Skip to main content
ಸರ್ಫ್ರಾ ರಾಜ್ ಚೊಚ್ಚಲ ತ್ರಿಶತಕ

ಸರ್ಫ್ರಾ ರಾಜ್ ಚೊಚ್ಚಲ ತ್ರಿಶತಕ

ಸರ್ಫರಾಜ್ ಚೊಚ್ಚಲ ತ್ರಿಶತಕ

Sarf raj

ಮುಂಬೈ: ಸರ್ಫರಾಜ್ ಖಾನ್ (ಅಜೇಯ 301) ವೃತ್ತಿಜೀವನದ ಚೊಚ್ಚಲ ತ್ರಿಶತಕ ಸಿಡಿಸಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದ ನಾಲ್ಕನೇ ದಿನ ಉತ್ತರ ಪ್ರದೇಶ ವಿರುದ್ಧ ಈ ಸಾಧನೆ ಮಾಡಿದರು. ಇವರ ತ್ರಿಶತಕ ಬಲದಿಂದ ಮುಂಬೈ ಮೊದಲ ಇನಿಂಗ್ಸ್‌ ನಲ್ಲಿ 63 ರನ್ ಮುನ್ನಡೆ ಪಡೆದು ಮೂರು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯಿತು. ಸರ್ಫರಾಜ್ ಖಾನ್ ತ್ರಿಶತಕದ ನೆರವಿನಿಂದ ಮುಂಬೈ ತಂಡ ಪ್ರಥಮ ಇನಿಂಗ್ಸ್‌ ನಲ್ಲಿ 166.3 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆೆ 688 ರನ್ ಗಳಿಸಿತು.

22 ಪ್ರಾಯದ ಸರ್ಫರಾಜ್ ಖಾನ್ 91 ಎಸೆತಗಳಲ್ಲಿ 30 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳೊಂದಿಗೆ ಅಜೇಯ 301 ರನ್ ಗಳಿಸಿದರು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ ನಲ್ಲಿ ಉತ್ತರ ಪ್ರದೇಶ ತಂಡ, ಉಪೇಂದ್ರ ಯಾದವ್ (203) ಅವರ ದ್ವಿಶತಕ ಹಾಗೂ ಆಕಾಶ್ ದೀಪ್ (115) ಅವರ ಶತಕದ ಬಲದಿಂದ 159.3 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆೆ 625 ರನ್ ಗಳಿಸಿತ್ತು. ಉಭಯ ತಂಡಗಳು ದ್ವಿತೀಯ ಇನಿಂಗ್ಸ್‌ ಆಡಲೇ ಇಲ್ಲ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.