Skip to main content
ಹೊಸವರ್ಷಕ್ಕೆ ಒಲವೇ ಆಲ್ಬಂ ಸಾಂಗ್ ರಿಲೀಸ್.

ಹೊಸವರ್ಷಕ್ಕೆ ಒಲವೇ ಆಲ್ಬಂ ಸಾಂಗ್ ರಿಲೀಸ್.

ಹೊಸವರ್ಷಕ್ಕೆ ಒಲವೇ ಆಲ್ಬಂ ಸಾಂಗ್ ರಿಲೀಸ್.

Kannada new film

ವಿನೂತನ ಆಲ್ಬಂ ಸಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿ ಕೃತಿಕಾ ರವೀಂದ್ರ - ವರುಣ್ ಹೆಗಡೆ ಅಭಿನಯ ಸಮಾನ ಮನಸ್ಕರು ಸೇರಿ ನಿರ್ಮಿಸಿರುವ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ವಿನೂತನ ಆಲ್ಬಮ್ ಸಾಂಗ್ ಒಂದನ್ನು ಹೊರತಂದಿದೆ.

Kannada new film

ಒಲವೇ ಎಂದು ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿರುವ ಈ ಹಾಡು ಸಿನಿಮೀಯ ರೂಪುರೇಷೆಗಳನ್ನು ಹೊಂದಿರುವುದು ಒಂದು ಪ್ರಮುಖ ಆಕರ್ಷಣೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ನಟಿ ಕೃತ್ತಿಕಾ ರವೀಂದ್ರ ಅವರು ನಾಯಕಿಯಾಗಿ ಅಭಿನಯಿಸಿರುವ ಈ ಗೀತೆಯಲ್ಲಿ ವರುಣ್ ಹೆಗಡೆ ಅವರು ನಾಯಕನಾಗಿ ನಟಿಸಿದ್ದಾರೆ. ಯುವ ನಿರ್ದೇಶಕಿ ನಟಿ M S ಶಿವಾನಿ ಯವರ ಪರಿಕಲ್ಪನೆಗೆ ಗಾಯನ,ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ॥ಸುಚೇತನ್ ರಂಗಸ್ವಾಮಿಯವರು. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಅದ್ಭುತ ಛಾಯಾಗ್ರಹಣವನ್ನು ಮಾಡಿದ್ದಾರೆ.

Kannada new film

K.G.F ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋವನ್ನು ಎಡಿಟ್ ಮಾಡಿದ್ದಾರೆ. ಸುಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋಸ್ ಈ ಗೀತೆಯನ್ನು ಸಮರ್ಪಿಸುತ್ತಿದ್ದು ಜನವರಿ 3ರಂದು ಆನಂದ್ ಆಡಿಯೋಸ್ ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

Kannada new film

ಹಲವಾರು ಯೋಜನೆಗಳನ್ನು ನಿರ್ಮಿಸಲು ಮುಂದಾಗಿರುವ ಸುಕೃಶಿ ಸಂಸ್ಥೆಯು ಜನರ ಮನ್ನಣೆ ಹಾಗೂ ಪ್ರೋತ್ಸಾಹವನ್ನ ನಿರೀಕ್ಷಿಸುತ್ತಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.