Skip to main content
ಲಂಕಾ ವಿರುದ್ದ ಸರಣಿ ಗೆದ್ದ ಪಾಕಿಸ್ತಾನ

ಲಂಕಾ ವಿರುದ್ದ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ

ಲಂಕಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ

ಪಾಕಿಸ್ತಾನ ಕ್ರಿಕೆಟ್ ಟೀಮ್

ಕರಾಚಿ,: ಯುವ ವೇಗಿ ನಾಸೀಮ್ ಶಾ (32 ಕ್ಕೆ 5) ಅವರ ಐದು ವಿಕೆಟ್ ಗೊಂಚಲು ನೆರವಿನಿಂದ ಪಾಕಿಸ್ತಾನ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 263 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಎರಡು ಪಂದ್ಯಗಳ ಐತಿಹಾಸಿಕ ಸರಣಿಯನ್ನು 1-0 ಅಂತರದಲ್ಲಿ ಆತಿಥೇಯರು ಮುಡಿಗೇರಿಸಿಕೊಂಡರು. ನ್ಯಾಷನಲ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ನೀಡಿದ್ದ 476 ರನ್‌ ಗಳ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ಐದನೇ ದಿನ ಬೆಳಗ್ಗೆ 7 ವಿಕೆಟ್ ನಷ್ಟಕ್ಕೆ 212 ರನ್‌ಗಳಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿತು. ಆದರೆ, ಪಾಕಿಸ್ತಾನ ಸೋಮವಾರ ಕೇವಲ (15ನಿಮಿಷ) 16 ಎಸೆತಗಳಲ್ಲಿ ಲಂಕಾದ ಇನ್ನುಳಿದ ಮೂರು ವಿಕೆಟ್‌ ಗಳನ್ನು ಕಿತ್ತು ಜಯಬೇರಿ ಬಾರಿಸಿತು.

ಮಂದಗತಿಯ ಬೆಳಕು ಹಾಗೂ ಮಳೆಯಿಂದಾಗಿ ರಾವಲ್ಪಿಂಡಿಯಲ್ಲಿನ ಮೊದಲನೇ ಟೆಸ್ಟ್ ಪಂದ್ಯ ಅಂತಿಮವಾಗಿ ಉಭಯ ತಂಡಗಳು ಡ್ರಾಗೆ ತೃಪ್ತಿಪಟ್ಟಿದ್ದವು. ಅಝರ್‌ ಅಲಿ ಹುಡುಗರು ಅತ್ಯುತ್ತಮ ಪ್ರದರ್ಶನವನ್ನು ಸ್ಥಳೀಯ ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು. ಯುವ ವೇಗಿ ನಾಸೀಮ್ ಶಾ ಐದನೇ ದಿನ ಬೆಳಗ್ಗೆ ಲಸಿತ್ ಎಂಬುಲ್ಡೇನಿಯಾ ಅವರನ್ನು ಮೊದಲನೇ ಎಸೆತದಲ್ಲಿಯೇ ಪೆವಿಲಿಯನ್‌ಗೆ ಕಳುಹಿಸಿದರು. ಲೆಗ್ ಸ್ಪಿನ್ನರ್‌ ಯಾಸೀರ್ ಶಾ ಅವರು ಶತಕ ಸಿಡಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಒಶಾಡ ಫೆರ್ನಾಂಡೊ ಅವರನ್ನು ಔಟ್ ಮಾಡಿದರು. ಮುಂದಿನ ಓವರ್‌ನಲ್ಲಿ ನಾಸೀಮ್ ಶಾ ಅವರು ವಿಶ್ವ ಫೆರ್ನಾಂಡೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

ಫೆರ್ನಾಂಡೊ ಹಾಗೂ ನಿರೋಶನ್ ಡಿಕ್ವೆಲ್‌ (65) ಅವರನ್ನು ಬಿಟ್ಟರೆ ಇನ್ನುಳಿದವರು ಪಾಕ್ ಮಾರಕ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾಗಿದ್ದರು. ಪಾಕಿಸ್ತಾನ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ನಾಸೀಮ್ ಶಾ 32 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು.

ಯಾಸೀಸ್ ಶಾ ಎರಡು ಹಾಗೂ ಶಾಹೀನ್ ಅಫ್ರಿದಿ, ಮೊಹಮ್ಮದ್ ಅಬ್ಬಾಸ್ ಮತ್ತು ಹ್ಯಾರಿಸ್ ಸೊಹೈಲ್ ತಲಾ ಇಂದು ವಿಕೆಟ್ ಪಡೆದರು. ಶಾನ್‌ ಮಸೂದ್‌, ಅಬಿದ್‌ ಅಲಿ, ಬಾಬರ್‌ ಅಜಮ್‌ ಹಾಗೂ ಅಝರ್‌ ಅಲಿ ಅವರನ್ನೊಳಗೊಂಡ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದ್ದರು. ಇವರ ನಾಲ್ಕು ಶತಕಗಳ ನೆರವಿನಿಂದ ಪಾಕಿಸ್ತಾನ ಪ್ರಥಮ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 555 ರನ್‌ ಗಳಿಸಿತ್ತು. ಎರಡನೇ ಪಂದ್ಯದ ಗೆಲುವಿನ ಶ್ರೇಯ ಇವರಿಗೆ ಸಲ್ಲುತ್ತದೆ. ಕಳೆದ 10 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪಾಕ್ ನೆಲದಲ್ಲಿ ನಡೆದ ಮೊದಲ ದ್ವಿಪಕ್ಷೀಯ ಟೆಸ್ಟ್ ಸರಣಿ ಇದಾಯಿತು. 2009ರಲ್ಲಿ ಶ್ರೀಲಂಕಾ ತಂಡ ಇಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವಾಡಿತ್ತು.

ಈ ವೇಳೆ ಭಯೋತ್ಪಾದಕರ ದಾಳಿ ನಡೆದಿತ್ತು. ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಲಂಕಾ ತಂಡ ಪಾರಾಗಿತ್ತು. ಸಂಕ್ಷಿಪ್ತ ಸ್ಕೋರ್ ಶ್ರೀಲಂಕಾ 271 ಮತ್ತು 212/10 (ಒಶಾಡ ಫೆರ್ನಾಂಡಿ 102, ನಿರೋಶನ್‌ ಡಿಕ್ವೆಲ್ 65; ನಾಸೀಮ್ ಶಾ 32/5 ವಿರುದ್ಧ ಪಾಕಿಸ್ತಾನ 191/10 ಹಾಗೂ 555/3(ಡಿ)

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.