Skip to main content
ಡಿಸೆಂಬರ್ 10ರಂದು ಆರು ಭಾಷೆಗಳಲ್ಲಿ ತೆರೆಗೆ ಬರಲಿದೆ‌ "ಮಡ್ಡಿ" ಚಿತ್ರ.*

ಡಿಸೆಂಬರ್ 10ರಂದು ಆರು ಭಾಷೆಗಳಲ್ಲಿ ತೆರೆಗೆ ಬರಲಿದೆ‌ "ಮಡ್ಡಿ" ಚಿತ್ರ.*

*ಡಿಸೆಂಬರ್ 10ರಂದು ಆರು ಭಾಷೆಗಳಲ್ಲಿ ತೆರೆಗೆ ಬರಲಿದೆ‌ "ಮಡ್ಡಿ" ಚಿತ್ರ.

Kannada new film

*ಡಾ||ಪ್ರಗ್ಬಲ್ ನಿರ್ದೇಶನದ ಈ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ.* ಭಾರತದಲ್ಲಿ ಇದೇ ಮೊದಲ ಬಾರಿಗೆ ಮಡ್ ರೇಸ್ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಡಿಸೆಂಬರ್ 10ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ಮ್ಯಾನೇಜ್ಮೆಂಟ್ ನಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಡಾ||ಪ್ರಗ್ಬಲ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನನ್ನದು ಇದು ಮೊದಲ ನಿರ್ದೇಶನದ ಚಿತ್ರ. ಮಡ್ ರೇಸ್ ಕಥೆಯಿಟ್ಟುಕೊಂಡು ಭಾರತದಲ್ಲಿ ತಯಾರಾಗಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ‌ ನಿರ್ಮಾಣಕ್ಕೆ ಐದು ವರ್ಷಗಳ ಸಮಯ ಹಿಡಿದಿದೆ. ಒಂದು ವರ್ಷ ಲೊಕೇಶನ್ ಹುಡುಕಾಟ ಮಾಡಿ, ಕೊನೆಗೆ ತಮಿಳುನಾಡು ಹಾಗೂ ‌ಕೇರಳ ಗಡಿ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸಿನಿಮಾ ಇದು. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.

ರವಿ ಅವರು ಬರೀ ಸಂಗೀತಕಷ್ಚೇ ಸೀಮಿತವಾಗದೆ, ನನ್ನ ಬೆನ್ನ ಹಿಂದೆ ನಿಂತು, ನನಗೆ ಮಾರ್ಗದರ್ಶನ ಮಾಡಿದ್ದಾರೆ. ನೂತನ ಕಲಾವಿದರ ಹಾಗೂ ನುರಿತ ತಂತ್ರಜ್ಞರ ಸಮಾಗಮದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಚಿತ್ರ ನಿರ್ದೇಶಕ ಡಾ||ಪ್ರಗ್ಬಲ್. ನನಗೆ ಛಾಯಾಗ್ರಹಕ ರತೀಶ್ ಅವರು ಫೋನ್ ಮಾಡಿ ಈ‌ ರೀತಿಯ ಚಿತ್ರವೊಂದು ತಯಾರಾಗುತ್ತಿದೆ. ನೀವೇ ಸಂಗೀತ ಮಾಡಬೇಕೆಂದು ಕೇಳಿದರು. ಸ್ವಲ್ಪ ಬ್ಯುಸಿ ಇದ್ದುದರಿಂದ ನಾನು ಏನು ಹೇಳಿರಲಿಲ್ಲ.

ಕೆಲವು ದಿನಗಳ ನಂತರ ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ತೆರಳಿದೆ. ಅಲ್ಲಿ ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದ ಶೈಲಿ ನೋಡಿ ಬೆರಗಾದೆ. ಅಬ್ಬಾ ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತಿತ್ತು. ಚಿಕ್ಕ ಬಜೆಟ್ ನ ಸಿನಿಮಾ ಎಂದು ಆರಂಭವಾಗಿ, ಚಿತ್ರೀಕರಣ ಸಾಗುತಾ ಅಪಾರವೆಚ್ಚದ ಅದ್ದೂರಿ ಸಿನಿಮಾವಾಗಿ "ಮಡ್ಡಿ" ನಿರ್ಮಾಣವಾಗಿದೆ. ನಾನು ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಎರಡುವರ್ಷಗಳ ಅವಧಿ ಹಿಡಿಸಿದೆ. ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರ ಗಂಡ - ಹೆಂಡತಿ ಇದ್ದ ಹಾಗೆ. ಅವರಿಬ್ಬರ ನಡುವಿನ ಹೊಂದಾಣಿಕೆ ಮುಖ್ಯ. ಇದು ಮೂರು ರಾಜ್ಯಗಳ ಸಿನಿಮಾ ಎನ್ನಬಹುದು ಏಕೆಂದರೆ ನಾನು ಕರ್ನಾಟಕದವನು, ನಿರ್ದೇಶಕರು ಕೇರಳದವರು ಹಾಗೂ ಸಂಕಲನಕಾರರು ತಮಿಳುನಾಡಿನವರು. ಒಟ್ಟಿನಲ್ಲಿ "ಮಡ್ಡಿ" ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಟ್ರೇಲರ್ ಇರುವ ಹಾಗೆ ಇಡೀ ಚಿತ್ರ ಕೂಡ ಹಾಗೆ ಇರುತ್ತದೆ.

ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ‌ಎಂದರು ಸಂಗೀತ ನಿರ್ದೇಶಕ ರವಿ ಬಸ್ರೂರ್. ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ. ಸುಮಾರು 400 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ನಿರ್ದೇಶಕರು ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾರೆ ಒಳ್ಳೆಯದಾಗಲಿ ಎಂದರು ವಿತರಕ ಭಾಷಾ. ಪ್ರೇಮಕೃಷ್ಣ ದಾಸ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರಗ್ಬಲ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಹಾಗೂ ರನ್ ರವಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಯವನ್ ಕೃಷ್ಣ, ರಿಧಾನ್ ಕೃಷ್ಣ, ಅಮಿತ್ ಶಿವದಾಸ್, ಅನುಶಾ ಸುರೇಶ್, ರೆಂಜಿ ಪಣಿಕರ್, ಹರೀಶ್ ಪೆರಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.