ರಾಯಲ್ಸ್ ಚಾಲೆಂಜ್ ರ್ಸ್ ಬೌಲರ್ ಗಳನ್ನ ಬೆಂಡೆತ್ತಿದ ನರೇನ್: ಆರ್ ಸಿ ಬಿ ವಿರುದ್ಧ ಕೋಲ್ಕತ್ತಗೆ 4 ವಿಕೆಟ್ ಜಯ.
ರಾಯಲ್ಸ್ ಚಾಲೆಂಜ್ ರ್ಸ್ ಬೌಲರ್ ಗಳನ್ನ ಬೆಂಡೆತ್ತಿದ ನರೇನ್: ಆರ್ ಸಿ ಬಿ ವಿರುದ್ಧ ಕೋಲ್ಕತ್ತಗೆ 4 ವಿಕೆಟ್ ಜಯ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ರಾಯಲ್ ಚಾಲೆಂಜ್ ರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ 4 ವಿಕೆಟ್ ಗಳಿಂದ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತ್ತು. ಬೆಂಗಳೂರಿನ ಪರವಾಗಿ ಬ್ರೆಂಡನ್ ಮೆಕಲಮ್(43), ವಿರಾಟ್ ಕೊಹ್ಲಿ(31), ಎಬಿ ಡಿವಿಲಿಯರ್ಸ್(44) ಹಾಗೂ ಮಂದೀಪ್ ಸಿಂಗ್ (37) ಉತ್ತಮ ರನ್ ತಂದುಕೊಟ್ಟರು.
ಕೋಲ್ಕತ್ತಾದ ಬೌಲರ್ ಗಳಾದ ವಿನಯ್ ಕುಮಾರ್, ನಿತೀಶ್ ರಾಣ ತಲಾ ಎರಡು ವಿಕೆಟ್ ಕಬಳಿಸಿದರೆ ಪಿಯೂಷ್ ಚಾವ್ಲ, ಮಿಚೇಲ್ ಜಾನ್ಸನ್ ಹಾಗೂ ಸುನೀಲ್ ನರೇನ್ ತಾವು ಒಂದೊಂದು ವಿಕೆಟ್ ಪಡೆದರು. ಬೆಂಗಳೂರು ತಂಡ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 18.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಸುನೀಲ್ ನರೇನ್ 5 ಸಿಕ್ಸರ್ 4 ಬೌಂಡರಿ ಸಹಿತ 50 ರನ್ ಗಳಿಸಿ ಔಟಾದ್ರು.ನಿತೀಶ್ ರಾಣ(34) ಹಾಗೂ ದಿನೇಶ್ ಕಾರ್ತಿಕ್(35) ಸೇರಿ ಕೋಲ್ಕಾತ್ತಾ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ರು. ಆರ್ಸಿಬಿ ಬೌಲರ್ ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದು ಮಿಂಚಿದರೆ ಉಮೇಶ್ ಯಾದವ್ 2 ವಿಕೆಟ್ ಉರುಳಿಸಲು ಸಮರ್ಥರಾದರು. ವಾಷಿಂಗ್ಟ್ನ್ ಸುಂದರ್ 1 ವಿಕೆಟ್ ಪಡೆದ್ರು. ರಾಯಲ್ ಚಾಲೆಂಜರ್ಸ್ ಬೆಂಗಳೂರು 176/7 (20.0 ಓವರ್) ಕೋಲ್ಕತ್ತಾ ನೈಟ್ ರೈಡರ್ಸ್ 177/6 (18.5 ಓವರ್)
Recent comments