Skip to main content
NRBC5A ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ SFI - DYFI ಬೆಂಬಲ.

NRBC5A ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ SFI - DYFI ಬೆಂಬಲ.

NRBC5A ನಾಲಾ ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ SFI - DYFI ಬೆಂಬಲ.

Raichur

ಕವಿತಾಳ : ಪಾಮನಕಲ್ಲೂರಿನ ಬಸವೇಶ್ವರ ದೇವಸ್ಥಾನದ 5Aನಾಲಾ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಇಂದಿನ 24 ನೆ ದಿನದ ಹೋರಾಟಕ್ಕೆ ‌DYFI, SFI ಸಂಘಟನೆಯ ಕಾರ್ಯಕರ್ತರು ಕವಿತಾಳ ಪಟ್ಟಣದ ನಾಗರೀಕರ ವತಿಯಿಂದ ಬೆಂಬಲಿಸಿ ಭಾಗವಹಿಸಿದರು. ಪಾಮನಕಲ್ಲೂರಿನ ರೈತ ಸಂಪರ್ಕ ಕೇಂದ್ರದ ಮುಂಭಾಗದಿಂದ ಧರಣಿಯ ಸ್ಥಳದ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಈ ಭಾಗದ ರೈತರ ಜೀವನಾಡಿ 5A ನಾಲಾ ಯೋಜನಾ ಜಾರಿಗಾಗಿ ಒತ್ತಾಯಿಸಲಾಯಿತು. ಹೋರಾಟವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ರೈತರು ಮಾಡುತ್ತಿರುವ ಈ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ನೆಪ ಮಾತ್ರಕ್ಕೆ ಉಸ್ತುವಾರಿ ಮಂತ್ರಿ ಭೇಟಿ ಮಾಡಿ ಹುಸಿ ಭರವಸೆ ನೀಡಿ ನಂತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡಿದ್ದರು. ಈಗ ಧರಣಿ 24 ದಿನಗಕ್ಕೆ ಕಾಲಿಡುತ್ತಿದೆ ಆದರೆ ಹೋರಾಟದ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಸೇರಿ ಅಧಿಕಾರಿಗಳು, ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಮುತುವರ್ಜಿ ವಹಿಸುತ್ತಿಲ್ಲ.

Raichur

ಶಾಸಕರ ಖರೀದಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ ಈ ಭಾಜಪದ ರಾಜ್ಯ ಸರ್ಕಾರಕ್ಕೆ ಈ ಯೋಜನೆಗೆ 500 ರಿಂದ ಸಾವಿರ ಕೋಟಿ ಕೊಡಲು ಕಷ್ಟವಾಗಿದೆ ಅಂದರೆ ಇವರಿಗೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದನ್ನು ಈ ಭಾಗದ ರೈತರು ಸೇರಿ ಪ್ರಜ್ಞಾವಂತ ಜನತೆಯ ಅರ್ಥ ಮಾಡೊಕೊಂಡು ಹತ್ತಿರ ದಲ್ಲೆ ಘೋಷಣೆಯಾಗುವ ಮಸ್ಕಿ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ರೈತರ ಜೊತೆಗೆ ಈ ಭಾಗದ ವಿದ್ಯಾರ್ಥಿ - ಯುವಜನರಿದ್ದೇವೆ. ಕೂಡಲೇ ಎಚ್ಚೆತ್ತುಕೊಂಡು ಯೋಜನೆ ಜಾರಿಗೆ ಮುಂದಾಗಬೇಕು ಇಲ್ಲವಾದರೆ ಈ ಹೋರಾಟವನ್ನು ಜನ ಚಳುವಳಿಯನ್ನಾಗಿ ಮಾರ್ಪಾಡಿಸಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆಂದು ಎಚ್ಚರಿಸಿದರು. ನಂತರ ಹೋರಾಟ ಸಮಿತಿಯ ಮುಖ್ಯಸ್ಥರಾದ ನಾಗರೆಡ್ಡಪ್ಪ ದೇವರಮನಿ, ರೈತ ಮುಖಂಡರಾದ ಮಲ್ಲನಗೌಡ, SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಮಂಜುನಾಥ ಸ್ವಾಮಿ ತೋರಣದಿನ್ನಿ, ಎಂ, ಡಿ ಮೈಬೂಬ್ ಸಾಬ್ ಸೇರಿ ಇತರರು ಮಾತನಾಡಿದರು. ಈ ಸಂಧರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸವರಾಜಪ್ಪಗೌಡ ಹರ್ವಾಪುರ, ತಿಮ್ಮನಗೌಡ ಚೀಲಕರಾಗಿ, ಎನ್, ಶಿವನ ಗೌಡ ವಟಗಲ್, ಅಮರೇಗೌಡ ವಟಗಲ್, SFI ಕವಿತಾಳ ಘಟಕದ ಅಧ್ಯಕ್ಷಾರ ಮೌನೇಶ ಬುಳ್ಳಾಪುರ, DYFI ಅಧ್ಯಕ್ಷರಾದ ಮಹಮ್ಮದ್ ರಫೀ, SFI ಕಾರ್ಯದರ್ಶಿ ವೆಂಕಟೇಶ ಕವಿತಾಳ, ಸಂಘಟನೆಗಳ ಮುಖಂಡರಾದ ಮಹಾದೇವ, ಬಿ. ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ, ಬಸವರಾಜ ಅಮೀಗಡ, ದುರುಗೇಶ, ಹುಚ್ಚರೆಡ್ಡಿ, ಬಸವ ಬಳಗದ ಜಿಲ್ಲಾಧ್ಯಕ್ಷರಾದ ವೀರಭದ್ರಪ್ಪ ಕುರುಕುಂದಾ, ದೇವದುರ್ಗದ ಬಸವದೇವರು ಸೇರಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು, ಮಹಿಳೆಯರು ಭಾಗವಹಿಸಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.