Skip to main content
ನವೆಂಬರ್ ನಲ್ಲಿ 'ಸರ್ವಂ' ಆರಂಭ

ನವೆಂಬರ್ ನಲ್ಲಿ 'ಸರ್ವಂ' ಆರಂಭ

ನವೆಂಬರ್ ನಲ್ಲಿ 'ಸರ್ವಂ' ಆರಂಭ.

Kannada new film

ಕರುನಾಡಿನಲ್ಲಿ ಕೊರೋನ‌ ಹಾವಳಿ ಕಡಿಮೆಯಾಗುತ್ತಿರುವ ಸೂಚನೆ ಕಾಣಿಸುತ್ತಿದೆ. ಕೆಲವು ತಿಂಗಳಿಂದ ಮಂಕಾಗಿದ್ದ ಸಿನಿರಂಗ ಕೊಂಚ ಚೇತರಿಸಿಕೊಂಡು, ಒಂದರಿಂದ ಒಂದು ಸಿನಿಮಾಗಳು ಆರಂಭವಾಗುತ್ತಿದೆ. ಈ ಸಾಲಿಗೆ 'ಸರ್ವಂ' ಚಿತ್ರ ಕೂಡ ಸೇರ್ಪಡೆಯಾಗಿದೆ. ಲವ್ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ 'ಸರ್ವಂ' ಚಿತ್ರದ ಚಿತ್ರೀಕರಣ ನವೆಂಬರ್ 10 ರಿಂದ ಆರಂಭವಾಗಲಿದೆ. ಶ್ರೀ ಕೃಷ್ಣ ಕಂಬೈನ್ಸ್ ಹಾಗೂ ಉದಯ್ ಆರ್ಟ್ಸ್ ಲಾಂಛನದಲ್ಲಿ ಸುರೇಶ್ ಖನ್ನ ಹಾಗೂ ಕೃಷ್ಣಪ್ಪ ಕೆ.ಎಂ.ದೊಡ್ಡಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಸಹ ನಿರ್ಮಾಪಕರು ಮೊಹಮದ್ ಅಬ್ ಜಲ್ .

Kannada new film

ಜಗ್ಗು ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ರಾಜ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಮೊಂಬತ್ತಿ, ತಮಸ್, ಛಾಯಾ ಮುಂತಾದ ಚಿತ್ರಗಳಲ್ಲಿ ನಟಿಸಿರುವ ರಾಜ್ ಪ್ರಭು ಈಗ ನಿರ್ದೇಶನದತ್ತ ಮುಖಮಾಡಿದ್ದು, 'ಸರ್ವಂ' ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ.‌ ರಾಜ್ ಪ್ರಭು ಆಡ್ ಫಿಲಂ ಮೇಕರ್ ಕೂಡ. ನಿರ್ದೇಶನದೊಂದಿಗೆ ಈ ಚಿತ್ರದ ನಾಯಕರಾಗೂ ರೊಮ್ಯಾಂಟಿಕ್ ಸ್ಟಾರ್ ರಾಜ್ ಪ್ರಭು ನಟಿಸುತ್ತಿದ್ದಾರೆ. ಅಕ್ಷತ ನಾಗರಾಜ್, ದಾರಾ ಶರೀಫ್, ಅಬ್ ಜಲ್(ನಮ್ಮ ಸೂಪರ್ ಸ್ಟಾರ್), ಎಂ.ಡಿ.ಕೌಶಿಕ್, ರಾಜ್ ಉದಯ್, ಜಾಯ್ ಸಿ ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಾಲ್ಕು ಹಾಡುಗಳಿದ್ದು ಕೌಶಿಕ್ ಹರ್ಷ ಸಂಗೀತ ನೀಡುತ್ತಿದ್ದಾರೆ. ಐದು ಸಾಹಸ ಸನ್ನಿವೇಶಗಳಿಗೆ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ದುರ್ಗ ಪ್ರಸಾದ್ ಸಂಕಲನ ಹಾಗೂ ಜಗ್ಗು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಬೆಂಗಳೂರು, ಹಾಸನ ಹಾಗೂ ಮಂಗಳೂರಿನಲ್ಲಿ 'ಸರ್ವಂ' ಚಿತ್ರಕ್ಕೆ 45ದಿನಗಳ ಚಿತ್ರೀಕರಣ ನಡೆಯಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.