Skip to main content
ದಶಕದ ಕ್ರಿಕೆಟಿಗರ ಸಾಲಿಗೆ ವಿರಾಟ್ ಕೊಹ್ಲಿ .

ವಿಸ್ಡ್ ನ್ ದಶಕದ ಕ್ರಿಕೆಟಿಗರ ಸಾಲಿಗೆ ವಿರಾಟ್ ಕೊಹ್ಲಿ .

ವಿಸ್ಡನ್ ದಶಕದ ಕ್ರಿಕೆಟಿಗರ ಸಾಲಿಗೆ ವಿರಾಟ್ ಕೊಹ್ಲಿ!

Virhat

ಲಂಡನ್: ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಟೆಸ್ಟ್ ತಂಡದ ನಾಯಕ ಗೌರವಕ್ಕೆ ಒಳಗಾಗಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ದಶಕದ ವಿಸ್ಡನ್ ಐದು ಕ್ರಿಕೆಟಿಗರಲ್ಲಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಜತೆ, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಮತ್ತು ಎ.ಬಿ ಡಿವಿಲಿಯರ್ಸ್ ಹಾಗೂ ಎಲಿಸ್ ಪೆರ್ರಿ ಅವರೂ ಈ ಗೌರವಕ್ಕೆ ಪಾತ್ರರಾಗಿದ್ದಾರೆ. " 2014 ರಲ್ಲಿ ಇಂಗ್ಲೆಂಡ್ ಪ್ರವಾಸದ ಅಂತ್ಯ ಮತ್ತು ನವೆಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ನಡುವೆ, ಕೊಹ್ಲಿ 63 ಸರಾಸರಿಯಲ್ಲಿ 21 ಶತಕ ಮತ್ತು 13 ಅರ್ಧಶತಕಗಳನ್ನು ಸಿಡಿಸಿದ್ದಾರೆ," ಎಂದು ವಿಸ್ಡನ್ ತಿಳಿಸಿದೆ. "ಕೊಹ್ಲಿ ಮೂರು ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ಕನಿಷ್ಠ 50 ರ ಸರಾಸರಿಯನ್ನು ಹೊಂದಿರುವ ಏಕೈಕ ಬ್ಯಾಟ್ಸ್‌ಮನ್.

ಇದು ಅವರಿಗೆ ಒಂದು ವಿಶಿಷ್ಟವಾದ ಅಂಕಿಅಂಶಗಳನ್ನು ನೀಡಿದೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕೂಡ ಇತ್ತೀಚೆಗೆ ಅವರಂತೆ ಯಾರೂ ಇಲ್ಲ ಎಂದು ಸಾಬೀತುಪಡಿಸಿದ್ದರು," ಎಂದು ಉಲ್ಲೇಖಿಸಿದೆ. ಮಂಗಳವಾರ, ಐಸಿಸಿ ಕೊಹ್ಲಿ ಬಗ್ಗೆ ಕೆಲವು ಆಶ್ಚರ್ಯಕರ ಅಂಕಿಅಂಶಗಳನ್ನು ಪೋಸ್ಟ್ ಮಾಡಿತ್ತು. ಇದು ಈ ದಶಕದಲ್ಲಿ ವಿಶ್ವ ಕ್ರಿಕೆಟ್ ನಲ್ಲಿ ಅವರ ಪ್ರಾಬಲ್ಯವನ್ನು ತೋರಿಸಿದೆ. " ಈ ದಶಕದಲ್ಲಿ ವಿರಾಟ್ ಕೊಹ್ಲಿ: ಎಲ್ಲರಿಗಿಂತ 5,775 ಹೆಚ್ಚು ಅಂತರರಾಷ್ಟ್ರೀಯ ರನ್ ಗಳಳು, ಎಲ್ಲರಿಗಿಂತ 22 ಹೆಚ್ಚು ಅಂತಾರಾಷ್ಟ್ರೀಯ ಶತಕಗಳು ಸಿಡಿಸಿದ್ದಾರೆ" ಎಂದು ಐಸಿಸಿ ತನ್ನ ಅಧಿಕೃತ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.

2019ರ ಆವೃತ್ತಿಯಲ್ಲಿ ಕೊಹ್ಲಿ ಎಲ್ಲ ಮಾದರಿಯಿಂದ 64.05 ಸರಾಸರಿಯಲ್ಲಿ 2,370ರನ್‌ ಗಳಿಸಿದ್ದಾರೆ. 31ರ ಪ್ರಾಯದ ಬಲಗೈ ಬ್ಯಾಟ್ಸ್‌ಮನ್‌ ಸತತ ನಾಲ್ಕನೇ ಬಾರಿ ವರ್ಷದಲ್ಲಿ 2,000 ರನ್‌ ಗೂ ಅಧಿಕ ರನ್ ಕಲೆಹಾಕಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.