್ರೋತ್ಸಾಹ ಹಾಗೂ ಸಹಕಾರದಿಂದ ಆಶೀರ್ವಾದಿಸಿದ್ಧಿರ. ಈ ಚಿತ್ರಕ್ಕೂ ನಿಮ್ಮ ಅಭಿಮಾನ ಹಾಗೂ ಪ್ರೋತ್ಸಾಹ ಹೀಗೆ ಇರುತ್ತದೆ ಎಂದು ನನ್ನ ನಂಬಿಕೆ.. ಒಂದೊಳ್ಳೆ ಚಿತ್ರವನ್ನು ಕೊಡಬೇಕೆಂದು ನಿಮ್ಮ ಮುಂದೆ ಬರುತ್ತಿದ್ದೇನೆ. ಎನ್ನುತ್ತಾರೆ ನಿರ್ದೇಶಕ ನಂದನ ಪ್ರಭು.

ಶಿವಾಂಜನೇಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯಶ್ರೀ ಆರ್ ಎಂ ಹಾಗೂ ವೈಶಾಲಿ.ವೈ.ಜೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಟಿ.ಕೃಷ್ಣಪ್ಪ ಹಾಗೂ ರೇಣುಕಾ ಪ್ರಭಾಕರ್ ಈ ಚಿತ್ರದ ಸಹ ನಿರ್ಮಾಪಕರು. ಸಂಭಾಷಣೆ ಹಾಗೂ ಸಹ ನಿರ್ದೇಶನ ಬಿ.ರಾಜರತ್ನ ಅವರದು. ಬ್ಯಾಟಪ್ಪ ಗೌಡ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ ನಿರ್ದೇಶನ, ಶ್ರೀನಿವಾಸ್ ಪಿ ಬಾಬು ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಜೈ ಹರಿಕೃಷ್ಣ ಅವರ ನೃತ್ಯ ನಿರ್ದೇಶನ "ಓರಿಯೋ" ಚಿತ್ರಕ್ಕಿದೆ. .ಈ ಚಿತ್ರಕ್ಕೆ "ರಥಾವರ" ಚಿತ್ರದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರ ಮಗ "ಗೋವಿಂದ್"ಹಾಗೂ ನೂತನ ಕಲಾವಿದರ ಅಭಿನಯದಲ್ಲಿ ಮೂಡಿ ಬರಲಿದೆ.. "ಕರ್ನಾಟಕ ರತ್ನ" "ದೊಡ್ಮನೆ ಮಾಣಿಕ್ಯ"ನಮ್ಮೆಲ್ಲರ ಸ್ಫೂರ್ತಿಯಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ ರವರ ಅಗಲಿಕೆ ತುಂಬಾ ನೋವುಂಟು ಮಾಡಿದೆ.

ಅವರ ಹಾದಿಯಲ್ಲಿ ಸ್ವಲ್ಪವಾದರೂ ನಡೆಯಬೇಕು ಎಂಬ ಆಸೆ ಇದೆ ಎಂದ ನಂದನ್ ಪ್ರಭು, ಅಪ್ಪು ಅವರನ್ನು ನೆನೆಯುತ ಭಾವುಕರಾದರು...

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.