Skip to main content
ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇನಕ್ಕೆ ಚಾಲನೆ

ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇನಕ್ಕೆ ಚಾಲನೆ

ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇನಕ್ಕೆ ಚಾಲನೆ

ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇನಕ್ಕೆ

ರೋಗಿಗೆ ಚಿಕಿತ್ಸೆ ಸಮಯದಲ್ಲಿ ಅಪಾಯವಾದರೆ ವಿಮಾ ವ್ಯವಸ್ಥೆ.

ಬೆಂಗಳೂರು : ಭಾರತೀಯ ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇಳನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಿನ್ನೆಯಿಂದಆರಂಭಗೊಂಡಿದೆ .ನಾಲ್ಕು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಮಾಜಿ ಆರೋಗ್ಯ ಸಚಿವರಾದ ಡಾ.ಎ.ಬಿ.ಮಾಲಿಕಾ ರೆಡ್ಡಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಇದೂಂದು ಅಪರೂಪದ ಸಮ್ಮೇಳನವಾಗಿದ್ದು, ದೇಶದ ಎಲ್ಲಾ ಅರವಳಿಕೆ ವೈದ್ಯರು ಒಂದೆಡೆ ಸೇರಿ ತಮ್ಮ ವಿಚಾರವನ್ನು ಹಂಚಿಕೊಳ್ಳುತ್ತಿರುವುದು ಅತ್ಯಂತ ಸಂತಸಕರವಾಗಿದೆ. ತಮ್ಮಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿತರಲಾಗಿತ್ತು.ಅರವಳಿಕೆ ವಿಧಾನಅತ್ಯಂತ ಸೂಕ್ಷ್ಮವಾಗಿದ್ದು, ಈ ಬಗ್ಗೆ ಇನ್ನೂ ಹೆಚ್ಚು ಸಂಶೋಧನೆ ಹಾಗೂ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಇಂಡಿಯನ್ ಸೊಸೈಟಿ ಆಫ್ ಅರಿವಳಿಕೆ ತಜ್ಞರುಗಳಾದ ಡಾ.ಎಸ್.ಬಾಲಾ ಭಾಸ್ಕರ್ ಮಾತನಾಡಿ, ಅರವಳಿಕೆ ವೈದ್ಯ ಪದ್ದತಿ ಸಂದರ್ಭದಲ್ಲಿ ಕೆಲ ಕಾರಣಗಳಿಂದ ಚಿಕಿತ್ಸೆಗೆ ಒಳಗಾಗುವ ರೋಗಿಗೆ ಅಪಾಯ ಉಂಟಾದರೆ ಸೂಕ್ತ ವಿಮಾ ವ್ಯವಸ್ಥೆಯನ್ನು ಒದಗಿಸುವ ಬಗ್ಗೆ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

ತಮ್ಮ ಸಂಘ ಇಡೀ ದೇಶದಲ್ಲಿ ಪ್ರಭಲವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಪ್ರದದೇಶಕ್ಕೂ ಅರವಳಿಕೆ ವ್ಯೆದ್ಯ ಪದ್ದತಿಯನ್ನು ವಿಸ್ತರಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಎಸ್,ಸಚ್ಚಿದಾನಂದ್ ಮಾತನಾಡಿ ಅರವಳಿಕೆ ವ್ಯೆದ್ಯ ಪದ್ದತಿಯಲ್ಲಿ ದಿನೆ ದಿನೆ ಹೊಸ ಹೊಸ ಅವಿಷ್ಕಾರ ಹಾಗೂ ಪದ್ದತಿಗಳು ನಡೆಯುತ್ತಿದ್ದು.ಈ ವ್ಯೆದ್ಯ ಪದ್ದತಿ ಹೆಚ್ಚು ಪ್ರಚಲಿತವಾಗಿದೆ.ಈ ಮೂರು ದಿನಗಳ ಸಮ್ಮೇಳನದಲ್ಲಿ ಉತ್ತಮ ಸಂಶೋಧನೆಗಳು ನಡೆಯುವತ್ತ ಚರ್ಚೆಯಾಗಲಿ ಎಂದು ಹೇಲಿದರು. ಐಸಾಕಾನ್ ಸಮ್ಮೇಳನ ಸಂಘಟನಾ ಅಧ್ಯಕ್ಷರಾದ ಡಾ.ಎಸ್.ಬಿ.ಗಂಗಾಧರ್ ಮಾತನಾಡಿ ಕಳೆದ 25 ವರ್ಷ್ಗಗಳ ನಂತರ ಬೆಂಗಳೂರಿನಲ್ಲಿ ನಡೆಯುತ್ತಿದೆ.ಈ ಸಮ್ಮೇಳನದಲ್ಲಿ 3800 ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇನಕ್ಕೆ

ನಾಲ್ಕು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಹಲವು ವೈಜ್ಞಾನಿಕ ವಿಚಾರ ಧಾರೆಗಳು, ಪ್ರಖ್ಯಾತ ತಜ್ಞರೊಂದಿಗೆ ಸಮಾಲೋಚನೆಗಳು, ವಾಕಥಾನ್, ವ್ಯಕ್ತಿ ವಿಕಸನ ಹಾಗೂ ಮಾನಸಿಕ ಆರೋಗ್ಯದ ವಿಚಾರ , ವಿಮರ್ಶೆಗಳನ್ನೂ ಸಹ ನಡೆಯುತ್ತಿವೆ ಎಂದು ತಿಳಿಸಿದರು. ದೂರದೃಷ್ಟಿಯುಳ್ಳ ಕೆಲವು ಪ್ರಖ್ಯಾತ ಅರವಳಿಕೆ ತಜ್ಞರ ಸತತ ಪರಿಶ್ರಮದೊಂದಿಗೆ ಕೇವಲ 6ಜನ ಸದಸ್ಸರೊಂದಿಗೆ ಸಂಘ ಸ್ಥಾಪನೆಯಾಗಿ ಇಂದು 28 ಸದಸ್ಯತ್ವದೊಂದಿಗೆ ಸಂಘ ಅಭಿವೃದ್ದಿಯಾಗಿರುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.ಈ ಸಮ್ಮೇಳನದ ಮೂಲಕ ರಾಜ್ಯದ ವೈವಿಧ್ಯತೆ ಹಂಚಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸಲಾಗಿತ್ತು. ರತದ ತಜ್ಞ ವೈದ್ಯರು ಸೇರಿದಂತೆ , ವಿಶ್ವದ ಹಲವು ಭಾಗಗಳಿಂದ ತಜ್ಞ ವೈದ್ಯರು ತಮ್ಮ ಅನುಭವ ಹಾಗೂ ಜ್ಞಾನವನ್ನು ಹಂಚಿಕೊಂಡರು. ವೈಜ್ಞಾನಿಕ ವಿಚಾರ ಧಾರೆಯೊಂದಿಗೆ ಕಲೆ, ಸಂಸ್ಕೃತಿ ಬಿಂಬಿಸುವ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷರಾದ ವೀರಭದ್ರಯ್ಯ,ಇಂಡಿಯನ್ ಸೊಸೈಟಿ ಆಫ್ ಅರಿವಳಿಕೆ ತಜ್ಞರುಗಳಾದ ಡಾ.ಸುನಿಲ್ ಕಟ್ಯಾಲ್ ,ಡಾ.ನವೀನ್ ಮಲೋತ್ರಾ. ಡಾ.ವೀರೇಂದ್ರ ಶರ್ಮಾ ,ಭಾರತೀಯ ಅರಿವಳಿಕೆ ತಜ್ಞರ ಸೊಸೈಟಿ ಅಧ್ಯಕ್ಷರಾದ ಡಾ.ಮುರಳೀಧರ್ ಜೋಶಿ, ಎಡಿಟರ್ ಇನ್ ಚೀಫ್ (ಐಜೆಎ) ಡಾ.ಜಿಗೀಶು ವಸಿಷ್ಠ ದಿವಾಟಿಯಾ ರಾಜ್ಯ ಅಧ್ಯಕ್ಷ ಇಂಡಿಯನ್ ಸೊಸೈಟಿ ಆಫ್ ಅರಿವಳಿಕೆ ತಜ್ಞರುಗಳಾದ ಡಾ.ರವಿ ಆರ್. ಡಾ. ಶ್ರೀಗಾನೇಶ್ ಕೆ.ಐಸಾಕಾನ್ 2019 ಸಂಘಟನಾ ಅಧ್ಯಕ್ಷರಾದ ಡಾ.ಎಸ್.ಬಿ.ಗಂಗಾಧರ್,ಐಸಕಾನ್ 2019 ಕಾರ್ಯದರ್ಶಿ ಡಾ.ವಿಜಯಾನಂದ, ಡಾ.ವಿ.ಬಿ.ಗೌಡ ಎಸ್.ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.