Skip to main content
ಹಾಸ್ಯ ಕಲಾವಿದ ಕೆಂಪೇಗೌಡ ನಾಯಕ ನಟನಾಗಿ ಬೆಳ್ಳಿ ತೆರೆ ಮೇಲೆ ಸಿನಿ ರಸಿಕರನ್ನು ರಂಜಿಸಲಿದ್ದಾರೆ.

ಹಾಸ್ಯ ಕಲಾವಿದ ಕೆಂಪೇಗೌಡ ನಾಯಕ ನಟನಾಗಿ ಬೆಳ್ಳಿ ತೆರೆ ಮೇಲೆ ಸಿನಿ ರಸಿಕರನ್ನು ರಂಜಿಸಲಿದ್ದಾರೆ.

ಹಾಸ್ಯ ಕಲಾವಿದ ಕೆಂಪೇಗೌಡ ನಾಯಕ ನಟನಾಗಿ ಬೆಳ್ಳಿ ತೆರೆ ಮೇಲೆ ಸಿನಿ ರಸಿಕರನ್ನು ರಂಜಿಸಲಿದ್ದಾರೆ.

kannada film

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹಾಸ್ಯ ನಟನೆಯ ಮೂಲಕ ಸಿನಿರಸಿಕರನ್ನು ರಂಜಿಸಿಕೊಂಡು ಬಂದಿರುವ ಮಂಡ್ಯಜಿಲ್ಲೆಯ “ ಸಕ್ಕರೆ ನಾಡಿನ ಅಕ್ಕರೆ ಗೆಳೆಯ” ಖ್ಯಾತಿಯ “ಕೆಂಪೆಗೌಡ”ಅವರು ಸುಮಾರು ಒಂದು ದಶಕದಿಂದ “ 89” ಚಿತ್ರಗಳಲ್ಲಿ ಹಲವಾರು ಹಾಸ್ಯ ಹಾಗೂ ಪೋಷಕ ಪಾತ್ರಗಳ ಮೂಲಕ ಅಭಿನಯಿಸಿ ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರರಾದ ನೆಚ್ಚಿನ ಕಲಾವಿದ ಕೆಂಪೇಗೌಡ ತಮ್ಮ ಸಿನಿಮಾಪಯಣದಲ್ಲಿ ಮೊದಲನೇ ಭಾರಿಗೆ 90 ನೇ ಚಿತ್ರವಾದ “ಕಟ್ಲೆ “ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರ ಹೊಮ್ಮಲಿದ್ದಾರೆ. ಈಗಾಗಲೇ ಭರತ್ ಗೌಡ ರವರ ನಿರ್ಮಾಣದಲ್ಲಿ ತಯಾರಾಗುತ್ತಿರುವ “ಕಟ್ಲೆ” ಚಿತ್ರದ ಟೀಸರ್ ಕಳೆದ ತಿಂಗಳು ಬಿಡುಗಡೆಯಾಗಿದ್ದು. ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿರುವ ಕುತೂಹಲ ಭರಿತ ಟೀಸರ್ ನ ವೀಕ್ಷಣೆ ಸುಮಾರು 2 ಲಕ್ಷದತ್ತ ಮುನ್ನುಗ್ಗುತ್ತಿದ್ದು ಟೀಸರ್ ನೋಡಿರುವ ಸಿನಿ ಪ್ರೇಕ್ಷಕರು ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಜೊತೆಗೆ ಒಂದೊಳ್ಳೆ ಸಿನಿಮಾದ ಮೂಲಕ ನಾಯಕ ನಟರಾಗಿ ಪ್ರೇಕ್ಷಕರೆದುರು ಬರುತ್ತಿರುವ ನಟ ಕೆಂಪೇಗೌಡ ರಿಗೆ ಚಿತ್ರರಂಗದಿಂದ ಹಿರಿಯ ನಟರು ,ಸ್ನೇಹಿತರು ವಿಶೇಷವಾಗಿ ನಾಯಕ ನಟ “ದೃವ ಸರ್ಜಾ ಅವರು ಟೀಸರ್ ನೊಡಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.