2019 ನನ್ನ ಪಾಲಿಗೆ ಕಲಿಕೆ ವರ್ಷವಾಗಿತ್ತು, 2020 ಎದುರು ನೋಡುತ್ತಿದ್ದೇನೆ:
2019 ನನ್ನ ಪಾಲಿಗೆ ಕಲಿಕೆ ವರ್ಷವಾಗಿತ್ತು, 2020 ಎದುರು ನೋಡುತ್ತಿದ್ದೇನೆ:

ಬುಮ್ರಾ ನವದೆಹಲಿ: ಸಾಧನೆ, ಕಲಿಕೆ, ಕಠಿಣ ಪರಿಶ್ರಮ ಸೇರಿದಂತೆ ಹಲವು ನೆನಪುಗಳನ್ನು 2019 ವರ್ಷ ನೀಡಿದೆ ಹಾಗೂ 2020ರಲ್ಲಿ ಬರುವ ಎಲ್ಲ ಸವಾಲುಗಳು ಮತ್ತು ಇನ್ನಿತರ ಸಂಗತಿಗಳ ಬಗ್ಗೆ ಗಮನಹರಿಸಲಿದ್ದೇನೆ ಎಂದು ಭಾರತ ತಂಡದ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಮಂಗಳವಾರ ತಿಳಿಸಿದ್ದಾರೆ. "2019ನೇ ವರ್ಷ ಮೈದಾನದಲ್ಲಿ ಹಾಗೂ ಹೊರಗೆ ಸಾಧನೆ, ಕಲಿಕೆ, ಕಠಿಣ ಪರಿಶ್ರಮ ಹಾಗೂ ಹಲವು ಮರೆಯಲಾಗದ ನೆನಪುಗಳನ್ನು ನೀಡಿದೆ. ಇಂದು ವರ್ಷದ ಕೊನೆಯ ದಿನವಾಗಿದ್ದು, ಮುಂದಿನ ವರ್ಷದ ಆಗಮನಕ್ಕಾಗಿ ಕಾಯುತ್ತಿದ್ದೇನೆ," ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ. 2019 ರಲ್ಲಿ ಕ್ರಿಕೆಟ್ ಮೂರು ಸ್ವರೂಪಗಳಲ್ಲಿ ಬುಮ್ರಾ ಭಾರತದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದರು. ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಟೆಸ್ಟ್ ಸರಣಿಯ ಗೆಲುವಿನಲ್ಲಿ ಬುಮ್ರಾ ಮಹತ್ತರ ಪಾತ್ರ ವಹಿಸಿದ್ದರು.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಆ ಮೂಲಕ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಅವರ ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದ ಭಾರತದ ಮೂರನೇ ಬೌಲರ್ ಎಂಬ ಹಿರಿಮೆಗೆ ಬಲಗೈ ವೇಗಿ ಜಸ್ಪ್ರಿತ್ ಬುಮ್ರಾ ಭಾಜನರಾಗಿದ್ದಾರೆ. 26ರ ಪ್ರಾಯದ ಬುಮ್ರಾ ಏಕದಿನ ಕ್ರಿಕೆಟ್ ನಲ್ಲಿ ಅಗ್ರ ಸ್ಥಾನ ಹಾಗೂ ಟೆಸ್ಟ್ ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ ಆರನೇ ಸ್ಥಾನದೊಂದಿಗೆ 2019ನೇ ವರ್ಷವನ್ನು ಮುಗಿಸಿದ್ದಾರೆ. ಬಲಗೈ ವೇಗಿ 12 ಟೆಸ್ಟ್, 58 ಏಕದಿನ ಹಾಗೂ 42 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಇವರು ಕ್ರಮವಾಗಿ 62, 103 ಮತ್ತು 51 ವಿಕೆಟ್ ಕಬಳಿಸಿದ್ದಾರೆ. ಬೆನ್ನು ಸ್ಟ್ರೆಸ್ ಫ್ರಾಕ್ಚರ್ ಗಾಯಕ್ಕೆ ತುತ್ತಾಗಿದ್ದ ಬುಮ್ರಾ ಕಳೆದ ಆಗಸ್ಟ್ ಕೆರಿಬಿಯನ್ ಪ್ರವಾಸದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಜನವರಿ 5 ರಂದು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲು ತಂಡಕ್ಕೆ ಮರಳುತ್ತಿದ್ದಾರೆ. ಜತೆಗೆ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ.
Recent comments