ರಾಹುಲ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೇವಿಲ್ಸ್ : ಪಂಜಾಬ್ಗೇ ಗೆಲುವು ತಂದು ಕೊಟ್ಟ ಕನ್ನಡಿಗರು...
ರಾಹುಲ್ ಆರ್ಭಟಕ್ಕೆ ಬೆಚ್ಚಿ ಬಿದ್ದ ಡೇವಿಲ್ಸ್ : ಪಂಜಾಬ್ಗೇ ಗೆಲುವು ತಂದು ಕೊಟ್ಟ ಕನ್ನಡಿಗರು...
11 ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಕನ್ನಡಿಗರಿಬ್ಬರ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ 6 ವಿಕೆಟ್ ಭರ್ಜರಿ ಜಯ ಗೆಲುವು ದಾಖಲಿಸಿತು.. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ನೀಡಿದ 167 ರನ್ಗಳ ಟಾರ್ಗೆಟ್ ಪಡೆದ ಪಂಜಾಬ್ ತಂಡಕ್ಕೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್ಗೆ 58 ರನ್ ಕಲೆ ಹಾಕಿದರು. ಇದರಲ್ಲಿ ಮಯಾಂಕ್ ಕೊಡುಗೆ ಕೇವಲ 7ರನ್. ಉಳಿದ 51 ರನ್ಗಳನ್ನು ಕೆ.ಎಲ್ ರಾಹುಲ್ ಬ್ಯಾಟ್ನಿಂದ ಸಿಡಿದಿದ್ದವು.
ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಅರ್ಧ ಶತಕ....

ಕನ್ನಡಿಗ ಕೆ.ಎಲ್ ರಾಹುಲ್ ಡೇವಿಲ್ಸ್ ವಿರುದ್ಧ ಆರ್ಭಟಿಸಿದ್ದಾರೆ ಕೇವಲ 14 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ಮಿಂಚಿದ್ರು..7 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿ ಸೇರಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಅರ್ಧ ಶತಕವಾಗಿದೆ.. ಮಯಾಂಕ್ ಔಟಾದ ಬಳಿಕ 16 ಎಸೆತಗಳಲ್ಲಿ 51 ರನ್ಗಳಿಸಿದ್ದ ರಾಹುಲ್ 51 ಕೂಡ ಬೇಗನೆ ಔಟಾದರು. ನಂತ ಬಂದ ನಾಯಕ ಯುವರಾಜ್ ಸಿಂಗ್ 22 ಎಸೆತ ಎದುರಿಸಿ ಕೇವಲ 12ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ 33 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿ ಔಟಾದರು.
ಡೇವಿಡ್ ಮಿಲ್ಲರ್ 24 (23 ಎಸೆತ) ಹಾಗೂ ಮಾರ್ಕಸ್ ಸ್ಟೋಯ್ನಿಸ್22 (15 ಎಸೆತ) ಒಂದುಗೂಡಿ 5ನೇ ವಿಕೆಟ್ 29 ರನ್ ಪೇರಿಸಿ ಗೆಲುವಿನ ದಡ ಸೇರಿಸಿದರು. ಡೆಲ್ಲಿ ಡೇರ್ ಡೇವಿಲ್ಸ್ ಪರ ಟ್ರೆಂಟ್ ಬೋಲ್ಟ್, ಡೇನಿಯಲ್ ಕ್ರಿಶ್ಚಿಯನ್, ಕ್ರಿಸ್ ಮೋರಿಸ್, ರಾಹುಲ್ ತೆವಾಟಿಯಾ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿ ಡೆಲ್ಲಿ ಡೇರ್ಡೇವಿಲ್ಸ್ ಗಂಭೀರ್(55), ರಿಷಭ್ ಪಂತ್(28), ಕ್ರಿಸ್ ಮೋರಿಸ್(17) ಅವರ ಉತ್ತಮ ಆಟದ ನೆರವಿನಿಂದ 166 ರನ್ಗಳ ಮೊತ್ತ ಪೇರಿಸಿತ್ತು. ಪಂಜಾಬ್ ಪರ ಮೋಹಿತ್ ಶರ್ಮಾ 2, ಮುಜೀಬ್ 2, ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
Recent comments