ಹೆಬ್ಬುಲಿ ಅಭಿಮಾನಿಗಳ ಕನ್ನಡ ಸಿನಿಮಾ “ಹೆಬ್ಬುಲಿ ಕಟ್”
ಹೆಬ್ಬುಲಿ ಅಭಿಮಾನಿಗಳ ಕನ್ನಡ ಸಿನಿಮಾ “ಹೆಬ್ಬುಲಿ ಕಟ್”
✍️ಸುರೇಶ್ ಬಾಬು ಜಂಬಲದಿನ್ನಿ
ರಾಯಚೂರು : “ಮನುಷ್ಯ ಹುಟ್ಟಿದಾಗ ವಿಶ್ವ ಮಾನವ ಬೆಳೆದಂತೆ ಅಲ್ಪ ಮಾನವ “ ಎಂಬ ವಾಕ್ಯ ಅಕ್ಷರಶಃ ಸತ್ಯ ಕಾರಣವಿಷ್ಟೇ ಮಗು ಬಾಲ್ಯದಲ್ಲಿ ಒಳಿತು ಕೆಡುಕುಗಳ ಅರಿವು ಇರದ ಪ್ರಶಾಂತ ಮೂರ್ತಿ ಆಗಿರುತ್ತದೆ. ದಿನ ಬೆಳೆದಂತೆ, ವರ್ಷಗಳ ಕಳೆದಂತೆ, ಬಾಹ್ಯ ಪರಿಸರದ ಕ್ರಿಯೆಗೆ ಒಳಗಾಗಿ, ಆಸೆ ಆಕಾಂಕ್ಷೆಗಳು ಹೆಚ್ಚಿದಂತೆಲ್ಲಾ ಶ್ರಮವಿರದ ಸುಖಿ ಜೀವನ ಕಾಣಲು ಯತ್ನಿಸುತ್ತಾನೆ.

ಇದರಿಂದ ಅಲ್ಪ ಮಾನವ ಹಣೆಪಟ್ಟಿ ಕಟ್ಟಿಕೊಳ್ಳುತ್ತಾನೆ. ಈ ಸ್ವಾರ್ಥ ಸಂಘರ್ಷದಿಂದ ಹೊರಬರಲು ಮಾನವನಿಗೆ ಕೆಲವೊಂದು ಅಭಿರುಚಿಗಳು ಇವೆ ಸಾಹಿತ್ಯ ಸಂಗೀತ ಹಾಡು ಕಲೆ ಮನರಂಜನೆ ಅಭಿನಯ ಇತ್ಯಾದಿಯಂತೆ ಸಿನಿಮಾ ಕೂಡ ಒಂದಾಗಿದೆ.
ಇಂದಿನ ದಿನಗಳಲ್ಲಿ ಹೆಬ್ಬುಲಿ ಕಟ್ ಎಂಬ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಚಂದನವನದ ಉತ್ತಮ ಚಿತ್ರವಾಗಲಿದೆ ಎಂಬ ನಿರೀಕ್ಷೆ ಹುಟ್ಟುಹಾಕಿದೆ. ಬಾಕ್ಸ್ ಆಫೀಸ್ ಪೆಟ್ಟಿಗೆ ಸೇರುವುದೇ ಎನ್ನುವ ಕುತೂಹಲ ಎಲ್ಲಾರಲ್ಲಿ ಮನೆ ಮಾಡಿರುವುದು ಸತ್ಯ. ಹೆಬ್ಬುಲಿ ಕಟ್ ಸಿನಿಮಾ:- ಹೆಬ್ಬುಲಿ ಕಟ್ ಸಿನಿಮಾ ಮಜವಾಗಿದೆ. ಸುದೀಪ್ ಅಭಿಮಾನಿ ಈ ಚಿತ್ರದಲ್ಲಿದ್ದಾನೆ.
ಈತನಿಗೆ ಹೆಬ್ಬುಲಿ ಚಿತ್ರದ ಕಿಚ್ಚ ಸುದೀಪ್ ಹೇರ್ ಸ್ಟೈಲ್ ಅಂದ್ರೆ ತುಂಬಾನೆ ಇಷ್ಟ. ಉದ್ದನೆಯ ಕೂದಲು ಬಿಟ್ಟು, ಕಿಚ್ಚನ ತರ ಶಾಲೆಯಲ್ಲಿ ಓಡಾಡ್ಬೇಕು. ತನ್ನ ಕ್ರಶ್ ಎದುರು ಸ್ಟೈಲ್ ಹೊಡೀಬೇಕು ಅಂತಲೇ ಆಸೆ ಇರುತ್ತದೆ. ಆದರೆ, ಆ ಕಟಿಂಗ್ ಮಾಡಿಸೋಕೆ 500 ರೂಪಾಯಿ ಅನ್ನೋದೇ ಶಾಕಿಂಗ್ ಮ್ಯಾಟರ್ ನೋಡಿ. ಆದರೆ, ಹಳ್ಳಿ ಹುಡುಗ ವಿನ್ಯಾ ಅದಕ್ಕಾಗಿ ಏನೇನೋ ಮಾಡ್ತಾನೆ. ಹಾಗೆ ದುಡ್ಡು ತಂದರು ಕಳ್ಳ ಅಂತಾರೆ. ಕೊನೆಗೆ ಈ ವಿನ್ಯಾ ಹೆಬ್ಬುಲಿ ಕಟ್ ಮಾಡಿಸ್ತಾನಾ? ಅಥವಾ ಇಲ್ವಾ ಅನ್ನೋದೇ ಒಟ್ಟು ಸಿನಿಮಾ ಆಗಿದೆ. ಎಲ್ಲ ವಿಷಯವೂ ಟ್ರೈಲರ್ ಅಲ್ಲಿ ರಿವೀಲ್ ಆಗಿದೆ. ಅದರೊಟ್ಟಿಗೆ ಈ ಚಿತ್ರದಲ್ಲಿ ಸಮಾಜದಲ್ಲಿರೋ ತಾರತಮ್ಯದ ಚಿತ್ರಣವೂ ಇದೆ. ಈ ಎಲ್ಲ ಮಾಹಿತಿ ಇರೋ ಈ ಚಿತ್ರವನ್ನ ನಾಯಕ ನಟ ಸತೀಶ್ ನೀನಾಸಂ ಪ್ರೆಸೆಂಟ್ ಮಾಡಿದ್ದಾರೆ.

ಈ ಮೂಲಕ ಒಂದು ಒಳ್ಳೆ ಚಿತ್ರಕ್ಕೆ ಸಪೋರ್ಟ್ ಮಾಡಿರೋ ಖುಷಿಯಲ್ಲೂ ಇದ್ದಾರೆ. ಓದಲು ಬರೆಯದ ಮನುಷ್ಯನಿಗೆ ಕಾದಂಬರಿ, ಅತ್ಯುತ್ತಮ ಪುಸ್ತಕಗಳಲ್ಲಿ ಅಡಕವಾಗಿರುವ ಸಂದೇಶ,ವಿಷಯ, ಕಥೆ, ಇತ್ಯಾದಿಯನ್ನು ಎರಡು ಗಂಟೆಯಲ್ಲಿ ಸಿನಿಮಾದ ಮೂಲಕ ಕಟ್ಟಿಕೊಡುವ ಪ್ರಯತ್ನ ಬಹು ದೊಡ್ಡದಾಗಿದೆ. ಈ ಅತ್ಯುತ್ತಮ ಕನ್ನಡ ಸಿನಿಮಾಗಳಲ್ಲಿ ಡಾ ರಾಜಕುಮಾರ್, ಶಂಕರ್ ನಾಗ್, ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್ ಮೂಡಿಬಂದರೆ, ಇನ್ನೂ ಕೆಲವರು ಸಿನಿಮಾ, ಕಥೆ ಬರೆದು ನಿರ್ದೇಶನ ಮಾಡುವ ಶೈಲಿ ಬಹಳ ಅದ್ಬತವಾಗಿದೆ. ಇತ್ತಿಚಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ನಿರ್ದೇಶಿಸಿರುವುದು ಕೂಡ ನಾವು ನೋಡಬಹುದಾಗಿದೆ. ನಿರ್ದೇಶಕರಿಗೆ ರಾಯಚೂರು ನಂಟು:- ಹೆಬ್ಬುಲಿ ಕಟ್ ಸಿನಿಮಾದ ಕಥೆ ನಿರ್ದೇಶಕರಾದ ಪಿ ಭೀಮರಾವ್ ಅವರ ಹುಟ್ಟೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಗಲವಾಡ ಎಂಬ ಗ್ರಾಮದವರಾಗಿದ್ದಾರೆ.
ಇವರು ಮೊದಲು ರಾಯಚೂರು ಸಂಜೆ ಮತ್ತು ಹೈದರಾಬಾದ್ ಕರ್ನಾಟಕ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಇವರು ಮಾನ್ವಿ ಮತ್ತು ರಾಯಚೂರು ನಗರದ ಎಲ್.ವಿ.ಡಿ ಕಾಲೇಜು ಹಾಗೂ ಧಾರವಾಡದಲ್ಲಿ ಸಹ ವಿಧ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಲೇ ಹಲವು ಉತ್ತರ ಕರ್ನಾಟಕದ ತಾರೆಗಳು ಸಿನಿಮಾದ ಅಭಿನಯ ಮತ್ತು ನಿರ್ದೇಶಕರಾಗಿ ಯಶಸ್ಸು ಕಂಡಿರುವುದು ಬಹಳ ವಿರಳವಾಗಿದೆ. ಈಗಾ ಹೆಬ್ಬುಲಿ ಕಟ್ ಸಿನಿಮಾ ಯಶಸ್ಸುಗಾಗಿ ಕರುನಾಡ ಪ್ರಿಯರು ಹಾರೈಸಲಿ. ಸ್ಯಾಂಡಲ್ ವುಡ್ ಚಂದನವನಕ್ಕೆ ಮತ್ತೊಬ್ಬ ಯುವ ನಿರ್ದೇಶಕರಾಗಿ ದಾಪುಗಾಲಿರಿಸಿರುವ ಭೀಮರಾವ್, ಪಿ, ಅವರು ಹೆಬ್ಬುಲಿ ಕಟ್ ಚಿತ್ರ ನಿರ್ದೇಶನ ಮಾಡಿದ್ದಾರೆ. 2017 ರಲ್ಲಿ ಎಸ್ ಕೃಷ್ಣ ಅವರು ಸುದೀಪ್ ಅಭಿನಯದ ಚಿತ್ರವಾದ ಹೆಬ್ಬುಲಿ ಸಿನಿಮಾದ ಕಥೆ ಬರೆದು ನಿರ್ದೇಶಿಸಿದ್ದರು. ಅಂದು ಸಿನಿಮಾ ಪ್ರಿಯರ ಯುವ ಜನತೆಯ ನಿದ್ರೆಗೆಡಿಸಿತ್ತು ಅದರಲ್ಲಿ ಕಿಚ್ಚ ಸುದೀಪ್ ಅವರ ಹೇರ್ ಸ್ಟೈಲ್ ಗೆ ಫಿದಾ ಆಗಿದ್ದರು ಅಭಿಮಾನಿಗಳು.
ಹೆಬ್ಬುಲಿ ಚಿತ್ರ ವೀಕ್ಷಿಸಿದ ಗ್ರಾಮೀಣ ಪ್ರದೇಶದ ಅಪ್ಪಟ ಹಳ್ಳಿ ಹೈದ ಕಿಚ್ಚ ಸುದೀಪ್ ಅವರ ಹೆಬ್ಬುಲಿ ಸಿನಿಮಾ ನೋಡಿದ ನಂತರ ತನ್ನೊಳಗೆ ಕಿಚ್ಚನಂತೆ ಹೇರ್ ಸ್ಟೈಲ್ ಮಾಡಿಸಬೇಕೆಂಬ ಆಲೋಚನೆ ಮೂಡುತ್ತದೆ. ಅದರಂತೆ ಹಳ್ಳಿ ಹುಡುಗ ಕಟಿಂಗ್ ಶಾಪ್ ಗೆ ತೆರಳಿ ಮೊದಲ ಬಾರಿಗೆ ಕಿಚ್ಚನ ಹೇರ್ ಸ್ಟೈಲ್ ಮಾಡಿಸಿ ಖುಷಿ ಪಡುತ್ತಾನೆ. ಆ ಹೇರ್ ಸ್ಟೈಲ್ ನಿಂದ ಶಾಲೆಗೆ ಹೋಗುವಾಗ ಒಂದು ಹುಡುಗಿಯೊಂದಿಗೆ ಸ್ನೇಹ, ಪ್ರೀತಿ, ಬೆಳೆದು ಮನಸ್ಸಿನ ಹೃದಯ ಬಡಿತ ದ್ವಿಗುಣಗೊಳ್ಳುತ್ತದೆ. ಹೆಬ್ಬುಲಿ ಕಟ್ ಚಿತ್ರದ ಟ್ರೈಲರ್ ಭೀಮರಾವ್ ರವರ ನಿರ್ದೇಶನದ ಉತ್ತಮ ಸಂದೇಶವುಳ್ಳ ಸಿನಿಮಾ ಹೆಬ್ಬುಲಿ ಕಟ್ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಯಾಗಿದೆ ಈ ಚಿತ್ರಕ್ಕೆ ನಾಯಕ ಪಾತ್ರದಲ್ಲಿ ಮೌನೇಶ್ ಎಂಬ ಹುಡುಗ ಹಳ್ಳಿ ಪ್ರತಿಭೆ ಅಭಿನಯಿಸಿದ್ದಾನೆ ಹಾಗೂ ನಾಯಕಿಯಾಗಿ ಅನನ್ಯ ನಿಹಾರಿಕ ರವರು ನಟಿಸಿದ್ದಾರೆ. ಈ ಚಿತ್ರವು ಜುಲೈ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಹೀಗಾಗಲೇ ದೊಡ್ಡಮಟ್ಟದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು ಸಿನಿಮಾ ಪ್ರಿಯರ ಕೂತುಹಲ ಕೆರಳಿಸಿದೆ. ಕಿಚ್ಚನ ಹೇರ್ ಸ್ಟೈಲ್ ಗೆ ಮಾರುಹೋದ ಯುವ ಜನತೆ ಹೆಬ್ಬುಲಿ ಕಟ್ ಸಿನಿಮಾ ಕಟ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ನೀನಾಸಂ ಸತೀಶ್ ಅವರ ಬ್ಯಾನರ್: ಸಮಾಜದ ಕೆಲವು ಲೋಪ ದೋಷಗಳನ್ನು ಎತ್ತಿ ಹಿಡಿಯುವ "ಹೆಬ್ಬುಲಿ ಕಟ್" ಸಿನಿಮಾ ನೋಡಿ ಮೆಚ್ಚಿದ ನೀನಾಸಂ ಸತೀಶ್ ಅವರು ಹೆಬ್ಬುಲಿ ಕಟ್ ಸಿನಿಮಾ ತಂಡದಿಂದ ಯಾವುದೇ ಹಣವನ್ನು ಪಡೆಯದೆ ತನ್ನ ಬ್ಯಾನರ್ ನಲ್ಲಿ ಸಿನಿಮಾ ರಿಲೀಸ್ ಗೆ ಸಹಾಯ ಮಾಡುತ್ತಿದ್ದಾರೆ.
ಹೊಸ ಸಿನಿಮಾವೊಂದನ್ನು ಮೊದಲ ಬಾರಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಬಿಡುಗಡೆಗೊಳಿಸುತ್ತಿರುವುದು ಇದೆ ಮೊದಲು ಆಗಿದೆ ಯಾಕೆಂದರೆ ಹೆಬ್ಬುಲಿ ಕಟ್ ಕಥೆ ಅತ್ಯಂತ ರೋಮಾಂಚನ, ಕೂತುಹಲದಿಂದ ಕೂಡಿದೆ. ಕಿಚ್ಚ ಸುದೀಪ್ ಟ್ರೇಲರ್ ವೀಕ್ಷಣೆ: ಅವರು ಚಿತ್ರದ ಟ್ರೇಲರ್ ವೀಕ್ಷಿಸಿ ವ್ಹಾವ್ ಎಂದು ಕನ್ನಡದ ಚಿತ್ರಗಳಲ್ಲಿ ಇದೊಂದು ಉತ್ತಮ ಸಿನಿಮಾವೆಂದು ಸಿನಿಮಾದ ಎಲ್ಲಾರಿಗೂ ಬೆಸ್ಟ್ ಆಫ್ ಲಕ್ ಎಂದು ಶಹಬ್ಬಾಸ್ ಹೇಳಿದ್ದಾರೆ. ಕೊನೆಯದಾಗಿ ಇನ್ನು ಹೆಬ್ಬುಲಿ ಕಟ್ ಸಿನಿಮಾಕ್ಕೆ ದೀಪಕ್ ಯರಗೇರಾ ಅವರು ಕ್ಯಾಮರಾ ಕಣ್ಣಲ್ಲಿ ದೃಶ್ಯಕಾವ್ಯ ಸೆರೆಹಿಡಿದಿದ್ದಾರೆ. ನವನೀತ್ ಶ್ಯಾಮ್ ಸಂಗೀತ, ಅನಂತ್ ಶಾಂದ್ರೇಯ ಚಿತ್ರಕಥೆಯ ಜೊತೆ ಭೀಮರಾವ್, ಎನ್.ಅಭಿ ಸಿಂಧನೂರು ಅವರ ಸಂಭಾಷಣೆಯಲ್ಲಿ ಸಾಥ್ ನೀಡಿದ್ದಾರೆ. ಮೌನೇಶ್ ನಟರಂಗ ನಟನಾಗಿ, ಅನನ್ಯ ನಿಹಾರಿಕಾ ನಟಿಯಾಗಿ, ಸಹನಟರಾದ ಮಹದೇವ ಹಡಪದ, ಉಮಾ ವೈ.ಜಿ., ಡಿಂಗ್ರಿ ನರೇಶ್,ಹಾಸ್ಯ ನಟ ಮಹಾಂತೇಶ್ ಹಿರೇಮಠ, ತೆಲುಗು ನಟ ವಿನಯ್ ಮಹಾದೇವನ್ ಖಳನಟರಾಗಿ ಅಭಿನಯಿಸಿದ್ದಾರೆ. ಹೆಬ್ಬುಲಿ ಕಟ್ ಸಿನಿಮಾ ಸೂಪರ್ ಹಿಟ್ ಆಗಲಿ ಮತ್ತು ಕನ್ನಡ ಪ್ರೇಮಿಗಳು ಯಶಸ್ವಿಗೊಳಿಸಲು ಕೋರಿದೆ.
Recent comments